;

ಅಮ್ಮನಕೇರಿ:ಶಾಸಕ ಸಂತೋಷ ಲಾಡ್ ರಿಂದ ಗ್ರಾಮ ದೀಪೋತ್ಸವ…!!!

ಅಮ್ಮನಕೇರಿ:ಶಾಸಕ ಸಂತೋಷ ಲಾಡ್ ರಿಂದ ಗ್ರಾಮ ದೀಪೋತ್ಸವ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಅಮ್ಮನಕೇರಿ ಗ್ರಾಮದಲ್ಲಿ,ದೀಪಾವಳಿ ಹಬ್ಬದ ಪ್ರಯುಕ್ತ ನವಂಬರ್ 4ರಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸಂತೋಷ ಲಾಡ್ ರವರು. ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಕಾರ್ಯಕರ್ತರೊಡಗೂಡಿ “ಗ್ರಾಮ ದೀಪೋತ್ಸವ” ಆಚರಿಸಿದರು. ಅಮ್ಮನಕೇರಿ ಶ್ರೀಬಸವೇಶ್ವರ ದೇವಸ್ಥಾನ ಹಾಗೂ ಶ್ರೀಕಣವಿಬಸವೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ನಂತರ ಸಂತೋಷ ಲಾಡ್ ರವರು ಕಾರ್ಯಕರ್ತರೊಂದಿಗೆ ಅಮ್ಮನಕೇರಿ ಗ್ರಾಮದ ದಲಿತ ಹಾಗೂ ಕಡು ಬಡವರ ಮನೆಗಳಿಗೆ ಬಣ್ಣ ಹಚ್ಚಿದರು,ಹಾಗೂ ಗ್ರಾಮದ ದೇವಸ್ಥಾನಗಳಿಗೆ ಸುಣ್ಣ ಬಣ್ಣ ಬಳಿಸಿದರು ಮತ್ತು ಗ್ರಾಮದಲ್ಲಿ, ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ದೊರಕಿಸುವಂತೆ ಸ್ಥಳೀಯ ಆಡಳಿತಕ್ಕೆ ಅವರು ತಾಕೀತು ಮಾಡಿದರು.ಅವರೊಂದಿಗೆ ಶಾಸಕ ತುಕಾರಾಂ ಹಾಗೂ ಲೋಕೇಶನಾಯಕ ರವರು ಸಾಥ್ ನೀಡಿದರು. ಕಾಂಗ್ರೇಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಾಗೂ ಜನಪ್ರತಿನಿಧಿಗಳು ಗ್ರಾಮಸ್ಥರು ಇದ್ದರು….

ವರದಿ.ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;