ಸಿಂಧನೂರು : ಕರ್ನಾಟಕ ರೈತ ಸಂಘದಿಂದ ರೈತಾಪಿ ವರ್ಗಕ್ಕೆ ತುರ್ತು ಪರಿಹಾರ ಘೋಷಣೆಗೆ ಒತ್ತಾಯ.
ಸಿಂಧನೂರು ತಾಲೂಕಿನ ಒಣಬೇಸಾಯ ಪ್ರದೇಶವಾದ ತುರ್ವಿಹಾಳ್ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಭಾಗದಲ್ಲಿ ತೊಗರಿಯನ್ನು 4989 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದು, ಅತಿಯಾದ ಮಳೆಯಿಂದಾಗಿ ಗಿಡದಲ್ಲಿಯೇ ಮೊಳಕೆ ಒಡೆದು ಸಂಪೂರ್ಣವಾಗಿ ನಾಶವಾಗಿದೆ. ಕಡಲೆ ಬೆಳೆಯುವ 5958 ಹೆಕ್ಟೇರ್ ಪ್ರದೇಶದಲ್ಲಿ ಅತಿಯಾದ ತೇವಾಂಶದಿಂದ ಹಾಳಾಗಿದ್ದು, ಅರ್ಧಕ್ಕಿಂತ ಹೆಚ್ಚು ಪ್ರದೇಶದಲ್ಲಿ ಕಡಲೆ ಬೆಳೆಯು ಮಳೆನೀರಿಗೆ ಕೊಚ್ಚಿಕೊಂಡು ಹೋಗಿದೆ. ಭೂರಹಿತ ಕೃಷಿ ಕೂಲಿಕಾರರು ಜಮೀನಿನ ಭೂಮಾಲೀಕರಿಗೆ ಸಾಲ ಮಾಡಿ ಹಣವನ್ನು ಮುಂಗಡವಾಗಿ ನೀಡಿ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಅಕಾಲಿಕ ಮಳೆಯಿಂದಾಗಿ ಅವರ ಬದುಕು ಮೂರಾಬಟ್ಟೆಯಾಗಿದೆ. ಆದ್ದರಿಂದ ಜಿಲ್ಲಾಡಳಿತ, ತಾಲೂಕಾಡಳಿತ ಪರಿಹಾರ ಮೊತ್ತವನ್ನು ಜಮೀನು ಮಾಡಿದವರಿಗೆ ಭತ್ತಕ್ಕೆ 50ಸಾವಿರ, ತೊಗರಿ ಮತ್ತು ಇನ್ನಿತರ ಬೆಳೆಗಳಿಗೆ 30ಸಾವಿರ ತುರ್ತು ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
ಒಂದು ವಾರದೊಳಗೆ ಹೋಬಳಿಗೊಂದರಂತೆ ಖರೀದಿ ಕೇಂದ್ರ ಪ್ರಾರಂಭಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪ್ರತಿ ಕ್ವಿಂಟಲ್ ಭತ್ತಕ್ಕೆ ಸಾವಿರ ರೂ, ತೊಗರಿಗೆ ಕ್ವಿಂಟಾಲಿಗೆ ಹತ್ತು ಸಾವಿರ ನಿಗದಿಪಡಿಸಿ, ಭತ್ತ ಖರೀದಿಸಿದ ಒಂದು ವಾರದೊಳಗೆ ಖರೀದಿ ಮೊತ್ತವನ್ನು ರೈತರ ಖಾತೆಗೆ ಪಾವತಿಸಬೇಕು. ರೈತರು ವಿವಿಧ ಹಣಕಾಸು ಸಂಸ್ಥೆ ಮತ್ತು ಬ್ಯಾಂಕುಗಳಲ್ಲಿ ಕೃಷಿ ಸಾಲವನ್ನು ಪಡೆದುಕೊಂಡಿದ್ದು, ಬ್ಯಾಂಕಿನವರು ರೈತರ ಕೃಷಿ ಸಲಕರಣೆಗಳಾದ ಟ್ರ್ಯಾಕ್ಟರ್ ಜಪ್ತಿ ಮಾಡಲು ಮುಂದಾಗಿದ್ದು ಇದನ್ನು ತಡೆಯಲು ಸರಕಾರ ಬ್ಯಾಂಕುಗಳಿಗೆ ಆದೇಶ ನೀಡಬೇಕು. ಭತ್ತಕ್ಕೆ ಡಾ. ಸ್ವಾಮಿನಾಥನ್ ವರದಿ ಪ್ರಕಾರ ಬೆಲೆ ನಿಗದಿ ಮಾಡಬೇಕೆಂದು ಕರ್ನಾಟಕ ರೈತ ಸಂಘದಿಂದ ತಹಸೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ, ಜಿಲ್ಲಾದಿಕಾರಿಗಳಿಗೆ, ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿ.ಎನ್ ಯರದಿಹಾಳ ಜಿಲ್ಲಾ ಕಾರ್ಯದರ್ಶಿ,ಬಸವರಾಜ್ ಬೆಳಗುರ್ಕಿ ತಾಲೂಕು ಕಾರ್ಯದರ್ಶಿ,ರಮೇಶ್ ಪಾಟೀಲ ಬೇರಗಿ ತಾಲೂಕ ಅಧ್ಯಕ್ಷರು, ಚಿಟ್ಟಿಬಾಬು ತಾಲೂಕ್ ಉಪಾಧ್ಯಕ್ಷರು, ರಾಘವೇಂದ್ರ ಸಹ ಕಾರ್ಯದರ್ಶಿ, ಗಂಗಾರಾಜ, ಮಹದೇವ ಅಮರಾಪುರ ಇನ್ನೂ ಅನೇಕ ರೈತರು ಮಹಿಳೆಯರು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
