ಮೊಳಕಾಲ್ಮೂರು: ತಾಲೂಕು ಆಡಳಿತ ವತಿಯಿಂದ 66ನೇ ಕನ್ನಡ ರಾಜ್ಯೋತ್ಸವ ಆಚರಣೆ.!

ಮೊಳಕಾಲ್ಮೂರು: ತಾಲೂಕು ಆಡಳಿತ ವತಿಯಿಂದ 66ನೇ ಕನ್ನಡ ರಾಜ್ಯೋತ್ಸವ ಆಚರಣೆ.!

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ (ನ-೦೧) ಇಂದು ತಾಲೂಕು ಕಚೇರಿ ಆವರಣದಲ್ಲಿ 66ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮಣ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ನಾವು ತಾಯಿಯನ್ನು ಎಷ್ಟು ಪ್ರೀತಿಸುತ್ತೇನೆ ಅದೇ ತರ ನಮ್ಮ ಕನ್ನಡ ನಾಡು ನುಡಿಯ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿರಬೇಕು ಎಲ್ಲಾ ಕಡೆಯೂ ಕನ್ನಡ ಹೆಚ್ಚಾಗಿ ಮಾತನಾಡಬೇಕು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಚಾಚುತಪ್ಪದೆ ಕನ್ನಡವನ್ನು ಮಾತನಾಡಬೇಕು ಎಂದರು.
ಈ ಸಂದರ್ಭದಲ್ಲಿ ಸಿಪಿಐ ಉಮೇಶ್ ಮಾತನಾಡಿ ಕನ್ನಡ ಮಾತನಾಡುವ ಜನ ಹೈದ್ರಾಬಾದ್ ಪ್ರಾಂತ್ಯ ಮುಂಬೈ ಪ್ರಾಂತ್ಯ ಮತ್ತು ಮದ್ರಸ್ ಪ್ರಾಂತ್ಯದಲ್ಲಿ ಹಂಚಿ ಹೋಗಿದ್ದರು. ಇದರಿಂದ ಸ್ವಾತಂತ್ರ್ಯಗೊಂಡ ಭಾರತ ಸರ್ಕಾರ 1953 ರಲ್ಲಿ ಸಮಿತಿ ರಚಿಸಿ ವರದಿ ನೀಡಲು ಸೂಚಿಸಿದರು. ಅದರ ಪರಿಣಾಮ 1956 ರಲ್ಲಿ ಕನ್ನಡ ನೆಲ ಜಲ ಸಂಸ್ಕೃತಿ ಮತ್ತು ಕನ್ನಡ ಭಾಷೆ ಮಾತನಾಡುವ ಜನರು ರಾಜ್ಯವಾಗಿ ಮೈಸೂರು ರಾಜ ಉದಯಿಸಿತು. ಆದರೆ ಇಂದಿಗೂ ಕನ್ನಡ ಭಾಷೆ ಮಾತನಾಡುವ ಜನ ಕಡಿಮೆಯಾಗಿದ್ದಾರೆ. ಆದರೆ ಮೊಳಕಾಲ್ಮೂರು ತಾಲೂಕಿನ ಪಕ್ಷದಲ್ಲಿರುವ ಆಂಧ್ರಪ್ರದೇಶ ಕಲ್ಯಾಣದುರ್ಗ ರಾಯದುರ್ಗ ಅನಂತಪುರ ಮೊದಲಾದ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಗಡಿನಾಡಿನ ಕನ್ನಡಿಗರು ಸಮಸ್ಯೆಗಳು ಬಗೆಹರಿದಿಲ್ಲ.

ಬೆಂಗಳೂರು ಕರ್ನಾಟಕದ ರಾಜಧಾನಿ ಯಾಗಿದ್ದರು ಕನ್ನಡ ಮಾತನಾಡುವುದು ಕಡಿಮೆಯಾಗಿದ್ದಾರೆ. ಇಂಗ್ಲಿಷ್ ಭಾಷೆ ಮೋಹದಿಂದಾಗಿ ಕನ್ನಡ ಬಡವಾಗಿದೆ ಕನ್ನಡ ಹಿತರಕ್ಷಣಾ ವೇದಿಕೆ ಕನ್ನಡ ಕಾವಲು ಸಮಿತಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಿಗಳ ಫಲವಾಗಿ ಕನ್ನಡ ಒಂದಿಷ್ಟು ಉಳಿಯುವಂತಾಗಿದೆ ಎಂದು ತಿಳಿಸಿದರು. ಅದೇ ರೀತಿ ಯಾವುದೇ ದೇಶ ಅಭಿವೃದ್ಧಿಯಾಗಬೇಕಾದರೆ ಮಾತೃಭಾಷೆ ಬಹಳ ಮುಖ್ಯ ಉದಾಹರಣೆ ಜಪಾನಿಗರು ಜಪಾನಿ ಭಾಷೆ, ರಷ್ಯನ್ನರು ರಷ್ಯನ್ ಭಾಷೆ, ಬಳಸಿಕೊಂಡು ದೇಶವನ್ನು ಮುಂದುವರಿಸುತ್ತಾರೆ. ಆದರೆ ನಮ್ಮ ದೇಶದಲ್ಲಿ ಅನ್ಯಭಾಷಿಕರ ಹೆಚ್ಚಿರುವುದರಿಂದ ಕನ್ನಡ ಭಾಷೆ ಕಡಿಮೆಯಾಗುತ್ತಿದೆ ಅಂತ ಅನಿಸುತ್ತಿದೆ ಮುಂದಿನ ದಿನಗಳಲ್ಲಿ ಕನ್ನಡವನ್ನು ಬೆಳೆಸಬೇಕೆಂದರೆ ಎಲ್ಲರೂ ಒಗ್ಗಟ್ಟಾಗಿ ಕನ್ನಡವನ್ನು ಬೆಳೆಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಹಸಿಲ್ದಾರ್ ಸುರೇಶ್ ಕುಮಾರ್, ಜಾನಕಿರಾಮ್, ಪಟ್ಟಣ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕಾಂತರಾಜ್, ಸಿಡಿಪಿಓ ಸವಿತಾ, ನಿರೂಪಣೆ ಮಾಡಿದ ಶಿಕ್ಷಕರಾದ ಓಬಣ್ಣ, ಮುರಾರ್ಜಿ, ಜಾಕಿರ್ ಹುಸೇನ್, ಈರಣ್ಣ, ಶ್ರೀರಾಮುಲು, ಮಂಜಣ್ಣ, ಕರವೇ ಕಾರ್ಯಕರ್ತರು ಇನ್ನು ಮುಂತಾದವರು ಉಪಸ್ಥಿತರಿದ್ದರು….

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend