ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು.
ಎಂ.ಬಿ.ಆಯ್ಯನಹಳ್ಳಿ ಗ್ರಾಮದಲ್ಲಿ ದೇಶಪ್ರೇಮಿ “ಭಗತ್ ಸಿಂಗ್” ಗ್ರಾಮಾಭಿವೃದ್ಧಿ ಸಂಘ ಉದ್ಘಾಟನೆ
ಎಂ.ಬಿ ಅಯ್ಯನಹಳ್ಳಿ:- ಕೂಡ್ಲಿಗಿ ತಾಲೂಕಿನ ಎಂ.ಬಿ ಅಯ್ಯನಹಳ್ಳಿ ಗ್ರಾಮದಲ್ಲಿ ದೇಶಪ್ರೇಮಿ ಭಗತ್ ಸಿಂಗ್ ಗ್ರಾಮಾಭಿವೃದ್ಧಿ ಸಂಘ ವನ್ನು ಉದ್ಘಾಟಿಸಲಾಯಿತು. ನಂತರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಕಾರ್ಯದರ್ಶಿ ಖಜಾಂಚಿ ಹಾಗೂ ಭಗತ್ ಸಿಂಗ್ ಸಂಘದ ಸದಸ್ಯರನ್ನು ಆಯ್ಕೆ ಮಾಡಲಾಯಿತು. ದೇಶಪ್ರೇಮಿ ಭಗತ್ ಸಿಂಗ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಿವೈ ಎಫ್ ಐ ತಾಲೂಕು ಸಂಚಾಲಕರಾದ ತುಂಬರಗುದ್ದಿ ಚಂದ್ರಪ್ಪ ಭಾಗವಹಿಸಿ ಮಾತನಾಡಿ ಭಗತ್ ಸಿಂಗ್ ಅವರ ನೆನಪಿಗೆ ವೇದಿಕೆಯನ್ನು ಹಮ್ಮಿಕೊಂಡಿರುವುದು ನಮಗೆ ಬಹಳ ಹೆಮ್ಮೆಯೆನಿಸುತ್ತದೆ. ಗ್ರಾಮದ ಯುವ ಜನತೆಗೆ ಒಂದು ವೇದಿಕೆ ಆಶಾದಾಯಕವಾಗಿದೆ. ಕೂಲಿ ಕಾರ್ಮಿಕರು ರೈತರು ವಿಮುಕ್ತಿ ಗೊಳ್ಳಬೇಕು ನಾವುಗಳು ಸ್ವತಂತ್ರವಾಗಿ ಜೀವಿಸಬೇಕು. ಗ್ರಾಮದ ಅಭಿವೃದ್ಧಿಗಾಗಿ ಹೋರಾಟ ಮಾಡಬೇಕು ಎಂದು ಹೇಳಿದರು. ನಂತರ ಸಂಘದ ಅಧ್ಯಕ್ಷರಾದ ಬಿ ಬಸವರಾಜ್ ಗೌಡ ರವರು ಮಾತನಾಡಿ ಭಗತ್ ಸಿಂಗ್ ರ ಆಶಯಗಳನ್ನು ಪಾಲಿಸುತ್ತಿರುವ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ( ಡಿವೈಎಫ್ಐ) ಸಂಘಟನೆಯು ದೇಶಾದ್ಯಂತ ಸರ್ವರಿಗೆ ಶಿಕ್ಷಣ. ಉದ್ಯೋಗಖಾಸಗೀಕರಣ ಉದಾರೀಕರಣ ಜಾಗತೀಕರಣಗಳ ವಿರುದ್ಧ ಹೋರಾಟವನ್ನು ನಡೆಸುತ್ತಿದೆ. ಭ್ರಷ್ಟಾಚಾರಗಳನ್ನು ತಡೆಗಟ್ಟಿ ಕನಿಷ್ಠ ಕೂಲಿ ಜಾರಿ ಮಾಡಿ. ಡೊನೇಶನ್ ಹಾವಳಿ ತಡೆಗಟ್ಟಿ ಉಚಿತ ಶಿಕ್ಷಣವನ್ನು ಜಾರಿಗೊಳಿಸಿ. ಬೆಲೆ ಏರಿಕೆಯನ್ನು ತಡೆಗಟ್ಟಿ. ರೇಷನ್ ವ್ಯವಸ್ಥೆಯನ್ನು ಬಲಗೊಳಿಸಬೇಕು ಜೀವನಕ್ಕೆ ಅವಶ್ಯಕವಾಗಿರುವ ಎಲ್ಲಾ ವಸ್ತುಗಳನ್ನು ರೇಷನ್ ಮೂಲಕವೇ ನೀಡಬೇಕು, ಎಂಬ ಹಲವು ಸಮಸ್ಯೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ಸಂಘಟನೇ ನಮ್ಮದಾಗಿದೆ. ಕಾರಣ ದೇಶಪ್ರೇಮಿ ಭಗತ್ ಸಿಂಗ್ ಸಂಘದ ಸದಸ್ಯರುಗಳು ಪದಾಧಿಕಾರಿಗಳು ಎಲ್ಲರೂ ಪ್ರಾಮಾಣಿಕ ನಿಷ್ಠೆಯಿಂದ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋಗೋಣ ಎಂದು ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಜಿ. ಬಸವರಾಜ ಗೌಡರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ತಾಲೂಕು ಸಂಚಾಲಕ ಬಿಟಿ ಗುದ್ದಿ ಚಂದ್ರಪ್ಪ. ಸಂಘದ ಅಧ್ಯಕ್ಷರಾದ ಜಿ ಬಸವರಾಜ ಗೌಡ. ಉಪಾಧ್ಯಕ್ಷರಾದ ಕೆ ಪಾಪಜ್ಜ ರ ನಾಗಣ್ಣ. ಕಾರ್ಯದರ್ಶಿ ಮಂಜುನಾಥ್. ಖಜಾಂಚಿ ಪಿ ಮಂಜುನಾಥ್. ಸಂಘದ ಸರ್ವ ಸದಸ್ಯರು ಪದಾಧಿಕಾರಿಗಳು. ಗ್ರಾಮದ ಯುವಕರುಮುಖಂಡರು ಸಾರ್ವಜನಿಕರು ಉಪಸ್ಥಿತರಿದ್ದರು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
