;

ವಿಧ್ಯಾರ್ಥಿ ಪರಿಷತ್ ನೂತನ ಜಿಲ್ಲಾ ಘಟಕ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ…!!!

ಹೊಸಪೇಟೆ. ಫೆ, 06 : ನಗರದ ಎಸ್ ಎಲ್ ಚೌಕಿ ಅಂಬೇಡ್ಕರ್ ಭವನದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ವಿಜಯನಗರ ಜಿಲ್ಲಾ ಘಟಕ ಉದ್ಘಾಟನಾ ಸಮಾರಂಭವು
ವಿಧ್ಯಾರ್ಥಿ ಪರಿಷತ್ ನೂತನ ಜಿಲ್ಲಾ ಘಟಕ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ

ಸ್ಥಳೀಯ ಪ್ರಗತಿಪರ ಸಂಘಟನೆಗಳ ಮುಖಂಡರ ಹಾಗೂ ವಿಧ್ಯಾರ್ಥಿ ಮಿತ್ರರ ಸಮ್ಮುಖದಲ್ಲಿ ನೆರವೇರಿತು.

ಕಾರ್ಯಕ್ರಮವನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದ ಪರಿಷತ್ ನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀನಾಥ್ ಪೂಜಾರಿ, ಸಂಘಟನೆ ಕಟ್ಟುವುದು ಎಷ್ಟು ಮುಖ್ಯವೂ ಅಷ್ಟೇ ಮುಖ್ಯ ನಮ್ಮ ವಿಧ್ಯಾರ್ಥಿಗಳು ಶಿಕ್ಷಣ ಪಡೆದು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಬೆಳೆಯಬೇಕಿದೆ ಎಂದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹೋರಾಟಗಾರ ಶಬ್ಬಿರ್ ಎಚ್ ಮಾತನಾಡುತ್ತ, ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ವಿಧ್ಯಾರ್ಥಿಗಳು ಸಮಯಕ್ಕೆ ತಕ್ಕಂತೆ ಶಿಕ್ಷಣ ಪಡೆಯುವುದು ಅಗತ್ಯವಾಗಿದೆ ಮತ್ತು ವಿಧ್ಯಾರ್ಥಿಗಳು ಕೇವಲ ಓದುವುದೆ ತಮ್ಮ ಜವಾಬ್ದಾರಿ ಎಂದು ಭಾವಿಸದೆ ಸಂಘಟನೆ ಮೂಲಕ ತಮ್ಮ ನಾಯಕತ್ವವನ್ನು ಅಭಿವೃದ್ಧಿಗೊಳ್ಳಿಸಿಕೊಂಡು ಸಮುದಾಯದ ಧ್ವನಿ ಆಗಬೇಕಿದೆ ಎಂದರು.

ಎಸ್. ಡಿ.ಪಿ.ಐ ಜಿಲ್ಲಾಧ್ಯಕ್ಷ ವಲಿಬಾ ಬಾಷ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಸಮುದಾಯದ ಆಶಾಕಿರಣಗಳಾಗಿದ್ದಾರೆ. ಅಂಬೇಡ್ಕರ್ ವಿಚಾರಧಾರೆ ತಿಳಿಸಿಕೊಂಡು ಅವರ ಮಾರ್ಗ ಮೇಲೆ ನಡೆಯಬೇಕು ಮತ್ತು ದುಶ್ಚಟಗಳಿಂದ ದೂರು ಉಳಿದು ತಮ್ಮ ಜೀವನವನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಸಾಗಬೇಕೆಂದು ಹೇಳಿದರು.

ಇದೇ ವೇಳೆ ಉಪನ್ಯಾಸಕಿಯಾಗಿ ಆಗಮಿಸಿದ ಶಿಕ್ಷಕಿ ಶೈಲಜಾ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಅತಿ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಮೂಲಕ ಉನ್ನತ ಸ್ಥಾನಕ್ಕೆ ಏರಲು ಸಾಧ್ಯ. ಇದಕ್ಕೆ ಶಿಕ್ಷಣವೇ ಪ್ರಮುಖವಾಗಿ ಅಸ್ತ್ರವಾಗಿದೆ. ಶಿಕ್ಷಣದಿಂದಲ್ಲೆ ನಮ್ಮಗೆ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಎಲ್. ಶಾರದಾ, ಹರಪನಹಳ್ಳಿ ತಾಲ್ಲೂಕು ಸಂಚಾಲಕರಾಗಿ ಪ್ರತಾಪ್ ಛಲವಾದಿ, ಕೊಟ್ಟೂರು ತಾಲ್ಲೂಕ ಸಂಚಾಲಕರನ್ನಾಗಿ ಶಿವಕುಮಾರ್ ಹಾಗೂ ತಂಬ್ರಹಳ್ಳಿ ಹೋಬಳಿ ಘಟಕಕ್ಕೆ ದಾದಾ ಖಲಂದರ್ ಅವರನ್ನು ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು.

ಈ ವೇಳೆ ದಲಿತ ವಿದ್ಯಾರ್ಥಿ ರಾಜ್ಯ ಸಂಚಾಲಕರಾದ ಬಾಲಾಜಿ ಎಂ ಕಾಂಬಳೆ, ಬಳ್ಳಾರಿ ಜಿಲ್ಲಾ ಸಂಚಾಲಕರಾದ ರಾಜೇಂದ್ರ ವರ್ಮಾ, ಎಸ್ ಡಿ.ಪಿ.ಐ ಜಿಲ್ಲಾಧ್ಯಕ್ಷ ಉಪಾಧ್ಯಕ್ಷ ಹಾಗೂ ವಿಜಯಪುರ ನಗರ ಘಟಕದ ಸಂಚಾಲಕರಾದ ಆನಂದ್ ಮದ್ದೂರು ಹಾಗೂ ವಿಜಯನಗರ ಜಿಲ್ಲಾ ಸಂಚಾಲಕರಾದ ಹನುಮೇಶ್ ಉಪಸ್ಥಿತರಿದ್ದರು.

ವರದಿ. ಗಣೇಶ್, ಬಿ, ಹೊಸಪೇಟೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;