ರಾಜ್ಯೋತ್ಸವ ಪ್ರಶಸ್ತಿಗೆ ಕು. ಜಿ ಬಿ ವಿನಯ್ ರಾಜ್ ಆಚಾರ್ಯ ಆಯ್ಕೆ. ಕಸ್ತೂರಿ ಸಿರಿಗನ್ನಡ ವೇದಿಕೆ (ರಿ) ರಾಜ್ಯ ಘಟಕ, ಮಂಡ್ಯ ಇವರವತಿಯಿಂದ ರಾಜ್ಯೋತ್ಸವದ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿಗೌರವಿಸಲಾಯಿತು. ವಿಜಯನಗರ ಜಿಲ್ಲೆಯಿಂದ ಪ್ರವಚನ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮದ ಮೌನೇಶ ಆಚಾರ್ಯ ಶಿಲ್ಪಿಗಳು ನಾಗರತ್ನಮ್ಮ ಇವರ ಪುತ್ರರಾದ ವಿನಯ ರಾಜ್ ಆಚಾರ್ಯ ಆಯ್ಕೆಯಾಗಿರುವುದು ಸಂತೋಷದ ವಿಷಯ….
ಕಿರಿಯ ವಯಸ್ಸಿನಲ್ಲೇ ಶ್ರೀ ದೇವಿ ಮಹಾತ್ಮೆ ಯ(ಪುರಾಣದ) ಪ್ರವಚನದಿಂದಾಗಿ ಆಚಾರ್ಯರು ಎಲ್ಲರಿಗೂ ಚಿರಪರಿಚಿತರು. ಅಷ್ಟೇ ಅಲ್ಲದೇ ಪುರೋಹಿತ್ಯ ,ಪುರವಂತಿಕೆ, ಕವಿಗೋಷ್ಠಿ, ವಿಶೇಷ ಉಪನ್ಯಾಸ ನೀಡುವುದು ವಿನಯ್ ಇವರ ಪ್ರಮುಖ ಹವ್ಯಾಸಗಳು.
ತಂದೆ ತಾಯಿ ಗುರುಗಳ ಆಶೀರ್ವಾದ ಹಾಗೂ ಸ್ನೇಹಿತರ ಹಾರೈಕೆಯಿಂದ ಈ ಪ್ರಶಸ್ತಿ ಲಭಿಸಿದ್ದು ನಿಜಕ್ಕೂ ನಮಗೆ ಹೆಮ್ಮೆಯ ಸಂಗತಿ. ಏನೇ ಆಗಲಿ ತಮ್ಮ ವಿದ್ಯಾಭ್ಯಾಸ & ವೃತ್ತಿಯೊಂದಿಗೆ ಇಂತಹ ವಿಶೇಷ ಅಭಿವ್ಯಕ್ತಿಯನ್ನು ರೂಢಿಸಿಕೊಂಡ ಇಂತಹ ಯುವಕರು ಸಾಧನೆಯ ಉತ್ತುಂಗಕ್ಕೆರಲೆಂದು ನಮ್ಮ ಎಚ್ಚರಿಕೆ ಪತ್ರಿಕೆಯ

ಆಶಯ.. ವರದಿ- ಪ್ರಕಾಶ್ ಆಚಾರ್ ಇಟ್ಟಿಗಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
