;

ಸಿಂಧನೂರು :ಸಂವಿಧಾನದ ಶಿಲ್ಪಿ, ಭಾರತರತ್ನ,ಡಾ.ಬಿ.ಆರ್ ಅಂಬೇಡ್ಕರ್ ರವರ ಮೂರ್ತಿ ಶ್ರೀಪುರಂ ಜಂಕ್ಷನ್ ವರೆಗೆ ಅದ್ದೂರಿ ಬೈಕ್ ರ್ಯಾಲಿ…!!!

ಸಿಂಧನೂರು :ಸಂವಿಧಾನದ ಶಿಲ್ಪಿ, ಭಾರತರತ್ನ,ಡಾ.ಬಿ.ಆರ್ ಅಂಬೇಡ್ಕರ್ ರವರ ಮೂರ್ತಿ
ಶ್ರೀಪುರಂ ಜಂಕ್ಷನ್ ವರೆಗೆ ಅದ್ದೂರಿ ಬೈಕ್ ರ್ಯಾಲಿ.

ಮಾನವಿ ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ತಯಾರಾದ ಸಂವಿಧಾನದ ಶಿಲ್ಪಿ,ಭಾರತರತ್ನ, ಮಹಾನಾಯಕ, ಡಾ.ಬಿ.ಆರ್ ಅಂಬೇಡ್ಕರ್ ರವರ ಮೂರ್ತಿ ಸಿಂಧನೂರು ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಹರ್ಷಚಿತ್ತರಾದ ದಲಿತ ಮುಖಂಡರು ನಗರದ ಪಿ. ಡಬ್ಲೂ.ಡಿ.ಕ್ಯಾಂಪಿನ ಅಂಬೇಡ್ಕರ್ ವ್ರತ್ತದ ನಾಮಫಲಕಕ್ಕೆ ಹಾರ ಹಾಕಿ ಜಯಘೋಷ ಕೂಗಿ ಕ್ರಾಂತಿಗೀತೆ ಮೊಳಗಿಸಿ ಸಿಹಿಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.ತಾಲೂಕಿನ ಶ್ರೀ ಪುರಂಜಕ್ಷನ್ ವರಿಗೆ ನೂರಾರು ವಿವಿಧ ದಲಿತಪರ ಸಂಘಟನೆಯ ಮುಖಂಡರು, ಯುವಕರು ಸೇರಿ ಆದ್ದೂರಿಯಾಗಿ ಬೈಕ್ ರ್ಯಾಲಿ ಮುಖಾಂತರ ಕಿತ್ತೂರು ರಾಣಿ ಚೆನ್ನಮ್ಮ ವ್ರತ್ತ, ಕನಕದಾಸ ವ್ರತ್ತ, ವಾಲ್ಮೀಕಿ ವ್ರತ್ತ, ಮತ್ತು ಮಹಾತ್ಮ ಗಾಂಧಿ ವೃತ್ತದಲ್ಲಿ ಘೋಷಣೆ ಕೂಗುತ್ತಾ ರಸ್ತೆ ಮಾರ್ಗವಾಗಿ ವಿವಿಧ ಗ್ರಾಮಗಳ ಮೂಲಕ ಬೈಕ್ ರ್ಯಾಲಿ ಮುಖಾಂತರ ಡೊಳ್ಳು ಕುಣಿತದ ಮೂಲಕ ಆದ್ದೂರಿಯಾಗಿ ಮೆರವಣಿಗೆ ಶ್ರೀಪುರಂ ಜಂಕ್ಷನ್ ತಲಿಪಿತು.

ಈ ಸಂದರ್ಭದಲ್ಲಿಮಾತನಾಡಿದ ಭೀಮೇಶ್ ಕವಿತಾಳ ಮುಂದಿನ ದಿನಮಾನಗಳಲ್ಲಿ ಎಲ್ಲಾ ವಿವಿಧ ದಲಿತ ಸಂಘಟನೆಯ ಮುಖಂಡರ, ರಾಜಕೀಯ ನಾಯಕರ, ಹಿರಿಯ ನಾಯಕರ ಅಭಿಪ್ರಾಯ ಸಂಗ್ರಹಸಿಕೊಂಡು ದಿನಾಂಕ ನಿಗದಿ ಮಾಡಿ ಸಂವಿಧಾನ ಶಿಲ್ಪಿ, ಭಾರತರತ್ನ, ಡಾ.ಬಿ.ಆರ್ ಅಂಬೇಡ್ಕರ್ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಹನುಮಂತಪ್ಪ ಗೋಮರ್ಸಿ, ನರಸಪ್ಪ ಕಟ್ಟಿಮನೆ,ನಾಗರಾಜ ಸಾಸಲಮರಿ,ಹನುಮಂತ ಹಂಪನಾಳ, ಅಯ್ಯಪ್ಪ ಮಲ್ಲಾಪೂರು, ಶರಣಪ್ಪ ಗಿಣಿವಾರ, ನಿರುಪಾದಿ ನಾಗಲಾಪುರ, ಬುಡನ್ ಸಾಬ್, ನಾಗರಾಜ ಹೆಡಿಗಿಬಾಳ, ಹುಲುಗಪ್ಪ ಮಲ್ಕಾಪೂರು, ವೀರೇಶ ಹೊಸಳ್ಳಿ,ಯಂಕೋಬ ನಾಯಕ ಬೂತದಿನ್ನಿ, ಅಮಿರಾಜ್, ಎ.ರಾಜು ಸೇರಿದಂತೆ ಇತರರು ಭಾಗವಹಿಸಿದ್ದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;