;

ಚಳ್ಳಕೆರೆ:-ರಾಮಜೋಗಿಹಳ್ಳಿ ಅತ್ತೆ, ಸೊಸೆಯ ಮುನಿಸು ಕೊಲೆಯೊಂದಿಗೆ ಮುಕ್ತಾಯ…!!!

ಮನೆ ಅಂದ್ರೆ ಸಣ್ಣಪುಟ್ಟ ಜಗಳ – ತಕರಾರುಗಳು ಇದ್ದೇ ಇರುತ್ತೆ. ಇನ್ನು ಅತ್ತೆ ಸೊಸೆ ಒಂದೇ ಮನೆಯಲ್ಲಿದ್ರೆ ಸಣ್ಣ ಸಣ್ಣ ಕಾರಣಗಳು ಸಹ ಮನಸ್ತಾಪಕ್ಕೆ ಕಾರಣ ಆಗುತ್ತವೆ. ಆದ್ರೆ ಚಿತ್ರದುರ್ಗ ಜಿಲ್ಲೆಯಲ್ಲಿ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.ಅತ್ತೆಯನ್ನು ಕೊಲೆಗೈದ ಸೊಸೆ ಜೈಲು ಸೇರಿದ್ದಾಳೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರಾಮಜೋಗಿ ಹಳ್ಳಿಯಲ್ಲಿ ಈ ಕೊಲೆ ನಡೆದಿದೆ. 60 ವರ್ಷದ ರುದ್ರಮ್ಮ ಕೊಲೆಯಾದ ಅತ್ತೆ. 38 ವರ್ಷ ಮುದ್ದಕ್ಕ ಕೊಲೆಗೈದ ಸೊಸೆ. ಈಗಾಗಲೇ ಪೊಲೀಸರು ಸೊಸೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಅತ್ತೆ ರುದ್ರಮ್ಮ ಮತ್ತು ಸೊಸೆ ಮುದ್ದಕ್ಕ ನಡುವೆ ಮನಸ್ತಾಪ ಇತ್ತು. ಮನೆಯಲ್ಲಿ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಭಾನುವಾರ ರಾತ್ರಿ ಮಲಗಿದ್ದ ವೇಳೆ ಸುತ್ತಿಗೆಯಿಂದ ಅತ್ತೆಯ ತಲೆಯನ್ನು ಜಜ್ಜಿ ಕೊಲೆ ಮಾಡಿದ್ದಾಳೆ.

ಘಟನಾ ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿ, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

ವರದಿ.ಚಕ್ರಿ ಬಸವರಾಜ್, ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;