ಓಮಿಕ್ರಾನ್ ಅಲೆ ಎಂದು ಪುಕಾರು ಹಬ್ಬಿಸಿ, ಜನರನ್ನು ಹೆದರಿಸಿ ಲಾಕ್ಡೌನ್ ಸಮರ್ಥಿಸಿಕೊಳ್ಳುತ್ತಿದ್ದಾರೆ.ಇದು ಎಷ್ಟು ಸರಿ ಬಡವರ ಒಟ್ಟೆ ಮೇಲೆ ಬರೀಹಾಕಿದ ರಾಜ್ಯ ಸರ್ಕಾರದ ನಿಲುವೇನು???
ನಿನ್ನೆ ಭಾರತದಲ್ಲಿ ದಾಖಲಾದ ಹೊಸ ಕೋವಿಡ್ ಪ್ರಕರಣಗಳು 58,097. ಓಮಿಕ್ರಾನ್ನ ಮೊದಲ ಪ್ರಕರಣ ದಾಖಲಾಗಿದ್ದು ಡಿಸೆಂಬರ್ ಮೊದಲ ವಾರದಲ್ಲಿ. ಅವತ್ತಿನಿಂದ ಇವತ್ತಿನವರೆಗೆ ದೇಶದಲ್ಲಿರುವ ದಾಖಲಾಗಿರುವ ಒಟ್ಟು ಓಮಿಕ್ರಾನ್ ಪ್ರಕರಣಗಳೆಷ್ಟು? ನಿನ್ನೆಯ ದಾಖಲೆಗಳ ಪ್ರಕಾರ ಭಾರತದಲ್ಲಿ ಸದ್ಯಕ್ಕೆ 2,135. ಹಾಗಾದರೆ ಮಿಕ್ಕ 55,000 ಪಾಸಿಟಿವ್ಗಳು ಯಾವ ರೂಪಾಂತರಿಯದ್ದು?
ಇರುವ ಎರಡುವರೆ ಸಾವಿರದಷ್ಟು ಪ್ರಕರಣಕ್ಕೆ ‘ಓಮಿಕ್ರಾನ್ ಸುನಾಮಿ’, ‘ಓಮಿಕ್ರಾನ್ ರುದ್ರನರ್ತನ’, ‘ಓಮಿಕ್ರಾನ್ ಅಬ್ಬರ’, ‘ಓಮಿಕ್ರಾನ್ ರಣಭೀಕರ’ ಎಂದೆಲ್ಲಾ ಶೀರ್ಷಿಕೆ ಕೊಡುವ ಮಾಧ್ಯಮಗಳನ್ನು ಸರಕಾರವೇ ಲಾಕ್ಡೌನ್ ಮಾಡಿಸಲು ಔಟ್ಸೋರ್ಸ್ ಮಾಡಿದಂತಿದೆ.
147 ಕೋಟಿ ವ್ಯಾಕ್ಸೀನ್ ಡೋಸ್ ಕೊಟ್ಟಿರುವಾಗ, 98.01% ಚೇತರಿಕೆ ದಾಖಲೆ ಇರುವಾಗ, ಸಕ್ರಿಯ ಪ್ರಕರಣಗಳು ಒಟ್ಟು ಪಾಸಿಟಿವ್ ಕೇಸ್ಗಳ 1% ಕ್ಕಿಂತಾ ಕಡಿಮೆ ಇರುವಾಗ (ಸದ್ಯಕ್ಕಿರುವುದು 0.61% ಮಾತ್ರ) ಲಾಕ್ಡೌನ್ ಅಗತ್ಯ ಯಾಕೆ ಎಂದು ಕೇಳದಷ್ಟು ದುರ್ಬಲರೇ ನಾವು?..

ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
