ಶ್ರೀಕೃಷ್ಣದೇವರಾಯ ಶಿಕ್ಷಣ ಸಂಸ್ಥೆಯಿಂದ ಕಾರುಣ್ಯ ಆಶ್ರಮದಲ್ಲಿ ಸ್ವಚ್ಛತಾ ಕಾರ್ಯಕ್ರಮ — ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್(ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಸಿಂಧನೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶ್ರೀ ಕೃಷ್ಣದೇವರಾಯ ಶಿಕ್ಷಣ ಸಂಸ್ಥೆಯ ವತಿಯಿಂದ ಆಶ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಎಲ್ಲಾ ವೃದ್ಧರ ಹಾಗೂ ವಯಸ್ಕರ ಬುದ್ಧಿಮಾಂದ್ಯರ ಸೇವೆ ಮಾಡುವುದರ ಮೂಲಕ ಶ್ರೀ ಕೃಷ್ಣದೇವರಾಯ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಚಂದ್ರಕಲಾ ಪ್ರಕಾಶ್ ಅವರು ಮಾನವೀಯತೆ ಮೆರೆದಿದ್ದಾರೆ. ಆಶ್ರಮಕ್ಕೆ ಭೇಟಿ ನೀಡಿದ ಚಂದ್ರಕಲಾ ಪ್ರಕಾಶ ಕಾರುಣ್ಯ ಆಶ್ರಮ ರಾಷ್ಟ್ರಮಟ್ಟದಲ್ಲಿ ಸೇವೆಗೈಯುತ್ತಿರುವುದು ನಮ್ಮ ಸಿಂಧನೂರಿನ ಹೆಮ್ಮೆ ನನಗೆ ಬೇರೆ ಬೇರೆ ಕಡೆಯಿಂದ ದೂರವಾಣಿಯ ಮೂಲಕ ಆಶ್ರಮದ ಸೇವೆಯನ್ನುಹಲವಾರು ಜನ ಕೇಳುತ್ತಿದ್ದರು. ಆದರೆ ಇಂದು ನಮ್ಮ ಸಂಸ್ಥೆಯ ವತಿಯಿಂದ ಎಲ್ಲಾ ವಿದ್ಯಾರ್ಥಿಗಳನ್ನು ಕರೆದುಕೊಂಡು ಆಶ್ರಮದ ಎಲ್ಲಾ ಕೋಣೆಗಳನ್ನು ಸ್ವಚ್ಛಗೊಳಿಸಿ ಸುತ್ತಮುತ್ತಲಿನ ವಾತಾವರಣವನ್ನು ಶುದ್ಧಗೊಳಿಸಿ ನಮ್ಮ ದೇಶದ ಮೂಲ ಮಂತ್ರ ಸ್ವಚ್ಛ ಭಾರತ ಎನ್ನುವ ಯೋಜನೆಗೆ ಕೈ ಜೋಡಿಸುತ್ತಿದ್ದೇವೆ. ಇಂದೂ ಆಶ್ರಮದ ಸೇವೆ ನೋಡಿ ಎಂದೂ ನೋಡಿರದಂತಹ ವಿಚಿತ್ರ ಕರ್ತವ್ಯವನ್ನು ಇಲ್ಲಿ ನಾನು ಹಾಗೂ ನನ್ನ ವಿದ್ಯಾರ್ಥಿಗಳೊಂದಿಗೆ ನೋಡಿ ಬೆಚ್ಚಿ ಬೆರಗಾಗಿದ್ದೇವೆ. ಈ ಆಶ್ರಮಕ್ಕೆ ನಿರಂತರವಾಗಿ ನಮ್ಮ ಸಂಸ್ಥೆಯಿಂದ ಹಾಗು ವಯಕ್ತಿಕವಾಗಿ ಸಹಾಯ ಸೇವೆ ಮಾಡುತ್ತೇವೆ. ನೀವುಗಳೆಲ್ಲ ವಿದ್ಯಾಭ್ಯಾಸ ಮಾಡುವುದರೊಂದಿಗೆ ಹಿರಿಯ ನಾಗರಿಕರ ಸೇವೆಯಲ್ಲಿ ಹೆಚ್ಚಿನ ಪಾತ್ರವಹಿಸಬೇಕು. ಅದಲ್ಲದೆ ಮುಂದಿನ ದಿನಮಾನಗಳಲ್ಲಿ ನಿಮ್ಮ ತಂದೆ ತಾಯಿಗಳನ್ನು ಆಗು ಅತ್ತೆ ಮಾವಂದಿರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಆದರೆ ಇಂದಿನ ಆಶ್ರಮದಲ್ಲಿರುವ ಎಲ್ಲಾ ಹಿರಿಯ ಜೀವಿಗಳ ಸೇವೆಯ ಬಗ್ಗೆ ಈ ಕಾರ್ಯಕ್ರಮ ನಿಮಗೊಂದು ಪಾಠ ಎನ್ನುವ ಸಂದೇಶವನ್ನು ಎಲ್ಲಾ ವಿದ್ಯಾರ್ಥಿಗಳಿಗೆ ನೀಡಿದರು. ನಂತರ ಮಾತನಾಡಿದ ಕಾರುಣ್ಯ ಆಶ್ರಮದ ಗೌರವಾಧ್ಯಕ್ಷರಾದ ಶರಣು.ಪಾ. ಹಿರೇಮಠ ಶ್ರೀ ಕೃಷ್ಣದೇವರಾಯ ಸಂಸ್ಥೆ ಹಾಗೂ ಅರುಣೋದಯ ಶಿಕ್ಷಣ ಸಂಸ್ಥೆ ಈ ಎರಡು ಸಂಸ್ಥೆಗಳು ಹಲವಾರು ಸಮಾಜಪರ ಅನಾಥಪರ ಕಾರ್ಯಗಳನ್ನು ರೂಪಿಸಿ ಒಂದು ಸುಂದರ ಸಮಾಜಕ್ಕೆ ಕಾರಣವಾಗಿವೆ. ಇಂದು ಕಾರುಣ್ಯ ಕುಟುಂಬದ ಕೂಸುಗಳ ಜೊತೆ ಎಲ್ಲಾ ವಿದ್ಯಾರ್ಥಿಗಳು ಸ್ಪಂದನೆ ಮಾಡಿ ಅವರ ಯೋಗಕ್ಷೇಮವನ್ನು ವಿಚಾರಿಸಿಸೇವೆಗೈಯುತ್ತಿರುವುದು ಸಮಾಜಕ್ಕೆ ಒಂದು ದೊಡ್ಡ ಸಂದೇಶ ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಲತಾ ಆಡಳಿತಾಧಿಕಾರಿಗಳು ಅರುಣೋದಯ ಶಿಕ್ಷಣ ಸಂಸ್ಥೆ ಪಗಡದಿನ್ನಿ ಕ್ಯಾಂಪ್. ಕೆ ರಾಘವೇಂದ್ರ ಸಹ ಆಡಳಿತಾಧಿಕಾರಿಗಳು ಅರುಣೋದಯ ಶಿಕ್ಷಣ ಸಂಸ್ಥೆ ಪಗಡದಿನ್ನಿ ಕ್ಯಾಂಪ್, ಚನ್ನಬಸಯ್ಯ ಸ್ವಾಮಿ ಹಿರೇಮಠ ಆಡಳಿತಾಧಿಕಾರಿಗಳು ಕಾರುಣ್ಯ ಆಶ್ರಮ,ಸುಜಾತ ಚನ್ನಬಸವ ಮೇಲ್ವಿಚಾರಕರು ಕಾರುಣ್ಯ ಆಶ್ರಮ,ಗೀತಾ ಕುಲಕರ್ಣಿ ವ್ಯವಸ್ಥಾಪಕರು ಕಾರುಣ್ಯ ಆಶ್ರಮ,ರೇಖಾ ಸುಕಾಲಪೇಟೆ ಸೇವಾಕರ್ತರು ಕಾರುಣ್ಯ ಆಶ್ರಮ,ಸರೋಜಾ ಸೇವಾಕರ್ತರು ಕಾರುಣ್ಯ ಆಶ್ರಮ ಹಾಗೂ ಶ್ರೀ ಕೃಷ್ಣದೇವರಾಯ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
