;

ಶಾಸಕ ವೆಂಕಟರಾವ್ ನಾಡಗೌಡರಿಂದ ಅಮೃತ ಗ್ರಾಮೀಣ ವಸತಿ ಯೋಜನೆಗೆ ಚಾಲನೆ …!!!

ಶಾಸಕ ವೆಂಕಟರಾವ್ ನಾಡಗೌಡರಿಂದ ಅಮೃತ ಗ್ರಾಮೀಣ ವಸತಿ ಯೋಜನೆಗೆ ಚಾಲನೆ .

ಸಿಂಧನೂರು : ಅಮೃತ ಗ್ರಾಮೀಣ ವಸತಿ ಯೋಜನೆ ಜಾರಿಗೆ ತಂದಿದ್ದು ಗುಡಿಸಲು ಮುಕ್ತ ಗ್ರಾಮಗಳನ್ನು ಮಾಡಲು ಸಹಕಾರಿಯಾಗಿದೆ ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.

ತಾಲೂಕಿನ ಗೋರೆಬಾಳ ಗ್ರಾಮದಲ್ಲಿ ಅಮೃತ ಗ್ರಾಮೀಣ ವಸತಿ ಯೋಜನೆ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದ ಅವರು ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ರಾಜ್ಯ ಸರ್ಕಾರ ಅಮೃತ ವಸತಿ ಯೋಜನೆ ಜಾರಿಗೆ ತಂದಿದೆ. ವಸತಿ, ನಿವೇಶನ ರಹಿತ ಮತ್ತು ಅರ್ಹ ಫಲಾನುಭವಿಗಳಿಗೆ ಹಾಗೂ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ ಈ ಯೋಜನೆ ತಲುಪಬೇಕು. ವಸತಿ ರಹಿತರಿಗೆ, ನಿವೇಶನ ರಹಿತರಿಗೆ ಸೂರು ಕಲ್ಪಿಸುವ ಉದೇಶ ಉತ್ತಮವಾಗಿದೆ. ಸಿಂಧನೂರು ವಿಧಾನ ಸಭೆ ಕ್ಷೇತ್ರದಿಂದ ಜವಳಗೆರಾ, ದೇವರಗುಡಿ, ಗೋರೆಬಾಳ, ಗೋನವಾರ ಈ ನಾಲ್ಕು ಗ್ರಾಮಪಂಚಾಯತಿ ಆಯ್ಕೆ ಮಾಡಲಾಗಿದೆ.

ಗ್ರಾಮ ಪಂಚಾಯತ್ ಸದಸ್ಯರು ಮತ್ತು ಅಧಿಕಾರಿಗಳು ಮನೆ, ವಸತಿ ರಹಿತರನ್ನು ಗುರುತಿಸಿ ಸೂರು ಕಲ್ಪಿಸುವ ಕೆಲಸ ಮಾಡಿ ಗುಡಿಸಲು ಮುಕ್ತ ಗ್ರಾ.ಪಂ ಮಾಡಬೇಕು.ಯಾವುದೇ ಒತ್ತಡಕ್ಕೆ ಮಣಿಯದೆ ಅರ್ಹ ಫಲಾನುಭವಿಗಳಿಗೆ ಆದ್ಯತೆ ನೀಡಿದರೆ ಪೂರ್ಣವಾಗುತ್ತವೆ. ದಾಖಲಾತಿಗಳನ್ನು ಸರಿಯಾಗಿ ಪರಿಶೀಲಿಸಿ ಮನೆಗಳನ್ನು ಹಂಚಿಕೆ ಮಾಡಿ ಇಲ್ಲದಿದ್ದರೆ ಮನೆಗಳು ವಾಪಸ್ಸಾಗುತ್ತವೆ. ಇನ್ನುಳಿದ ಗ್ರಾಮ ಪಂಚಾಯತಿಗಳಿಗೆ 30,40,50, ಮನೆಗಳು ಮಂಜೂರುರಾಗಿವೆ. ಮನೆಗಳೂ 1ಲಕ್ಷ 20 ಸಾವಿರ ಮತ್ತು ಎಸ್ಸಿ./ಎಸ್ಟಿ ಯವರಿಗೆ 1ಲಕ್ಷ 50 ಸಾವಿರ ಇದೆ. ಈ ಹಣದಲ್ಲಿ ಮನೆ ಕಟ್ಟಲು ಸಾದ್ಯವಿಲ್ಲ. ಅದರಿಂದ ಮುಂದಿನ ಅಧಿವೇಶನದಲ್ಲಿ ಹೆಚ್ಚಿಗೆ ಮಾಡಲು ಮತ್ತು ಬ್ಯಾಂಕುಗಳಿಂದ ಸಾಲ ನೀಡಲು ಸರ್ಕಾರಕ್ಕೆ ಒತ್ತಾಯಿಸುವೆ ಎಂದು ಮಾತನಾಡಿದರು.

ಮಾಜಿ ಸಚಿವರು ಹಾಗೂ ಜನಪ್ರಿಯ ಶಾಸಕರಾದ ವೆಂಕಟರಾವ್ ನಾಡಗೌಡ ಅವರು ಮಂಗಳವಾರ ದಂದು ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ವಿವಿಧ ಗ್ರಾಮಗಳ ಉದ್ಘಾಟನೆ : ಗೊರೇಬಾಳ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ 200.00 ಲಕ್ಷ ಗಳಲ್ಲಿ ನಿರ್ಮಾಣಗೊಂಡ ಬ್ರಿಡ್ಜ್ ಉದ್ಘಾಟನೆ ಶ್ರೀ ಶರಣ ಬಸವೇಶ್ವರ ದೇವಸ್ಥಾನದಲ್ಲಿ ಅಮೃತ ಗ್ರಾಮೀಣ ವಸತಿ ಯೋಜನೆ, ಶಾಂತಿನಗರ (ಹಂಚಿನಾಳ ಕ್ಯಾಂಪ್) ಗ್ರಾಮದಲ್ಲಿ
ಲೋಕೋಪಯೋಗಿ ಇಲಾಖೆ ವತಿಯಿಂದ ನಬಾರ್ಡ್ ಆರ್ ಐ ಡಿ ಎಫ್-25 ಯೋಜನೆ ಅಡಿಯಲ್ಲಿ 36.00 ಲಕ್ಷ ರೂಗಳ ವೆಚ್ಚದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 3 ಕೊಠಡಿ, ಲೋಕೋಪಯೋಗಿ ಇಲಾಖೆ ವತಿಯಿಂದ ನಬಾರ್ಡ್ ಆರ್ ಐ ಡಿ ಎಫ್-25 ಯೋಜನೆ ಅಡಿಯಲ್ಲಿ 36.00 ಲಕ್ಷ ರೂಗಳ ವೆಚ್ಚದಲ್ಲಿ ಸರಕಾರಿ ಪ್ರೌಢ ಶಾಲೆ 3 ಕೊಠಡಿ ಉದ್ಘಾಟನೆ ನೆರವೇರಿಸಿದರು.

ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷೀಬಾಯಿ ಅವರು ಮಾತನಾಡಿ, ಅಮೃತ ವಸತಿ ಯೋಜನೆ ಅಡಿಯಲ್ಲಿ ಈ ಪಂಚಾಯತ್ ವ್ಯಾಪ್ತಿಯಲ್ಲಿ 2800 ಜನ ವಸತಿ ರಹಿತರು ಅರ್ಹರರಿದ್ದಾರೆ. ಯಾರು ವಸತಿಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಈ ಒಂದು ವಿನೂತನ ಯೋಜನೆಯನ್ನು ತಂದಿದೆ ಎಂದು ಮಾತನಾಡಿದರು. ಗ್ರಾಮದ ಮುಖಂಡರು ಚಲುವಾದಿ ಓಣಿಯಲ್ಲಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಹಣ ಬಿಡುಗಡೆಗೆ ಮನವಿ ಮಾಡಿದರು. ಶಾಸಕರ ಅನುದಾನ ಅಥವಾ ಮುಜರಾಯಿ ಇಲಾಖೆಯಿಂದ ಮಂಜೂರು ಮಾಡಿಕೊಡುವ ಭರವಸೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ನೀರಾವರಿ ಇಲಾಖೆ ಅಧಿಕಾರಿಗಳು, ಗೊರೆಬಾಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಮೀಳಾ, ದೇವಪ್ಪ ಉಪಾಧ್ಯಕ್ಷರು,ಆರ್ ಪಾಲಕ್ಷಗೌಡ, ಮಲ್ಲಿಕಾರ್ಜುನ್ ಬೆಳಗುರ್ಕಿ,ಲಗುಮಪ್ಪ ಗೋರೆಬಾಳ, ಸುಬ್ಬರಾವ್, ಅಂಬಮ್ಮ ಹಿರೇಮಠ, ಗುರುರಾಜ ತಾ.ಪಂ.ಸ, ಜಿ.ಸತ್ರನಾರಾಯಣ,
ಗ್ರಾ.ಪಂ.ಸದಸ್ಯರು.ಗ್ರಾ. ಪಂ. ಅಭಿವೃದ್ಧಿ ಅಧಿಕಾರಿಗಳಾದ ಮುದುಕಪ್ಪ, ಆರ್. ಬಸನಗೌಡ ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸಂಭಂದಪಟ್ಟ ಇಲಾಖೆಯ ಅಧಿಕಾರಿಗಳು, ಜೆಡಿಎಸ್ ಪಕ್ಷದ ಹಿರಿಯ ಮತ್ತು ಯುವ ಮುಖಂಡರು ಹಾಗೂ ಕಾರ್ಯಕರ್ತರು ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೋಳಿಸಿದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;