ಹರಪನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ ಪಿ ವೀಣಾ ಮಹಾಂತೇಶ್!!
ರಾಷ್ಟ್ರೀಯ ಕಾಂಗ್ರೆಸ್ ನ ಸದಸ್ಯತ್ವ ಅಭಿಯಾನದ ಪ್ರಯುಕ್ತ, ಕರ್ನಾಟಕ ಕಾಂಗ್ರೆಸ್ ಸಮಿತಿಯ ನಿರ್ದೇಶನದಂತೆ ಹರಪನಹಳ್ಳಿ ಕ್ಷೇತ್ರದ ಜನಪ್ರಿಯ ನಾಯಕಿ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ #ಎಂ_ಪಿ_ವೀಣಾ_ಮಹಾಂತೇಶ್ ಅವರು ಇಂದು ಕ್ಷೇತ್ರ ವ್ಯಾಪ್ತಿಯ ಈಶಾನ್ಯ ದಿಕ್ಕಿನಲ್ಲಿರುವ #ನಂದಿಬೇವೂರು ಗ್ರಾಮದ #ಶ್ರೀ_ಬಸವೇಶ್ವರ ದೇವಸ್ಥಾನಕ್ಕೆ ಪೂಜೆ ಸಲ್ಲಿಸುವ ಮೂಲಕ #ಸದಸ್ಯತ್ವ_ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಅಪಾರ ಪಕ್ಷದ ಅಭಿಮಾನಿಗಳನ್ನು ಒಂದು ಕಡೆ ಸೇರಿಸಿ ಅವರಿಗೆಲ್ಲ ಸದಸ್ಯತ್ವ ನೀಡಿ ಕಾಂಗ್ರೆಸ್ ಪಕ್ಷ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕೈಗೊಂಡಿದ್ದ ಜನಪರ ಯೋಜನೆಗಳನ್ನು ವಿವರಿಸಿ, ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನು ಪಡೆಯುವ ಮೂಲಕ ಪಕ್ಷವನ್ನು ಬೆಂಬಲಿಸಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ , ಹಳ್ಳಿ ರಮೇಶ ಶ್ರೀಮತಿ , ಆರ್ ಎಂ ಶೀಲಾ ಶ್ರೀಮತಿ, ಚೆಲುವಾದಿ ಪಾರ್ವತಮ್ಮ ಶ್ರೀ, ಆನೆ ಸಿದ್ದೇಶ್
ಕಾಂಗ್ರೆಸ್ ಮುಖಂಡರುಗಳಾದ ಶ್ರೀ, ವ್ಯಾಪಾರಿ ಬಸವರಾಜಪ್ಪ , ಶ್ರೀ, ಕಡುಬ್ಗೆರೆ ಪರಮೇಶಪ್ಪ , ಶ್ರೀ, ಕುರುಬರ ಹೇಮಣ್ಣ , ಶ್ರೀ, ಶ್ರೀ, ಇಟಗಿ ಹಾಲೇಶಪ್ಪ, ಶ್ರೀ, ಬಸವರಾಜಪ್ಪ ಶ್ರೀ, ಡಾಣಿ ಬಸಪ್ಪ , ಶ್ರೀ, ಬಡಿಗರ್ ಬಸಪ್ಪ , ಶ್ರೀ, ಕುಲಹಳ್ಳಿ ಚಂದ್ರಪ್ಪ ಶ್ರೀ, ಆರ್ ಎಂ ಪಾಲಕ್ಷಯ , ಶ್ರೀ, ಮಡ್ಡಿ ಶಿವಪ್ಪ. , ಶ್ರೀ, ಸಿದ್ದೇಶ್ , ಶ್ರೀ, ಜಯಪ್ಪ , ಶ್ರೀಮತಿ, ಕೆ ರೇಖಾ ಬಡಿಗೇರ್ ಶ್ರೀಮತಿ, ಸುವರ್ಣ , ಶ್ರೀಮತಿ, ಆರ್ ಎಂ ರೇಖಾಹಲವಾರು ಮುಖಂಡರು ಉಪಸ್ಥಿತರಿದ್ದರು..
ವರದಿ.ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
