ದಲಿತರಿಗೆ ಕ್ಷೌರ ಮಾಡುವುದಿಲ್ಲ: ಮಂಡ್ಯ ಜಿಲ್ಲೆಯಲ್ಲಿ ಬಹಿರಂಗ ಅಸ್ಪೃಶ್ಯತೆ ಆಚರಣೆ!!!

ದಲಿತರಿಗೆ ಕ್ಷೌರ ಮಾಡುವುದಿಲ್ಲ: ಮಂಡ್ಯ ಜಿಲ್ಲೆಯಲ್ಲಿ ಬಹಿರಂಗ ಅಸ್ಪೃಶ್ಯತೆ ಆಚರಣೆ!!!!!!!

ಅಸ್ಪೃಶ್ಯತೆ
ಗ್ರಾಮದ ಯಜಮಾನರು ಒಪ್ಪುವುದಿಲ್ಲ ಎಂಬ ನೆಪವೊಡ್ಡಿ ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿ ಇಂದಿಗೂ ಬಹಿರಂಗ ಅಸ್ಪೃಶ್ಯತೆ ಆಚರಿಸುತ್ತಿರುವ ಪ್ರಕರಣ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕಣಿವೆಕೊಪ್ಪಲು ಗ್ರಾಮದಲ್ಲಿ ಕಂಡುಬಂದಿದೆ. ಇದನ್ನು ಪ್ರಶ್ನಿಸಿ ಅದೇ ಗ್ರಾಮದ ದಲಿತ ಮುಖಂಡರು ಮತ್ತು ಸಮಾಜ ಪರಿವರ್ತನೆ ಸಂಘಟನೆಯ ಮುಖಂಡರಾದ ಚೆಲುವರಾಜುರವರ ಪ್ರಶ್ನಿಸಿ ಪ್ರತಿಭಟಿಸಿದ ನಂತರವಷ್ಟೇ ಪೊಲೀಸರು ಗ್ರಾಮಕ್ಕೆ ಆಗಮಿಸಿದ್ದರಿಂದ ದಲಿತರಿಗೆ ಕ್ಷೌರ ಮಾಡಲಾಗಿದೆ.

ದಲಿತ ಮುಖಂಡರಾದ ಚೆಲುವರಾಜುರವರು ಕಣಿವೆಕೊಪ್ಪಲು ಗ್ರಾಮದಲ್ಲಿ ಆರಂಭವಾಗಿರುವ ಸ್ನೇಹಜೀವಿ ಮೆನ್ಸ್ ಬ್ಯೂಟಿ ಪಾರ್ಲರ್‌ನಲ್ಲಿ ಏಕೆ ದಲಿತರಿಗೆ ಕಟಿಂಗ್, ಸೇವಿಂಗ್ ಮಾಡುವುದಿಲ್ಲ, ನಿಮಗೆ ಸಮಸ್ಯೆಯೇನು? ಅವರು ದುಡ್ಡು ಕೊಡುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಹಿಂದೆಯಿಂದಲೂ ಮಾಡಿಲ್ಲ. ಹಾಗಾಗಿ ಈಗಲೂ ಮಾಡುವುದಿಲ್ಲ ಎಂದು ಕ್ಷೌರದ ಅಂಗಡಿಯ ಮಾಲೀಕ ಕುಮಾರ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಸಂವಿಧಾನದ ಅಡಿಯಲ್ಲಿ ಈ ದೇಶ ನಡೆಯುತ್ತಿದೆ ಮತ್ತು ಸಂವಿಧಾನವು ಎಲ್ಲಾ ರೀತಿಯ ಅಸ್ಪೃಶ್ಯತೆಯನ್ನು ನಿಷೇಧಿಸಿದೆ. ನಾವೆಲ್ಲರೂ ಸರ್ವ ಸಮಾನರಾಗಿದ್ದು ನೀವು ಸಾರ್ವಜನಿಕ ಸೇವೆ ನೀಡುವಾಗ ತಾರತಮ್ಯ ಮಾಡುವಂತಿಲ್ಲ ಎಂದು ಚೆಲುವರಾಜುರವರು ತಾಕೀತು ಮಾಡಿದ್ದಾರೆ.

ಇಂದು ಬೆಳಿಗ್ಗೆಯಿಂದ ಇಬ್ಬರು ದಲಿತರಿಗೆ ನೀವು ಕ್ಷೌರ ಮಾಡಲು ನಿರಾಕರಿಸಿದ್ದೀರಿ. ಇದು ಕಾನೂನಿನ ಪ್ರಕಾರ ಅಪರಾಧವಾಗಿದೆ ಎಂದು ಚೆಲುವರಾಜುರವರು ಹೇಳಿದಾಗ ಅಲ್ಲೆ ಕ್ಷೌರ ಮಾಡಿಸಿಕೊಳ್ಳುತ್ತಿದ್ದ ಸವರ್ಣಿಯ ಜಾತಿಗೆ ಸೇರಿದವನೊಬ್ಬ ಹಿಂದೆ ಮಾಡಿಲ್ಲ, ಹೀಗಲೂ ಮಾಡುವುದಿಲ್ಲ ಎಂದು ಜೋರು ಮಾಡಿದ್ದಾರೆ. ತದನಂತರ ಚೆಲುವರಾಜುರವರು ದಲಿತ ಯುವಕರ ಜೊತೆ ಸೇರಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ ಅಂಗಡಿ ಮಾಲೀಕನಿಗೆ ಬುದ್ದಿ ಹೇಳಿ ಅಲ್ಲಿಯೇ ದಲಿತ ಯುವಕರಿಗೆ ಕಟಿಂಗ್ ಸೇವಿಂಗ್ ಮಾಡಿಸಿದ್ದಾರೆ.

 

ಈ ಕುರಿತು ನಾನುಗೌರಿ ಜೊತೆ ಮಾತನಾಡಿದ ಚೆಲುವರಾಜುರವರು “ಇಷ್ಟು ದಿನಗಳಾದರೂ ಹಳ್ಳಿಗಳಲ್ಲಿ ಅಸ್ಪೃಶ್ಯತೆ, ಜಾತಿಪದ್ದತಿ ಜಾರಿಯಲ್ಲಿರುವುದು ದುರಂತ. ಜನ ಎಷ್ಟೇ ವಿದ್ಯಾವಂತರಾದರೂ ಜನ ಸಂವಿಧಾನವನ್ನು ಅರ್ಥ ಮಾಡಿಕೊಂಡಿಲ್ಲ, ಅಸ್ಪೃಶ್ಯತೆ ಆಚರಣೆ ನಿಲ್ಲಿಸಿಲ್ಲ. ಈ ದೇಶದ ಶೇ.95 ರಷ್ಟು ಹಳ್ಳಿಗಳ ಪರಿಸ್ಥಿತಿ ಇದೇ ರೀತಿಯಲ್ಲಿದೆ. ಹಾಗಾಗಿ ನಾವು ಹೋರಾಟ ಮಾಡುವುದು ಅನಿವಾರ್ಯವಾಗಿದೆ” ಎಂದರು.

ನಮ್ಮ ಹೋರಾಟದ ನಂತರ ಕೊನೆಗೂ ಸಣ್ಣ ಜಯ ಸಿಕ್ಕಿದೆ. ನಮ್ಮೂರಿನ ದಲಿತರಿಗೆ ಕ್ಷೌರ ಮಾಡಲಾಗಿದೆ. ಹಂತ ಹಂತವಾಗಿ ಎಲ್ಲಾ ರೀತಿಯ ಅಸ್ಪೃಶ್ಯತೆ ನಿರ್ಮೂಲನೆಗೆ ಹೋರಾಡುತ್ತೇವೆ ಎಂದಿದ್ದಾರೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹಲ್ಲೆರೆ ಎಂಬ ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡಿದ ಏಕೈಕ ಕಾರಣಕ್ಕೆ ಸವಿತಾ ಸಮಾಜದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆ ಜರುಗಿತ್ತು. ಇದಕ್ಕೆ ವ್ಯಾಪಕ ವಿರೋಧ ಕೇಳಿಬಂದ ನಂತರ ತಹಶೀಲ್ದಾರ್‌ರವರು ಗ್ರಾಮಕ್ಕೆ ತೆರಳಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಂಡಿದ್ದರು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend