ಸಿಂಧನೂರು: ಕನಕದಾಸ ಮಾನವೀಯ ಮೌಲ್ಯಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಿ-ಶಾಸಕ ನಾಡಗೌಡ.
ಕನಕ ಜಯಂತಿ ಅಂಗವಾಗಿ ನಗರದ ಕನಕ ವೃತ್ತದಲ್ಲಿ ಕನಕ ದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು ಜಾತಿ, ಧರ್ಮ, ಬೇಧ-ಭಾವ ಎನಿಸದೆ ಎಲ್ಲಾರು ಒಂದೇ ಎನ್ನುವ ಭಾವನೆಯನ್ನು, ಜೀವನದಲ್ಲಿ ಅವುಗಳನ್ನು ಆಚರಣೆಗೆ ತರಬೇಕು ಅಂದಾಗ ಮಾತ್ರ ಜಯಂತಿಗೆ ಅರ್ಥ ಬರುತ್ತದೆ ಎಂದು ಹೇಳಿದರು.
ಕೇವಲ ನೇಪಮಾತ್ರಕ್ಕೆ ಜಯಂತಿ ಆಚರಣೆ ಮಾಡದೆ ಅವರು ಹಾಕಿಕೊಟ್ಟ ವಿಚಾರಗಳನ್ನು ಅವರು ನಡೆದು ಬಂದ ಹಾದಿಯಲ್ಲಿ ಮುನ್ನಡೆಯಬೇಕು.15 ಮತ್ತು 16ನೇ ಶತಮಾನದಲ್ಲಿ ಕುಲ ಕುಲ ಎಂದು ಹೊಡೆದಾಡದಿರು ಕುಲದ ನೆಲೆಯನಾದರೂ ಬಲ್ಲಿರಾ ಎಂದು ಗಾಢವಾದ ಮಾತನ್ನು ಮನುಷ್ಯರಲ್ಲಿ ಮೇಲು ಕೀಳು ಎಂಬ ಬೇದಭಾವ ಬಿಟ್ಟು ನಾವೆಲ್ಲರೂ ಒಂದೇ ಎಂದು ಸಮಾಜದಲ್ಲಿ ಜಾತ್ಯಾತೀತ ಮೌಲ್ಯಗಳನ್ನು ಕನಕದಾಸರು ನೀಡಿದ್ದಾರೆ ಎಂದು ಮಾಜಿ ಸಂಸದ ಕೆ. ವೀರೂಪಾಕ್ಷಪ್ಪ ಹೇಳಿದರು.
ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ನಗರ ಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ತಾಲೂಕು ದಂಡಾದಿಕಾರಿಗಳಾದ ಮಂಜುನಾಥ ಭೋಗಾವತಿ, ಉಪಾಧ್ಯಕ್ಷ ಮುರ್ತುಜಾ ಹುಸೇನ್, ಸದಸ್ಯರಾದ ಚಂದ್ರಶೇಖರ್ ಮೈಲಾರ, ಪ್ರಶಾಂತ ಕಿಲ್ಲದ್, ಮಾಜಿ ಜಿಪಂ ಸದಸ್ಯ ಶಿವನಗೌಡ ಗೋರೆಬಾಳ, ದೊಡ್ಬಸವರಾಜ ಪಿ.ಎಲ್.ಡಿ. ಬ್ಯಾಂಕ ಅಧ್ಯಕ್ಷ , ಮಾಜಿ ಪುರಸಭೆ ಅಧ್ಯಕ್ಷ ಕೆ.ಮರಿಯಪ್ಪ, ವಾಲ್ಮೀಕಿ ಸಮಾಜದ ತಾಲೂಕಾಧ್ಯಕ್ಷ ವೆಂಕೋಬ ನಾಯಕ, ಎಮ್ಎಸ್ ಶ್ರೀನಿವಾಸ ಗೌಡ, ತಾಲೂಕು ಕುರುಬ ಸಮಾಜ ತಾಲೂಕಾಧ್ಯಕ್ಷ ಪೂಜಪ್ಪ ಪೂಜಾರಿ, ಸಮಾಜದ ಮುಖಂಡರಾದ ನಿರುಪಾದದೆಪ್ಪ ವಕೀಲರು, ಕೆ.ಭೀಮಣ್ಣ, ಅಮರೇಶ ಉಪಸ್ಥಿತಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
