ಮಡಿವಾಳ ಮಾಚಿದೇವರ ಜಯಂತಿ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಕಾನಮಡುಗು ಗ್ರಾಮದಲ್ಲಿ ಮಂಗಳವಾರ ನಡೆದ ಮಡಿವಾಳ ಮಾಚಿದೇವ ಜಯಂತೋತ್ಸವ ಉದ್ಘಾಟಿಸಿ ಅರಳು ಅಶೋಕ್ ರವರು ಮಾತನಾಡಿ ಮಡಿವಾಳರ ಜನಾಂಗವನ್ನು ರಾಷ್ಟ್ರದ ಇತರ 17 ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿಸಿ ರುವಂತೆ ನಮ್ಮ ರಾಜ್ಯದಲ್ಲಿಯೂ ಸಹ ಮೈಸೂರು ವಿಶ್ವವಿದ್ಯಾನಿಲಯದ ಪ್ರೊಫೆಸರ್ ಅನ್ನಪೂರ್ಣರವರ ವರದಿಯ ಅನುಸಾರ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದರು. ಮತ್ತು ವಿವಿಧ ಹಿಂದುಳಿದ ಜಾತಿ ಗಳಿಗಾಗಿ ಸ್ಥಾಪಿಸಿರುವ ನಿಗಮ ಮಂಡಳಿ ಗಳಂತೆ ಕರ್ನಾಟಕ ರಾಜ್ಯ ಮಡಿವಾಳ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಮಡಿವಾಳ ಸಂಘದ ಪ್ರಧಾನ ಕಾರ್ಯದರ್ಶಿ ಬಿ ರಮೇಶ್ ಮಾತನಾಡಿ ಮಡಿವಾಳ ಮಾಚಿದೇವರ ಕುರಿತು ಜೀವನ ಚರಿತ್ರೆ ಬಗ್ಗೆ ಸ್ವ ವಿವರವಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಸಾನಿಧ್ಯ ವಹಿಸಿದ್ದ ಶ್ರೀ ದಾ.ಮ.ಶರಣಾರ್ಯರು ದಾಸೋಹ ಮಠ ಕಾನಾಮಡುಗು. ಇದೇ ಇದೇ ಸಂದರ್ಭದಲ್ಲಿ ಮಡಿವಾಳ ಸಂಘ ಜಗಳೂರಿನ ಅಧ್ಯಕ್ಷರಾದ ರೇವಣಸಿದ್ದಪ್ಪ. ಬಿ ಚೆನ್ನಪ್ಪ. ಹುಲಿಕೆರೆ ವೆಂಕಟೇಶ್. ಸುಭಾಷ್ ಚಂದ್ರ. ಸುಭಾಶ್ಚಂದ್ರ ಪ್ರಾಂಶುಪಾಲರು. ಶರಣಪ್ಪ. ಗಿರಿಜಮ್ಮ. ರೇಖಾ. ಈಜಿ ಸೋಮಶೇಖರ್. ಕೆಎಂ ಚಿದಾನಂದಪ್ಪ. ಶರಣಪ್ಪ .ತಿಪ್ಪೇಸ್ವಾಮಿ. ಹಾಗೂ ಮಡಿವಾಳ ಸಮುದಾಯದ ಮುಖಂಡರು ಯುವಕರು ಹಾಗೂ ಮಹಿಳೆಯರು ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.
ಮಡಿವಾಳ ಮಾಚಿದೇವರ ಜಯಂತೋತ್ಸವದ ನಿಮಿತ್ತ ಪ್ರಮುಖ ಬೀದಿಗಳಲ್ಲಿ ಭಾವಚಿತ್ರ ಮೆರವಣಿಗೆ ನಡೆಯಿತು…

ವರದಿ. ವಿರೇಶ್, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
