;

ಗುಡೇಕೋಟೆ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ರಚನೆ…!!!

ಗುಡೇಕೋಟೆ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ರಚನೆ

ಕೂಡ್ಲಿಗಿ: ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ಪೇಟೆ ಬಸವಣ್ಣ ದೇವಸ್ಥಾನದಲ್ಲಿ ನೆಡದ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಸಭೆ ನೆಡೆಸಿ ಪದಾಧಿಕಾರಿಗಳನ್ನು ಕೂಡ್ಲಿಗಿ ತಾಲೂಕು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ತಾಲೂಕು ಅಧ್ಯಕ್ಷರಾದ ಬಣಕಾರ್ ಮೂಗಪ್ಪ ಹಾಗೂ ತಾಲೂಕು ಉಪಾಧ್ಯಕ್ಷರಾದ ಎಂಎಲ್ಎ ತಿಪ್ಪೇಸ್ವಾಮಿ ರವರ ನೇತೃತ್ವದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಗುಡೇಕೋಟೆ ಗ್ರಾಮ ಘಟಕದ ಗೌರವಾಧ್ಯಕ್ಷರಾಗಿ ಬಿ.ಬಸಪ್ಪ.ಅದ್ಯಕ್ಷರಾಗಿ ಜೆ.ಬಸವೇಶ್ . ಉಪಾಧ್ಯಕ್ಷರಾಗಿ ಎಂ.ಹುಲಿರಾಜ್.ಡಿ.ಎನ್.ನಾಗೇಂದ್ರಪ್ಪ.ಟೀಚರ್ ಬೋರಯ್ಯ.ಖಂಜಾಚಿಯಾಗಿ ಪಾಲಕ್ಷಿ.ಕಾರ್ಯದರ್ಶಿಯಾಗಿ ಚಂದ್ರಶೇಖರ್.ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯಬಜಂತ್ರಿ.ಸಂಘಟನಾ ಕಾರ್ಯದರ್ಶಿಯಾಗಿ ಪಾಲಯ್ಯ.ಸಹ ಕಾರ್ಯದರ್ಶಿ ಮಂಜುನಾಥ್.ಸಂಚಾಲಕರಾದ ಬಸವರಾಜ್.ಸಂಚಾಲಕರಾಗಿ ಬಿ.ಡಿ.ನುಂಕೇಶ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಬಳಿಕ ಮಾತನಾಡಿದ ಕೂಡ್ಲಿಗಿ ತಾಲೂಕು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಬಣಕಾರ್ ಮೂಗಪ್ಪ ಮಾತನಾಡಿ ಕಲಾವಿದರ ನಡುವಿನ ತಾರತಮ್ಯ ನೀತಿ ನಿವಾರಣೆ ಮತ್ತು ಸ್ಥಳೀಯ ಕಲಾವಿದರಿಗೆ ಮೂಲ ಸೌಕರ್ಯ ಕಲ್ಪಿಸುವುದು, ಎಲ್ಲ ಪ್ರಕಾರದ ಕಲಾವಿದರನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ರಚನೆ ಗ್ರಾಮ ಘಟಕ ಗುಡೇಕೋಟೆ ಗ್ರಾಮದಲ್ಲಿ ರಚನೆ ಮಾಡಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಬಣಕಾರ್ ಮೂಗಪ್ಪ ತಿಳಿಸಿದರು.

ಮಂಗಳವಾರ ಪೇಟೆ ಬಸವಣ್ಣ ದೇವಸ್ಥಾನದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ಕಲಾವಿದರನ್ನು ಕಡೆಗಣಿಸಲಾಗುತ್ತಿದೆ. ಹೀಗಾಗಿ ಈ ಭಾಗದ ಕಲಾವಿದರನ್ನು ಸಂಘಟಿಸಬೇಕೆಂಬ ಉದ್ದೇಶದಿಂದ ಈ ಒಕ್ಕೂಟ ರಚನೆ ಮಾಡಲಾಗಿದೆ ಎಂದರು. ಅಲೆಮಾರಿ, ಜಾನಪದ, ಭಜನೆ. ರಂಗಭೂಮಿ,ನಾಟಕ. ಸಂಗೀತ,
ನೃತ್ಯ, ಬಯಲಾಟ ಕಲಾವಿದರಿಂದ ಹಿಡಿದುಕೊಂಡು ಎಲ್ಲ ಪ್ರಕಾರದ ಕಲಾವಿದರ ಸಮಸ್ಯೆಗೆ ಸ್ಪಂದಿಸುವುದೇ ಒಕ್ಕೂಟದ ಗುರಿಯಾಗಿದೆ ಎಂದರು.

ಒಕ್ಕೂಟದ ಉಪಾಧ್ಯಕ್ಷ ಎಂಎಲ್ಎ ತಿಪ್ಪೇಸ್ವಾಮಿ ಮಾತನಾಡಿ, ಕಲಾವಿದರ ನಡುವೆ ತಾರತಮ್ಯ ಮನೋಭಾವನೆ ಅಧಿಕವಾಗಿದೆ. ನಮ್ಮ ರಾಜ್ಯದಲ್ಲೇ ಹೊರ ರಾಜ್ಯಗಳ ಕಲಾವಿದರಿಗೆ ಸಿಗುವ ಗೌರವ, ಸೌಲಭ್ಯ ಸ್ಥಳೀಯ ಕಲಾವಿದರಿಗೆ ದಕ್ಕುತ್ತಿಲ್ಲ. ಸಂಭಾವಣೆಯಲ್ಲೂ ಸ್ಥಳೀಯ ಕಲಾವಿದರನ್ನು ಕಡೆಗಣಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲ ಕಲಾವಿದರು ಒಗ್ಗಟಾಗಿ ಹೋರಾಟ ಮಾಡುವ ಅವಶ್ಯಕತೆ ಇದೆ ಎಂದರು.
ಕೊರೊನಾದಂತ ಕೆಟ್ಟ ಕಾಲದಲ್ಲಿ ಕಲಾವಿದರು ಅಳಿವು, ಉಳಿವಿನ ಪರಿಸ್ಥಿತಿ ಎದುರಿಸುವಂತೆ ಆಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರದಿಂದ ನಡೆಯುವ ಉತ್ಸವಗಳಲ್ಲಿ ಕಲ್ಯಾಣ ಕರ್ನಾಟಕದ ಕಲಾವಿದರಿಗೆ ಕಡ್ಡಾಯವಾಗಿ ಅವಕಾಶ ನೀಡಬೇಕು. ಕೆಕೆಆರ್‌ ಡಿಬಿಯಿಂದ ಸಾಂಸ್ಕೃತಿಕ ಉದ್ದೇಶಕ್ಕೆ ಅನುದಾನ ನೀಡಬೇಕು ಕೇವಲ ಒಂದು ಜಿಲ್ಲೆಗೆ ಸೀಮಿತವಾಗದೇ ಈ ಭಾಗದ ಎಲ್ಲ ಕಲಾವಿದರನ್ನು ಒಳಗೊಳ್ಳುವ ಕೆಲಸ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗುಡೇಕೋಟೆ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಪದಾಧಿಕಾರಿಗಳು.ಆರಂಭದಲ್ಲಿ ಭಜನೆ ತತ್ವಪದಗಳನ್ನು ಸುಮಧುರವಾಗಿ ನುಡಿಸಿ ಮನರಂಚಿಸಿದರು.ಈ ವೇಳೆ ಊರಿನ ಗ್ರಾಮಸ್ಥರು ಯುವಕರು ಕಲಾವಿದರು ಉಪಸ್ಥಿತರಿದ್ದರು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;