;

ಎಸ್. ಐ. ಎಸ್.ಕಂಪನಿ ವತಿಯಿಂದ ಭದ್ರತಾ ಸಿಬ್ಬಂದಿಗೆ, ತರಬೇತಿ…!!!

ಎಸ್. ಐ. ಎಸ್.ಕಂಪನಿ ವತಿಯಿಂದ ಭದ್ರತಾ ಸಿಬ್ಬಂದಿಗೆ, ತರಬೇತಿ.
ಬಳ್ಳಾರಿ,ದಿನಾಂಕ 15.11.2021.ರಂದು,ಗಣಿನಗರಿ ಯಲ್ಲಿ ಬಳ್ಳಾರಿ ಬೆಟ್ಟ, ದಲ್ಲಿರುವ ಎಸ್, ಐ, ಎಸ್, ಭದ್ರತಾ ಸಿಬ್ಬಂದಿ ಯವರಿಗೆ , ಉತ್ತಮ ತರಬೇತಿ ನೀಡಿದರು.
ಎಸ್. ಐ. ಎಸ್. ಕಂಪನಿ ವತಿಯಿಂದ, ನುರಿತ ತರಬೇತುದಾರ, ಜಿ.ಕಾಂತೇಶ್ ರಿಟೇರ್ಡ್ ಮಿಲ್ಟ್ರಿ, ಇವರಿಂದ ಇಂದು ತರಬೇತಿ ಕೊಟ್ಟರು.ತರಬೇತಿಯಲ್ಲಿ, ಜಿ ಕಾಂತೇಶ್ ಅವರು
ಭದ್ರತಾ ಸಿಬ್ಬಂದಿ ಯವರಿಗೆ , ಆಕಸ್ಮಿಕವಾಗಿ ಬೆಂಕಿ ಗುಡ್ಡದಲ್ಲಿ ಕಾಣಿಸಿಕೊಂಡರೆ, ಅದನ್ನು ಹೇಗೆ ಮುಂದೆ ಹರಡದಂತೆ, ಮತ್ತು ಹೇಗೆ ನಂದಿಸಬೇಕು, ಹಾಗು ಮುಂಜಾಗೃತಿಯನ್ನು ಹೇಗೆ ತೆಗೆದುಕೊಳ್ಳಬೇಕು, ಎಂಬುದರ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು. ವೀಜಲ್ ಶಬ್ದ ಮಾಡಬೇಕು, ಎಂದು ಹೇಳಿ, ಶಿಸ್ತಿನ ಬಗ್ಗೆ, ಪ್ರತಿ ದಿನಬೆಟ್ಟವನ್ನು, ವೀಕ್ಷಿಸಲು ಬರುವ ಪ್ರ ವಾಸಿಗರನ್ನು, ಉತ್ತಮ ನಡತೆಯಿಂದ, ಅವರಿಗೆ ಇಲ್ಲಿರುವ ತಾಣಗಳನ್ನು ಉದ್ದೇಶಿಸಿ,ಮಾರ್ಗದರ್ಶನ ನೀಡಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಮುಂಜಾಗೃತಕ್ರಮ ತೆಗೆದು ಕೊಳ್ಳ ಬೇಕು.ಹಾಗು ಶಿಸ್ತಿನಿಂದ ಎಲ್ಲರೂ ಕೆಲಸ ನಿರ್ವಹಿಸಬೇಕು ಎಂದು ತರಬೇತಿಯಲ್ಲಿ ತಿಳಿಸಿದರು.
ತರಬೇತಿಯಲ್ಲಿ ಎಲ್ಲಾ ಭದ್ರತಾ ಸಿಬ್ಬಂದಿಯವರು ಭಾಗವಹಿಸಿದ್ದರು..

ವರದಿ ಎಂ. ಎಲ್. ವೆಂಕಟೇಶ್. ಬಳ್ಳಾರಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;