;

ಕೆ,ಎಂ,ಎಸ್ ಪ್ರಥಮ ದರ್ಜೆ ಕಾಲೇಜ್ ಆವರಣದಲ್ಲಿ ವಿಚಾರ ಸಂಕಿರಣ ಕಾರ್ಯಕ್ರಮ…!!!

ಕೆ ಎಂ ಎಸ್ ಪ್ರಥಮ ದರ್ಜೆ ಕಾಲೇಜ್ ಆವರಣದಲ್ಲಿ
ವಿಚಾರ ಸಂಕಿರಣ ಕಾರ್ಯಕ್ರಮ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಸರ್ಗೆ ಕಾನಹೊಸಹಳ್ಳಿ ಯಲ್ಲಿ- ತಂದೆ- ತಾಯಿಗಳಿಗೆ ಗೌರವ ತರುವ ಮಕ್ಕಳಾಗಿ ಬೆಳೆಯಿರಿ:- ಕೆಎಂ ಶಶಿಧರ ಸ್ವಾಮಿ.
ಕಾನಹೊಸಹಳ್ಳಿ ಪಟ್ಟಣದ ಕೆ ಎಂ ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ ಎ ತೃತೀಯ ಹಾಗೂ ದ್ವಿತೀಯ ತರಗತಿಗಳ ವಿದ್ಯಾರ್ಥಿಗಳು ಬಿ ಎ ಪ್ರಥಮ ತರಗತಿಯ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರ ಮದವಿಚಾರ ಸಂಕಿರಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಮಕ್ಕಳಿಗೆ ತಾಳ್ಮೆಅತ್ಯವಶ್ಯಕ ನಾವುಗಳು ಯಾವುದೇ ಗುರಿಯನ್ನು ಸಾಧಿಸಬೇಕೆಂದರೆ ತಾಳ್ಮೆ ಅತಿಮುಖ್ಯ. ವಿದ್ಯಾರ್ಥಿಗಳು ಪ್ರಾಮಾಣಿಕತೆ ನಿಷ್ಠೆ ಇಂದ ಶಾಲೆಯಲ್ಲಿ ಗುರುಗಳು ನೀಡಿದ ಪಾಠ ಪ್ರವಚನಗಳನ್ನು ತಾಳ್ಮೆ ನಿಷ್ಠೆಯಿಂದ ಕೇಳಿ.ಅದನ್ನು ಮನವರಿಕೆ ಮಾಡಿಕೊಂಡು.ಸಂಬಂಧಪಟ್ಟ ಶಿಕ್ಷಕರಿಗೆ ಅವರು ನೀಡಿದ ಪಠ್ಯಕ್ರಮದ ವಿಷಯವನ್ನು ಒಪ್ಪಿಸಬೇಕು.ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವ ಹಾಗೆ, ಗುರುಹಿರಿಯರಿಗೆ, ತಂದೆ-ತಾಯಿಗಳಿಗೆ ಗೌರವಕೊಡುವ ಮಕ್ಕಳಾಗಳೆಂದು ಕೆ ಎಂ ಎಸ್ ಸಂಸ್ಥೆಯ ಅಧ್ಯಕ್ಷರಾದ ಕೆ ಎಂ ಶಶಿಧರ ಸ್ವಾಮಿಯವರು ಈ ಸಂದರ್ಭದಲ್ಲಿ ಮಾತನಾಡಿದರು. ಗುರುಗಳು ಹೇಳಿದ ಮಾತುಗಳನ್ನು ತಂದೆ-ತಾಯಿಗಳ ಹೇಳಿದ ಮಾತುಗಳನ್ನು ನಿಷ್ಠೆಯಿಂದ ತಾಳ್ಮೆಯಿಂದ ಕೇಳಿ ದಾಗ ನಮ್ಮ ಜೀವನ ಸಾರ್ಥಕ. ಗುರುಗಳಾಗಲಿ ತಂದೆ-ತಾಯಿ ಗಳಾಗಲಿ ಮಕ್ಕಳಿಗೆ ಒಳ್ಳೆಯದನ್ನೇ ಬಯಸುತ್ತಾರೆ ವಿನಃ ಕೆಡಕನ್ನು ಯಾವ ತಂದೆತಾಯಿಗಳು ಗುರುಗಳು ಬಯಸುವುದಿಲ್ಲ. ಅದ್ದರಿಂದತಂದೆ-ತಾಯಿಗಳಿಗೆ ಗೌರವ ಕೊಡುವ ಮಕ್ಕಳಾಗಲಿ ಎಂದು ಈ ಸಂದರ್ಭದಲ್ಲಿ ಮಾತನಾಡಿದರು. ಹಾಗೂ ಪ್ರಾಮಾಣಿಕತೆ ನಿಷ್ಠೆ ಶಿ ಶಿಕ್ಷಣದ ಗುಣಮಟ್ಟದ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು. ಮುಖ್ಯ ಅತಿಥಿಗಳಾಗಿ ಅಕ್ಷರ ಫೌಂಡೇಶನ್ ಸಮಾಜಸೇವಕರಾದ ಶ್ರೀಯುತ ಕಣ್ಣಿ ಯವರು ಮಕ್ಕಳಿಗೆ ಶಿಕ್ಷಣ ಎಂದರೇನು ಸಮಾಜ ಎಂದರೇನು ವಿದ್ಯಾರ್ಥಿಗಳು ಹೇಗಿರಬೇಕು ಯಾವ ರೀತಿ ಚಿಂತನೆಗಳನ್ನು ಮಾಡಬೇಕು ಪ್ರಕೃತಿ,ಸಂಸ್ಕೃತಿ. ವಿಕೃತಿ ಗಳ ವ್ಯತ್ಯಾಸಗಳ ಬಗ್ಗೆ ಹಲವಾರು ವಿಷಯಗಳನ್ನು ಮಕ್ಕಳೊಂದಿಗೆಹಂಚಿಕೊಂಡರು. ಕಾರ್ಯಕ್ರಮದ ಬಗ್ಗೆ ಪ್ರಾಂಶುಪಾಲರಾದ ಸುದರ್ಶನ್ ರವರು ಕಾರ್ಯಕ್ರಮ ಕುರಿತು ಮಕ್ಕಳಿಗೆ ಹಲವಾರು ವಿಚಾರಗಳನ್ನು ತಿಳಿಸಿದರು.


ದ್ವಿತೀಯ ವಿದ್ಯಾರ್ಥಿನಿL, T. ಶ್ರೀಲೇಖಾ ರವರು ಮಾತನಾಡಿ, ಪ್ರತಿಯೊಬ್ಬರು ಸ್ವಾಮಿ ವಿವೇಕಾನಂದರತತ್ವಗಳನ್ನು ಅಳವಡಿಸಿಕೊಳ್ಳಬೇಕು.ಅವರು ಮಾಡಿದ ಸಾಧನೆಗಳು ಯುವಕರಿಗೆ ಸ್ಫೂರ್ತಿದಾಯಕವಾಗಿವೆ. ನಾವುಗಳು ಭಯವನ್ನು ತೊರೆದು ಹಾಕಿ ವೇದಿಕೆಯ ಅವಕಾಶಗಳು ಸಿಕ್ಕಾಗ ಅದರ ಉಪಯೋಗವನ್ನು ಪಡೆದುಕೊಂಡು ಧೈರ್ಯವಾಗಿ ಮಾತಾಡುವುದನ್ನು ಕಲಿತು. ಸ್ವಾಮಿ ವಿವೇಕಾನಂದ, ಡಾಕ್ಟರ್ ಬಿಆರ್ ಅಂಬೇಡ್ಕರ್, ಜಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಇನ್ನೂ ಅನೇಕ ಗಣ್ಯ ಮಾನವರ ವಿಷಯಗಳನ್ನುಅವರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನುಇತರರಿಗೆ ಮನವರಿಕೆ ಮಾಡಿಕೊಡುವ ವಿದ್ಯಾರ್ಥಿಗಳಾಗಬೇಕು ಎಂದು ಈ ಸಂದರ್ಭದಲ್ಲಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೈಭವ ಸಂಸ್ಥೆಯ ಕಾರ್ಯದರ್ಶಿಗಳಾದ ಮುರಳೀಧರ ರವರು ಕಾರ್ಯಕ್ರಮ ಕುರಿತು ಸವಿಸ್ತಾರವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ, ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು ಆದರ್ಶ ಸಂತೋಷ ಪ್ರಾರ್ಥನೆ ಮಾಡಿದರು, ಶಿಕ್ಷಕಿ ಸುಜಾತ ರವರು ಪೂಜಾ ಕಾರ್ಯಕ್ರಮ ನೆರವೇರಿಸಿದರು. ಜಿ ಸುಮಾ ಸ್ವಾಗತಿಸಿದರು, ಬಿ ಕಾವೇರಿ ನಿರೂಪಣೆ ಮಾಡಿದರು, ಆರ್ ರೇಖಾ ವಂದನಾರ್ಪಣೆ ಮಾಡಿದರು.
ಅತಿಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಕೆಎಂ ಶಶಿಧರ ಸ್ವಾಮಿಯವರು ಸನ್ಮಾನ ಮಾಡಿದರು, ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು. ಶಿಕ್ಷಕರು, ಸಂಸ್ಥೆಯ ಸಿಬ್ಬಂದಿ ವರ್ಗ, ಪೋಷಕರು ಸಾರ್ವಜನಿಕರು ಉಪಸ್ಥಿತರಿದ್ದರು…

ವರದಿ.ವಿರೇಶ್, ಕೆ, ಎಸ್, ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;