;

ಮಾನ್ವಿ : ಸಂವಿಧಾನ ರಕ್ಷಣಾ ಸಮಿತಿ ಹೋರಾಟಗಾರರಿಂದ ಮಾನವಿ ಬಂದ್ ಕರೆ ಸಂಪೂರ್ಣ ಯಶಸ್ವಿ…!!!

ಮಾನ್ವಿ : ಸಂವಿಧಾನ ರಕ್ಷಣಾ ಸಮಿತಿ ಹೋರಾಟಗಾರರಿಂದ ಮಾನವಿ ಬಂದ್ ಕರೆ ಸಂಪೂರ್ಣ ಯಶಸ್ವಿ.

ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ ರಾಯಚೂರು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ರವರನ್ನು ನ್ಯಾಯಾದೀಶ ಸ್ಥಾನದಿಂದ ಕೂಡಲೇ ವಜಾ ಮಾಡುವಂತೆ ಒತ್ತಾಯಿಸಿ, ಇಂದು ಕರೆಯಲಾಗಿದ್ದ ಮಾನವಿ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.

ಜನೆವರಿ 26 ರಂದು
ನಡೆಯಲಿರುವ ಗಣರಾಜ್ಯೋತ್ಸವದ ಧ್ವಜಾರೋಹಣ
ಕಾರ್ಯಕ್ರಮದಲ್ಲಿ ಜಿಲ್ಲಾ ಸತ್ರ ನ್ಯಾಯಾಧೀಶರು ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರವನ್ನು ತೆಗೆದರೆ ಮಾತ್ರ ಧ್ವಜಾರೋಹಣ ಮಾಡುವುದಾಗಿ ಹೇಳಿ ಅಂಬೇಡ್ಕರ್ ಭಾವಚಿತ್ರವನ್ನು ತೆಗೆದು ಇಡುವಂತೆ ಹೇಳಿದ್ದು ದೇಶದ ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿದ್ದಲ್ಲದೇ ದೇಶಕ್ಕೆ ಮಾಡಿದ ಅವಮಾನ.
ರಾಯಚೂರು- ಬೆಂಗಳೂರು ರಾಜ್ಯ- ಹೆದ್ದಾರಿ-23ನ್ನು
ಬಂದ್ ಮಾಡಿದ ಪ್ರತಿಭಟನಕಾರರು ಸರ್ಕಾರದ ವಿರುದ್ಧ ಜಿಲ್ಲಾ ನ್ಯಾಯಾಧೀಶ
ಮಲ್ಲಿಕಾರ್ಜುನಗೌಡ ಅವರ ವಿರುದ್ಧ ಸಂವಿಧಾನ ವಿರೋಧಿಗಳ ವಿರುದ್ಧ ಧಿಕ್ಕಾರ ಕೂಗಿದರು.

ಬಸವ ವೃತ್ತದ ಮುಂದೆ ಶಾಮಿಯಾನ ಹಾಕಿ ಹೋರಾಟ ಮಾಡಿದ ಎಲ್ಲಾ ಸಂಘಟಕರು ಟೈರಿಗೆ ಬೆಂಕಿ ಹಚ್ಚಿ ನ್ಯಾಯದೀಶರ ಭಾವಚಿತ್ರ ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ರವಿಕುಮಾರ ಪಿ.ವಕೀಲರು ಮಾತನಾಡಿ ,ಓಬಿಸಿಗಳಿಗೆ ಮೀಸಲಾತಿ ನೀಡಿದ್ದೇ ಆದರೇ ದಲಿತರ ಗುಡಿಸಲುಗಳಿಗೆ ಎಂದು ಸರ್ಧಾರ ವಲ್ಲಬಾಯಿ ಪಟೇಲರು ಹೇಳುತ್ತಾರೆ.ಆದರೇ ಅಂಬೇಡ್ಕರ್ ಅವರು ಓಬಿಸಿ ಗಳಿಗೂ ಮೀಸಲಾತಿ ಕೊಟ್ಟೆ ಕೊಡುತ್ತೆನೆಂದು ಮಿಸಲಾತಿ ಕೊಡುತ್ತಾರೆ.ಇದು ಅಂಬೇಡ್ಕರ್ ಅವರ ಸಮಾನತೆಯ ಗುಣವಾಗಿದೆ ಎಂದರು.

ವಿಶ್ವದ ದೊಡ್ಡಣ್ಣ ಎಂದು ಕರೆಯಲ್ಪಡುವಅಮೆರಿಕದಂತಹ ದೇಶದ ಕೊಲಂಬಿಯಾದ ವಿಶ್ವವಿದ್ಯಾಲಯದ ಮುಂದೆ ವಿಶ್ವದ ಜ್ಞಾನದ ಸಂಕೇತವಾಗಿ ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣ ಮಾಡಲಾಗಿದೆ. ಜಾಗತಿಕ ಮಟ್ಟದಲ್ಲಿ ನಾಯಕನಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಮಾದರಿಯಾಗಿದ್ದಾರೆ.ಆದರೆ ಜಿಲ್ಲಾ ನ್ಯಾಯಾಧೀಶ ‌ಸಂವಿಧಾನವನ್ನು ಸರಿಯಾಗಿ ಓದಿಕೊಂಡಿಲ್ಲ ಸಂವಿಧಾನ ಭಾವಚಿತ್ರಕ್ಕೆ ಅವಮಾನ ಮಾಡಿದ್ದು ಕೂಡಲೇ ಸ್ವಯಂ ಪ್ರೇರಿತವಾಗಿ ನ್ಯಾಯಾಧೀಶ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು, ಅಂಬೇಡ್ಕರ್ ಅವರು ಸತತ 2 ವರ್ಷ 11 ತಿಂಗಳು 18 ದಿನಗಳ ಕಾಲ ನಿರಂತರ ಪರಿಶ್ರಮ ಪಟ್ಟಿದ್ದಾರೆ .ಅದರಲ್ಲಿ ಅರ್ಧಗಂಟೆ ಕಾಲ ನಿಮ್ಮ ಮನುವಾದಿಗಳು ಸಂವಿಧಾನ ರಚನೆಯಲ್ಲಿ ಯಾವುದೇ ಶ್ರಮ ಪಟ್ಟಿಲ್ಲ ಅಂಬೇಡ್ಕರ್ ಅವರು 1 ಲಕ್ಷ 17 ಸಾವಿರದ 363 ಮೂಲ ಶಬ್ದಗಳನ್ನು ಬರೆದಿದ್ದಾರೆ ಎಂದರು.

ಯುವ ಹೋರಾಟಗಾರ ಜಿಶನ್ ಮಾತನಾಡಿ ಜಿಲ್ಲಾ ಸತ್ರ ನ್ಯಾಯಾಧೀಶರು ಜನವರಿ 26 ರಂದು ಕೇವಲ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿಲ್ಲ ಭಾರತದ ಎಲ್ಲಾ ಸಮುದಾಯಗಳಿಗೆ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ.ಆಳುವ ಸರ್ಕಾರಗಳು ಸಹ ಇಂತಹ ಅವಮಾನಗಳಿಗೆ ಬೆಂಬಲ ಮಾಡುತ್ತಿವೆ.ರಾಜ್ಯ ಸರ್ಕಾರ ನಮ್ಮ ಭಾಗದಲ್ಲಿ ಇರುವಂತಹ ಹಂಪಿ ಕನ್ನಡ ವಿಶ್ವವಿದ್ಯಾಲಯ ಮುಚ್ಚುವಂತಹ ಸಂದರ್ಭ ಬಂದಿದೆ.ಜಗತ್ತಿನಲ್ಲಿರುವ ಏಕೈಕ ಕನ್ನಡ ವಿಶ್ವವಿದ್ಯಾಲಯ ಇದಾಗಿದ್ದು .ವಿಶ್ವವಿದ್ಯಾಲಯದವರು ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ ಎಂಬ ಕಾರಣಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆಅನುದಾನ ನೀಡುತ್ತಿಲ್ಲ.ಬೆಂಗಳೂರಿನಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಮಾಡಲು 312 ಕೋಟಿ ಅನುದಾನ ನೀಡಿ ಸಂಸ್ಕೃತ ವಿಶ್ವವಿದ್ಯಾಲಯ ಮಾಡುತ್ತಿದ್ದಾರೆ. ಈ ಸರ್ಕಾರ ಕನ್ನಡಕ್ಕೆ ದ್ರೋಹ ಮಾಡುತ್ತಿದೆ ಎಂದರು.ಸಂವಿಧಾನದ ಮೂಲ ಸಿದ್ಧಾಂತ ಏನಾಗಿದೆ ಅದನ್ನು ಹಾಗೆಯೇ ಇರಬೇಕು.ಇಡಿ ಸರ್ಕಾರಿ ಇಲಾಖೆಗಳನ್ನು, ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಮೂಲಕ ಮೀಸಲಾತಿಯನ್ನು ಹೊಡೆದುಹಾಕಿ ಈ ದೇಶದ ಹಿಂದುಳಿದವರನ್ನು ಅಲ್ಪಸಂಖ್ಯಾತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದರು.

ಜೆಡಿಎಸ್ ಯುವ ಘಟಕ ಉಪಾಧ್ಯಕ್ಷರಾದ ರಾಜಾರಾಮಚಂದ್ರ ನಾಯಕ ಮಾತನಾಡಿ ,ಮಾನವಿ ನಮ್ಮ ಜನಪ್ರಿಯ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅವರು ಬೆಂಗಳೂರಿನಲ್ಲಿ ತಮ್ಮ ಕಾರ್ಯ ನಿಮಿತ್ತ ಇರುವುದರಿಂದ ಈ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ಸೂಚಿಸಿದ್ದಾರೆ ಎಂದರು. ವಿಶ್ವವೇ ಅಂಬೇಡ್ಕರ್ ಬರೆದ ಸಂವಿಧಾನವನ್ನುಗೌರವಿಸುತ್ತದೆ.‌ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶದ ಮಹಾನ್ ವ್ಯಕ್ತಿ ಸಮಾನತೆ ಸಾರಿದ ಮಹಾನ್ ವ್ಯಕ್ತಿ ಅಂಬೇಡ್ಕರ್ ಆಗಿದ್ದಾರೆ. ಇಂತಹ ಮಹಾನ್ ವ್ಯಕ್ತಿಗೆ ಅವಮಾನ ಮಾಡಿದ ಜಿಲ್ಲಾ ನ್ಯಾಯಾಧೀಶರ ವಿರುದ್ಧ ಕಾನೂನು ಕ್ರಮ ಕೈಗೊಂಡು ಅವರನ್ನು ವಜಾ ಮಾಡಬೇಕು ಎಂದರು.

ಹೋರಾಟಗಾರ ನಾಗಲಿಂಗ ಸ್ವಾಮಿ ಮಾತನಾಡಿ ಸರ್ಕಾರದ ಆಡಳಿತ ನಿರ್ಲಕ್ಷವನ್ನು ಸಹಿಸಲಾಗುವುದಿಲ್ಲ ನಾವು ಕಾನೂನು ಕೈಗೆ ತೆಗೆದು ಕೊಳ್ಳಬಾರದು ಎಂದು ಶಾಂತಿಯುತ ಹೋರಾಟ ಮಾಡುತ್ತಿದ್ದೇವೆ. ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಕಾನೂನಿನ ಮುಂದೆ ಎಲ್ಲರೂ ಒಂದೇ.ಮತ ಹಾಕುವ ಸಾಮಾನ್ಯ ನಾಗರೀಕರು ಇರಬಹುದು,ಈ ದೇಶದ ರಾಷ್ಟ್ರಪತಿ ಆಗಿರಬಹುದು ಎಲ್ಲರೂ ಕಾನೂನಿನ ಮುಂದೆ ಒಂದೇ ಎಂದರು.ಮಲ್ಲಿಕಾರ್ಜುನ್ ಅವರ ವಿರುದ್ಧ ಪ್ರಕರಣ ದಾಖಲು ಮಾಡಬೇಕು ಮತ್ತು ಸೇವೆಯಿಂದ ವಜಾ ಮಾಡಬೇಕೆಂದು ಹೋರಾಟದ ಮೂಲಕ ಮಾಡುತ್ತಿದ್ದೇವೆ ಎಂದರು.

ಹೋರಾಟಗಾರರ ಒತ್ತಾಯದಂತೆ ಜಿಲ್ಲಾ ಆಡಳಿತದಿಂದ ಜಿಲ್ಲಾಧಿಕಾರಿಗಳ ಪ್ರತಿನಿಧಿಯಾಗಿ ಸಹಾಯಕ ಆಯುಕ್ತರು ಹೋರಾಟಗಾರರ ಸ್ಥಳಕ್ಕೆ ಆಗಮಿಸಿ ಹೋರಾಟಗಾರರ ಮನವಿಯನ್ನು ಸ್ವೀಕರಿಸಿದರು ಮಾನ್ವಿ ಬಂದು ಹೋರಾಟಕ್ಕೆ ಮಾನ್ವಿ ಪೊಲೀಸ್ ಠಾಣೆಯ ಸಿಪಿಐ ಮತ್ತು ಪಿಎಸ್ಐ ಅವರು ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿಕೊಂಡಿದ್ದರು ಯಾವುದೇ ಹಿತಕರ ಘಟನೆಗಳು ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿಕೊಂಡಿದ್ದರು.

ಮಾನವಿ ಪಟ್ಟಣದ ಪ್ರಮುಖ ಮುಖ್ಯ ರಸ್ತೆಗಳಾದ ಐ.ಬಿ ರಸ್ತೆ, ಅಂಬೇಡ್ಕರ್ ವೃತ್ತ ದಿಂದ ಬಸವ ವೃತ್ತ ದ ವರೆಗೆ,ಬಸ್ ನಿಲ್ದಾಣ ದಿಂದ ಪಂಪಾ ಕಾಂಪ್ಲೆಕ್ಸ್ ವರೆಗೆ ಹಾಗೂ ಬಸವ ವೃತ್ತ ದಿಂದ ವಾಲ್ಮೀಕಿ ವೃತದವರೆಗೆ ತೆರಳಿ ಅಂಗಡಿ ಮುಗಟ್ಟುಗಳನ್ನು ಬಂದ್ ಮಾಡಿಸಿದರು.ಹೋರಾಟಗಾರರ ಮನವಿಗೆ ಸ್ಪಂದಿಸಿದ ಮಾನವಿ ನಗರದ ಎಲ್ಲಾ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಸ್ವಯಂಪ್ರೇರಿತರಾಗಿ ಬಂದ್ ಮಾಡಿ ಬೆಂಬಲ ಸೂಚಿಸಿದರು.ಆಸ್ಪತ್ರೆ, ಮೆಡಿಕಲ್ ಸ್ಟೋರ್ ಮಾತ್ರ ತೆರೆಯಲಾಗಿದ್ದವು.ಈ ಸಂಧರ್ಭದಲ್ಲಿ ಬುದ್ದಿಜೀವಿಗಳು, ವಿವಿಧ ದಲಿತಪರ ಸಂಘಟನೆಯ ಮುಖಂಡರು ಭಾಗವಹಿಸಿದ್ದರು…

 

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *