ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹೊಸಹಳ್ಳಿ ಯ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ಅಧ್ಯಕ್ಷರಾದ ಹಾಗೂ ಕಾನಮಡುಗು ದಾಸೋಹ ಮಠದ ಧರ್ಮಾಧಿಕಾರಿಗಳಾದ ಐಮಡಿ ಶರಣಾರ್ಯರು ಕನ್ನಡ ಧ್ವಜಾರೋಹಣವನ್ನು ನೆರವೇರಿಸಿದರು .
ನಂತರ ಮಾತನಾಡಿ ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು ಜೊತೆಯಾಗಿ ದುಡಿಯೋಣ ಜೊತೆಯಾಗಿ ಬೆಳೆಯೋಣ ಎಂದರು.
ಕನ್ನಡ ಎಂದರೆ ಪ್ರೀತಿ. ಕೀರ್ತಿ .ಶಕ್ತಿ. ಗೌರವ. ಹೆಮ್ಮೆ .ಹಿರಿಮೆ .ಉಸಿರಾಗಿದ್ದು ಇದನ್ನು ಉಳಿಸಿ ಬೆಳೆಸೋಣ . ಕವಿ ನಿಸಾರ್ ಅಹಮದ್ ಅವರು ಹೇಳುವ ಹಾಗೆ ಕನ್ನಡ ಉತ್ಸವ ನಿತ್ಯೋತ್ಸವ ಆಗಲಿ ಎಂದು ಹಾರೈಸಿದರು.
ನಂತರ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಾಹಿತಿಗಳು ರವಿಕುಮಾರ್ ಎನ್ ಎಂ ಮಾತನಾಡಿ 12ನೇ ಶತಮಾನದ ಶರಣ ಸಾಹಿತ್ಯದಲ್ಲಿ ಶರಣರು ಮಹಾಮನೆಯಲ್ಲಿ ನುಡಿದ ಮಾತುಗಳು ಮುತ್ತು ಗಳಾಗಿವೆ. ಎಲ್ಲೂ ಸಿಗುವುದಿಲ್ಲ.
ಹಿಂದಿ ಭಾಷೆಯ ನಂತರ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಕನ್ನಡಕ್ಕೆ ಲಭಿಸಿದೆ ಇದು ಕನ್ನಡ ಕರ್ನಾಟಕ ಶ್ರೀಮಂತಿಕೆ ಶ್ರೇಷ್ಠತೆಯನ್ನು ತೋರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ವಿದ್ವಾಂಸರಾದ ಸಾಹಿತಿಗಳು ಡಾ.ಎ . ವೃಷಭೇಂದ್ರ ಚಾರ್. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಎಚ್ಕೆ ವೆಂಕಟೇಶ್ವರ. ಕುಮಾರ ಗೌಡ ಕೆಜಿ. ಕೆ ಸುಭಾಷ್ ಚಂದ್ರ. ತಿಪ್ಪೇಸ್ವಾಮಿ ವಸತಿ. ಶಾಮಸುಂದರ ಸಫಾರಿ. ಧನಂಜಯ. ಸಿದ್ದರಾಮೇಶ್ವರ ಕೆಟಿ. ಮಕ್ಕಳು ಸೇರಿ ಸಾರ್ವಜನಿಕರು ಇತರರು ಉಪಸ್ಥಿತರಿದ್ದರು…

ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
