ದೇಸಿಯ ಕ್ರೀಡೆಗೆ ಮಹತ್ವ ನೀಡಬೇಕು ಎಂದು ಹೇಳಿದರು ಎಂ.ಪಿ.ಲತಾ ಮಲ್ಲಿಕಾರ್ಜುನ್…!!!

ಕ್ರೀಡೆಗಳು ಮನಸ್ಸಿಗೆ ಮುದ ಕೊಡುತ್ತವೆ,ಕ್ರಿಕೆಟ್ ಅಲ್ಲದೆ ದೇಸಿಯ ಕ್ರೀಡೆಗೆ ಮಹತ್ವ ನೀಡಬೇಕು ಎಂದು ಹೇಳಿದರು ಎಂ.ಪಿ.ಲತಾ ಮಲ್ಲಿಕಾರ್ಜುನ್.

ಕಣವಿಹಳ್ಳಿ: ಕ್ರೀಡೆಗಳಿಂದ ಗ್ರಾಮದಲ್ಲಿ ಒಗ್ಗಟ್ಟು,ಪ್ರೀತಿಯ ಸಂಬಂಧ,ಆರೋಗ್ಯಕರ ವಾತಾವರಣವನ್ನು ನಾವು ಕಾಣ ಬಹುದಾಗಿದೆ, ದೇಹಾರೋಗ್ಯ ಮತ್ತು ಮನಸ್ಸಿಗೆ ಮುದ ನೀಡುವ ಶಕ್ತಿ ಯಾವುದಕ್ಕಾದರೂ ಇದ್ದರೆ ಅದು ಆಟಗಳಿಂದ ಮಾತ್ರ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.

ಅವರು ಕಣವಿಹಳ್ಳಿ ಗ್ರಾಮದಲ್ಲಿ KPL ಪ್ರೀಮಿಯರ್ ಲೀಗ್ ಟೂರ್ನಮೆಂಟ್ ನಲ್ಲಿ ಭಾಗವಹಿಸಿ ಮಾತನಾಡುತ್ತಾ, ಆಟ ಅಂದರೆ ಕೇವಲ ಕ್ರಿಕೆಟ್ ಮಾತ್ರ ಅಲ್ಲ, ದೇಸೀಯ ಆಟಗಳಿಗೂ ಮಹತ್ವ ಕೊಡಿ, ಜೊತೆಗೆ ಹುಡುಗರಂತೆ ಹುಡುಗಿಯರಿಗೂ ಟೂರ್ನಮೆಂಟ್ ಆಯೋಜನೆ ಮಾಡಿ, ನನ್ನ ಸಂಪೂರ್ಣ ಸಹಕಾರ ಇದೆ ಎಂದರು.

ಸಭೆಯಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಲಕ್ಷ್ಮಿ ಚಂದ್ರಶೇಖರ್,ಯುವ ಕಾಂಗ್ರೆಸ್ ಅಧ್ಯಕ್ಷರಾದ ಮತ್ತೂರು ಬಸವರಾಜ್, ಶಿವರಾಜ್ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು..

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend