ಸ್ಪೂರ್ತಿ ಅಭಿವೃದ್ಧಿ ಸಂಸ್ಥೆಯಿಂದ ಉಚಿತ ವೈದ್ಯಕೀಯ ತಪಾಸಣೆ.
ಬೆಳಗಾವಿ: ಸ್ಪೂರ್ತಿ ಅಭಿವೃದ್ಧಿ ಸಂಸ್ಥೆಯಿಂದ ಇಂದು 73ನೇ ಗಣರಾಜ್ಯೋತ್ಸವ ಪ್ರಯುಕ್ತ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಆಮಗಾಂವ ಗ್ರಾಮದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಶಿಬಿರವನ್ನು ಏರ್ಪಡಿಸಾಲಗಿತ್ತು.
ಸಂಸ್ಥೆಯ ಅಧ್ಯಕ್ಷರಾದ ಅಜೀತ ಮಾದರ ಇವರ ನೇತ್ರತ್ವದಲ್ಲಿ ಬಡ ರೋಗಿಗಳಿಗೆ ಉಪಯೋಗವಾಗಲೆಂದು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಜೀತ ಮಾದರ ಅವರು ಬಡ ರೋಗಿಗಳಿಗೆ ಉಪಯುಕ್ತವಾಗಲೆಂದು ನಮ್ಮ ಸಂಸ್ಥೆ ವತಿಯಿಂದ ಈ ಆರೋಗ್ಯ ಶಿಬಿರವನ್ನು ಏರ್ಪಿಡಿಸಲಾಗಿದ್ದು ಪ್ರತಿಯೊಬ್ಬರೂ ಸಹ ಈ ಶಿಬಿರದ ಉಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಸಮಾಜ ಸೇವಕಿಯಾದ ಶ್ರೀಮತಿ ಧನಶ್ರೀ ಕಿರಣಸಿಂಗ್ ಸರನಾಯಿಕ್ ,ಉದ್ಯಮಿಗಳಾದ ಶ್ರೀ ವಿಠಲ ರಾಮಚಂದ್ರ ಗವಾಸ್, ಜಯಶ್ರೀ ಸೂರ್ತವಂಶಿ, ಕಾರ್ಯದರ್ಶಿಯಾದ ಪ್ರಶಾಂತ ಕುಲಕರ್ಣಿ ಹಾಗೂ ಗ್ರಾಮದ ಮುಖಂಡರು ಮತ್ತು ವೈದ್ಯಕೀಯ ಸಿಬ್ಬಂದಿಗಳು ಉಪಸ್ಥಿತರಿದ್ದರು…

ವರದಿ. ಮಹಾಲಿಂಗ ಗಗ್ಗರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
