ಹೊಸಹಳ್ಳಿ ನಾಡಕಛೇರಿಯಲ್ಲಿ ಶ್ರೀ ಸವಿತಾ ಮಹರ್ಷಿ ಜಯಂತಿ…!!!ಹೊಸಹಳ್ಳಿ ನಾಡಕಛೇರಿಯಲ್ಲಿ ಶ್ರೀ ಸವಿತಾ ಮಹರ್ಷಿ ಜಯಂತಿ

ಹೊಸಹಳ್ಳಿ ನಾಡಕಛೇರಿಯಲ್ಲಿ ಶ್ರೀ ಸವಿತಾ ಮಹರ್ಷಿ ಜಯಂತಿ

 

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹೊಸಹಳ್ಳಿಯ ನಾಡಕಚೇರಿಯಲ್ಲಿ ಸವಿತಾ ಸಮಾಜದ ಶ್ರೀ ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತಿಯನ್ನು ಇಂದು ಬೆಳಗ್ಗೆ ಹೊಸಹಳ್ಳಿ ನಾಡಕಚೇರಿಯಲ್ಲಿ ಸರಳವಾಗಿ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಉಪತಹಶೀಲ್ದಾರ್ ಚಂದ್ರಮೋಹನ್ ಮಾತನಾಡಿ ಶಿವನ ದಿವ್ಯದೃಷ್ಟಿಯಲ್ಲಿ ಜನ್ಮತಾಳಿ. ತಾವು ಹೊಂದಿರುವ ಅಪಾರವಾದ ಜ್ಞಾನ ಭಂಡಾರ. ಬ್ರಹ್ಮಜ್ಞಾನ ದಿಂದ ಚತುರ್ವೇದ ಗಳಲ್ಲಿ ಒಂದಾದ ಸಾಮವೇದವನ್ನು ಬರೆದಿರುವ ಶ್ರೀ ಸವಿತಾ ಮಹರ್ಷಿ ಯನ್ನು ಸ್ಮರಿಸಿದರು. ಅವರ ಆದರ್ಶವನ್ನು ನಾಡಿನ
ಸಮಾಜದ ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಸದೃಢ ಭಾರತವನ್ನು ನಿರ್ಮಾಣ ಮಾಡಬಹುದು ಎಂದು ಯುವಜನರಿಗೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಹೊಸಹಳ್ಳಿಯ ಕಂದಾಯ ಪರಿವೀಕ್ಷಕರಾದ ಮುರುಳಿಕೃಷ್ಣ. ಗ್ರಾಮ ಲೆಕ್ಕಾಧಿಕಾರಿ ಮರುಳಸಿದ್ದಪ್ಪ. ಮತ್ತು ಸವಿತಾ ಸಮಾಜದ ಮುಖಂಡರಾದ ಅಂಜಿನಪ್ಪ ಕುಂಬಳಗುಂಟೆ. ಕೃಷ್ಣಮೂರ್ತಿ. ಶಾಂತಕುಮಾರ್. ಆನಂದ .ಸಂತೋಷ. ನಾಗೇಶ್. ಶ್ರೀನರಸಿಂಹ .ಗೋವಿಂದಪ್ಪ. ತಿಪ್ಪೇಸ್ವಾಮಿ. ಅಶೋಕ. ಅಜಯ್. ರಾಜು. ಮಹಾಂತೇಶ್. ಮತ್ತು ಯುವ ಮುಖಂಡರಾದ ಕುಲುಮೆ ಹಟ್ಟಿ ವೆಂಕಟೇಶ್. ವೀರೇಶ್ ಕಿಟ್ಟಪ್ಪ ನವರು. ಅಮಲಾಪುರದ ಅಂಜಿನಪ್ಪ. ಗ್ರಾಮ ಪಂಚಾಯಿತಿ ಸದಸ್ಯರಾದ ಹೊನ್ನೂರ್ ಸ್ವಾಮಿ. ನಾಡಕಛೇರಿ ವಿಷಯ ನಿರ್ವಾಹಕರಾದ ಅನಿತಾ ಪೂಜಾರ್. ಕಂಪ್ಯೂಟರ್ ಆಪರೇಟರ್ ಗಳಾದ ಮಂಜುನಾಥ್. ಸಿದ್ದೇಶ್. ರಮೇಶ್ .ಸೇರಿ ಸಾರ್ವಜನಿಕರು ಹಾಗೂ ಸವಿತಾ ಸಮಾಜದ ಮುಖಂಡರು ಮತ್ತು ಯುವಕರು ಉಪಸ್ಥಿತರಿದ್ದರು..

ವರದಿ. ವಿರೇಶ್, ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend