ಬಿಜೆಪಿ ಲಾಕ್ ಡೌನ್ ಎರಡೇ ವಾರಕ್ಕೆ ಮುಗಿದು ಹೋಯ್ತು: ಅಸಲಿ ಕಾರಣ ಇಲ್ಲಿದೆ..
ಕರ್ನಾಟಕ ಇತಿಹಾಸದಲ್ಲಿ ಐತಿಹಾಸಿಕ ದಾಖಲೆ ಸೃಷ್ಟಿಸಿದ ಮೇಕೆದಾಟು ಪಾದಯಾತ್ರೆ ಅಕ್ಷರಶಃ ಬಿಜೆಪಿಯ ಬುಡವನ್ನು ನಲುಗಿಸಿತ್ತು. “ನಮ್ಮ ನೀರು ನಮ್ಮ ಹಕ್ಕು” ಎಂಬ ಧ್ಯೇಯದೊಂದಿಗೆ ರಾಜ್ಯದಾದ್ಯಂತ ಸಹಸ್ರಾರು ಮಂದಿ ಕಾಂಗ್ರೆಸ್ ಪಕ್ಷ ನೇತೃತ್ವದ ಮೇಕೆದಾಟು ಪಾದಯಾತ್ರೆ ಗೆ ಹರಿದುಬಂದಿದ್ದರು. ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನೇತೃತ್ವದಲ್ಲಿ ಜರುಗಿದ ಈ ಪಾದಯಾತ್ರೆಯು ಅಭೂತಪೂರ್ವ ದಾಖಲೆಯತ್ತ ಸಾಗಿ ಬೆಂಗಳೂರು ತಲುಪಿದರೆ ಬಿಜೆಪಿ ಪಕ್ಷ ದೊಡ್ಡ ಮಟ್ಟದ ಹಿನ್ನೆಡೆ ಅನುಭವಿಸಬೇಕಾಗಿ ಬರಬಹುದು ಅನ್ನುವ ಏಕೈಕ ಕಾರಣಕ್ಕಾಗಿ, ಜನರ ನೀರಿನ ಸಮಸ್ಯೆಗೆ ಪ್ರಾಮಾಣಿಕ ಪ್ರಯತ್ನ ಮಾಡದ, ತಮಿಳುನಾಡಿನಲ್ಲಿ ಬಿಜೆಪಿ ಪಕ್ಷ ಬೆಳೆಯಲು ರಾಜ್ಯದ ಹಿತ ಕಡೆಗಣಿಸಿದ ಬಿಜೆಪಿ ಪಕ್ಷ ಮೇಕೆದಾಟು ಪಾದಯಾತ್ರೆ ನಿಲ್ಲಿಸಲು ಹೂಡಿದ ತಂತ್ರವೇ ಈ ವೀಕೆಂಡ್ ಕರ್ಫ್ಯೂ ಹಾಗೂ ಕೊರೊನಾ ಮಾರ್ಗಸೂಚಿ.
ಮೇಕೆದಾಟು ಪಾದಯಾತ್ರೆ ಅಧಿಕೃತ ಘೋಷಣೆ ಆಗುತ್ತಿದ್ದಂತೆ ಎದ್ದು ಬಿದ್ದ ಬಿಜೆಪಿ ಸರಕಾರ ರಾಜ್ಯದಲ್ಲಿ ಸಿಕ್ಕ ಸಿಕ್ಕ ಜನರನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಿ ‘ಪಾಸಿಟಿವಿಟಿ ರೇಟ್’ ಹೆಚ್ಚಿಸುವ ಪ್ರಯತ್ನಕ್ಕೆ ಕೈ ಹಾಕಿದರು. ಸಾವಿರ ಸಾವಿರ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರು ಎಂದು ಪ್ರಚುರ ಪಡಿಸಲಾಯಿತು. ‘ಬಿಜೆಪಿ ಕೊರೊನಾ’ ಬಗ್ಗೆ ಕಾಂಗ್ರೆಸ್ ಪ್ರಮುಖ ನಾಯಕರು ಎಳೆಎಳೆಯಾಗಿ ಬಿಚ್ಚಿಟ್ಟರು. ಆದರೆ ಸರಕಾರ ಜನರ ಕಣ್ಣಿಗೆ ಮಣ್ಣೆರಚಿದರು. ಪಾದಯಾತ್ರೆಯಿಂದ ಕೊರೊನಾ ಹೆಚ್ಚಾಗುತ್ತದೆ ಅನ್ನುವ ಹಸಿಹಸಿ ಸುಳ್ಳುಗಳನ್ನು ಹಬ್ಬಿಸಿದರು. ಜನಸಾಮಾನ್ಯರ ಆರೋಗ್ಯದ ಬಗ್ಗೆ ಎಲ್ಲರಿಗಿಂತಲೂ ಹೆಚ್ಚು ಕಾಳಜಿ ಇರುವ ಕಾಂಗ್ರೆಸ್ ಪಕ್ಷ ಜನರ ಆರೋಗ್ಯ ಹಾಗೂ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿ ಪಾದಯಾತ್ರೆ ಯನ್ನು ಅರ್ಧದಲ್ಲೇ ಮೊಟಕುಗೊಳಿಸಿತು.
ಬೆಂಗಳೂರು ಸೇರಿದಂತೆ ನಾಲ್ಕು ಜಿಲ್ಲೆಗಳ ಭವಿಷ್ಯದ ನೀರಿನ ದೊಡ್ಡ ಸಮಸ್ಯೆ ಇತ್ಯರ್ಥಕ್ಕೆ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಕಾಂಗ್ರೆಸ್ ಈ ಹೋರಾಟ ಹಮ್ಮಿಕೊಂಡಿತ್ತು. ರಾಜ್ಯದ ಜನರ ಹಿತದೃಷ್ಟಿಯಿಂದ ಬಿಜೆಪಿ ಈ ಯೋಜನೆಯನ್ನು ಅನುಷ್ಠಾನಗೊಳಿಸಬೇಕಿತ್ತು. ಆದರೆ ಈ ಪಾದಯಾತ್ರೆ ಯಶಸ್ವಿಯಾದರೆ ಬಿಜೆಪಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಬಹುದೆಂಬ ಭೀತಿಯಿಂದ ಜನರ ನೀರಿನ ಹಕ್ಕನ್ನು ‘ಕೊರೊನಾ’ ಹೆಸರಿನಲ್ಲಿ ಕಸಿಯಲಾಯಿತು. ಮೇಕೆದಾಟು ತಾತ್ಕಾಲಿಕ ಹೋರಾಟ ನಿಂತಿದೆ. ಬಿಜೆಪಿ ಲಾಕ್ ಡೌನ್ ಇವತ್ತಿಗೆ ಮುಗಿದಿದೆ.
‘ಕೊರೊನಾ’ ಹೆಸರಿನಲ್ಲಿ ಬಿಜೆಪಿ ಪಕ್ಷ ಜನರನ್ನು ಯಾವ ರೀತಿ ಮರುಳು ಮಾಡುತ್ತದೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ. ಆದರೆ ಜನಸಾಮಾನ್ಯರು ಬಿಜೆಪಿಯವರಂತೆ ಮೆದುಳು ಹೀನರಲ್ಲ. ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂಬುದು ನೆನಪು ಮಾಡಿಕೊಂಡರೆ ಒಳ್ಳೆಯದು
( ಪ್ರಕಟಣೆ: ಶ್ರೀಮತಿ ಎಂ ಪಿ ವೀಣಾ ಮಹಾಂತೇಶ ಮಾಧ್ಯಮ ವಿಶ್ಲೇಷಕರು ಕೆ ಪಿ ಸಿ ಸಿ ಬಳ್ಳಾರಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರ)..
ವರದಿ. ಪ್ರತಾಪ್. ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
