ತುರುವನೂರು ಇಂದಿರಾಗಾಂಧಿ ವಸತಿಯುತ ಶಾಲೆಯಲ್ಲಿ ಊಟ ಸೇವಿಸಿ 30ಮಕ್ಕಳು ಅಸ್ವಸ್ತ…!!!

ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿಯ ಇಂದಿರಾಗಾಂಧಿ ವಸತಿಯುತ ಶಾಲೆಯ ಒಟ್ಟು 30 ಮಕ್ಕಳು ಸಂಕ್ರಾಂತಿ ಹಬ್ಬದಂದು ಹಾಸ್ಟೆಲ್ ನಲ್ಲಿ ಪಾಯಸ ಚಿತ್ರಾನ್ನ ಮಾಡಿದ್ದನ್ನು ಊಟ ಮಾಡಿದ್ದಾರೆ. ಊಟ ಮಾಡಿದ ಸ್ವಲ್ಪ ಸಮಯದಲ್ಲಿಯೇ ಎಲ್ಲರಿಗೂ ವಾಂತಿಯಾಗಿದೆ.
ವಾಂತಿಯಾಗುತ್ತಿದ್ದಂತೆ 5 ಮಕ್ಕಳನ್ನು ಬಸವೇಶ್ವರ ಆಸ್ಪತ್ರೆ ಹಾಗೂ ಇನ್ನುಳಿದ 25 ಮಕ್ಕಳನ್ನು ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಪರಿಶೀಲಿಸಿದ ವೈದ್ಯರು ಫುಡ್ ಪಾಯಿಷನ್ ಆಗಿದ್ದು, ಡ್ರಿಪ್ಸ್ ಹಾಕಿ ಚಿಕಿತ್ಸೆ ನೀಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ, ನಂತರ ಮಕ್ಕಳನ್ನು ಮತ್ತೆ ವಸತಿ ಶಾಲೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ಶಾಲಾ ಪ್ರಾಂಶುಪಾಲ ಜಯಪ್ಪ ತಿಳಿಸಿದ್ದಾರೆ…

 

ವರದಿ. ಗಿರೀಜಾ, ಜೆ. ಬಿ. ಬೆಳ್ಳೆಕಟ್ಟೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend