;

ಮೂರು ಕರಾಳ ಕೃಷಿ ಕಾಯಿದೆಗಳನ್ನು ಹಿಂಪಡೆದ ನಿರ್ಧಾರಕ್ಕೆ ಹರ್ಷ ವ್ಯಕ್ತಪಡಿಸಿದ ಹರಪನಹಳ್ಳಿ ಕ್ಷೇತ್ರದ ಜನಪ್ರಿಯ ನಾಯಕಿ ಎಂ ಪಿ ವೀಣಾ ಮಹಾಂತೇಶ್!!

ಮೂರು ಕರಾಳ ಕೃಷಿ ಕಾಯಿದೆಗಳನ್ನು ಹಿಂಪಡೆದ ನಿರ್ಧಾರಕ್ಕೆ ಹರ್ಷ ವ್ಯಕ್ತಪಡಿಸಿದ ಹರಪನಹಳ್ಳಿ ಕ್ಷೇತ್ರದ ಜನಪ್ರಿಯ ನಾಯಕಿ ಎಂ ಪಿ ವೀಣಾ ಮಹಾಂತೇಶ್!!

ದೇಶದ ರೈತರಿಗೆ ಮಾರಕವಾಗುವ ಮೂರು ಕರಾಳ ಕೃಷಿ ಕಾಯಿದೆಗಳನ್ನು ರೈತರ ಒಂದು ವರ್ಷದ ಸುದೀರ್ಘ ಹೋರಾಟಕ್ಕೆ ಮಣಿದು ಹಿಂಪಡೆದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ, ಈ ನಿರ್ಧಾರವನ್ನು ಸಂಸತ್ ನಲ್ಲಿ ಯಾವುದೇ ಮುಲಾಜಿಲ್ಲದೇ ಹಿಂಪಡೆಯಬೇಕೆಂದು ಹರಪನಹಳ್ಳಿ ಕ್ಷೇತ್ರದ ಜನಪ್ರಿಯ ನಾಯಕಿ, ಕೆಪಿಸಿಸಿ ಮಾದ್ಯಮ ವಿಶ್ಲೇಷಕಿ ಎಂ ಪಿ ವೀಣಾ ಮಹಾಂತೇಶ್ ಆಗ್ರಹಿಸಿದರು.

ರೈತರು ನಡೆಸಿದಂತಹ ಹೋರಾಟ, ಅವರ ಹೋರಾಟಕ್ಕೆ ದೇಶದಾದ್ಯಂತ ಕೈಜೋಡಿಸಿ ಹೋರಾಟಕ್ಕೆ ಧುಮುಕಿದ ಹಲವು ವಿರೋಧ ಪಕ್ಷಗಳು, ಸಂಘ, ಸಂಸ್ಥೆಗಳ ಜೊತೆಗೆ ತಾವೂ ಕಾಂಗ್ರೆಸ್ ಪಕ್ಷದ ಆದೇಶದಂತೆ ಹರಪನಹಳ್ಳಿಯಲ್ಲಿ ರೈತರೊಟ್ಟಿಗೆ ಹೋರಾಟಕ್ಕೆ ಧುಮುಕಿದ ದಿನಗಳನ್ನು ನೆನೆದು ಬೇಸರದ ಭಾವನೆಯನ್ನು ವ್ಯಕ್ತಪಡಿಸಿದರು.

ಜನಹಿತಕ್ಕಾಗಿ ನಾವೂ, ರೈತರ ಹಿತಕ್ಕಾಗಿ ನಮ್ಮ ಸರ್ಕಾರ ಎಂಬುದಾಗಿ ಅಧಿಕಾರ ಹಿಡಿದ ಬಿಜೆಪಿ ಸರ್ಕಾರ ರೈತರ ನಿರಂತರ ಹೋರಾಟದಲ್ಲಿ ಹಲವು ಬಗೆಯ ತೊಂದರೆಗಳನ್ನು ನೀಡಿ, ಅವರಿಗೆ ದೇಶದ್ರೋಹ ಪಟ್ಟ ಕಟ್ಟುವಲ್ಲಿ, ಸುಮಾರು ಏಳು ನೂರು ರೈತರ ಸಾವಿಗೆ ಕಾರಣೀಭೂತರಾಗಿದ್ದು ತುಂಬಾ ದುಃಖಕರ ಸಂಗತಿ. ಕೇಂದ್ರ ಕೃಷಿ ಮಂತ್ರಿಯ ಮಗ ಕಾರು‌ ಹರಿಸಿ ರೈತರ ಮಾರಣಹೋಮಕ್ಕೆ ಸಾಕ್ಷಿಯಾಗಿದ್ದು ಬೇಸರ! ಹಿಂದಿನ ಒಂದು ವರ್ಷದ ಹಲವು ಬಗೆಯ ಹೋರಾಟ ಇತಿಹಾಸದ ಪುಟಗಳಲ್ಲಿ ಉಳಿಯುವಂತಾಗಿದೆ ಎಂಬುದಾಗಿ ವಿಶ್ಲೇಷಿಸಿದರು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;