;

ವಲಯ ಮಟ್ಟದ ವಿದ್ಯಾರ್ಥಿ ಶಿಬಿರಕ್ಕೆ ಚಾಲನೆ…!!!

ವಲಯ ಮಟ್ಟದ ವಿದ್ಯಾರ್ಥಿ ಶಿಬಿರ.

ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯ ವಲಯ ಮಟ್ಟದ ವಿದ್ಯಾರ್ಥಿ ಶಿಬಿರ ಇದೇ ಮಂಗಳವಾರ ಮತ್ತು ಬುಧವಾರ ಬಳ್ಳಾರಿ ನಗರದಲ್ಲಿ ನಡೆಯಿತು. ಸ್ವಾತಂತ್ರ‍್ಯ ಸಂಗ್ರಾಮದ ಧೀರ ಹುತಾತ್ಮ ಶಹೀದ್ ಭಗತ್ ಸಿಂಗ್ ರವರ 114ನೇ ಜನ್ಮ ದಿನದ ಪ್ರಯುಕ್ತ ಆಯೋಜಿಸಲಾಗಿದ್ದ ಈ ಶಿಬಿರದಲ್ಲಿ ಬಳ್ಳಾರಿ, ವಿಜಯನಗರ, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ವಿದ್ಯಾರ್ಥಿ ಪ್ರತಿನಿಧಿಗಳು ಭಾಗಿಯಾಗಿದ್ದರು.

ಎರಡು ದಿನಗಳ ಈ ಶಿಬಿರವನ್ನು ಉದ್ಘಾಟಿಸಿದ ಎಐಡಿಎಸ್‌ಓನ ರಾಜ್ಯಕಾರ್ಯದರ್ಶಿಗಳಾದ ಅಜಯ್ ಕಾಮತ್ ರವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ.., “ಪ್ರಸ್ತುತ ಕಲುಶಿತ ಸಮಾಜದಲ್ಲಿ ಬದುಕುತ್ತಿರುವ ವಿದ್ಯಾರ್ಥಿಗಳ ಮುಗ್ದ ಮನಸ್ಸುಗಳೂ ಸಹ ಕಲುಶಿತಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಪುನರುಜ್ಜೀವನ ಕಾಲದ ಚಿಂತಕರ, ಸ್ವಾತಂತ್ರ‍್ಯ ಹೋರಾಟಗಾರರ, ಕ್ರಾಂತಿಕಾರಿಗಳ ವಿಚಾರಗಳನ್ನು ವಿದ್ಯಾರ್ಥಿಗಳ ಮನಸ್ಸುಗಳಲ್ಲಿ ಬಿತ್ತಿ, ಅನ್ಯಾಯದ ವಿರುದ್ಧದ ಹೋರಾಟದ ಸ್ಪೂರ್ತಿಯನ್ನು ತುಂಬುವ ಉದ್ದೇಶದಿಂದ ಈ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ಭಗತ್ ಸಿಂಗ್, ನೇತಾಜಿಯಂತಹ ಕ್ರಾಂತಿಕಾರಿಗಳು ಕಂಡ ಸ್ವಾತಂತ್ರ‍್ಯ ಭಾರತದ ಕನಸ್ಸು ನನಸಾಗಬೇಕಿದೆ. ಮಾನವನಿಂದ ಮಾನವನ ಮೇಲಿನ ಎಲ್ಲಾ ದೌರ್ಜನ್ಯಗಳನ್ನು ಮಟ್ಟಹಾಕಬೇಕಿದೆ. ಈ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಿದೆ” ಎಂದರು.

ಎಐಡಿಎಸ್‌ಓನ ಅಖಿಲ ಭಾರತ ಉಪಾಧ್ಯಕ್ಷರಾದ ಡಾ. ಎನ್. ಪ್ರಮೋದ್ ರವರು ಮಾತನಾಡುತ್ತಾ.. “ಹೊಸ ಶಿಕ್ಷಣ ನೀತಿಯನ್ನು ಎಲ್ಲಿಯೂ ಯಾರೊಂದಿಗೂ ಚರ್ಚಿಸದೆಯೇ ಏಕಾಏಕಿಯಾಗಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಮೇಲೆ ಹೇರುತ್ತಿದ್ದಾರೆ. ಏಕಪಕ್ಷೀಯವಾಗಿ ನಾಲ್ಕು ವರ್ಷಗಳ ಪದವಿ ಕೊರ್ಸನ್ನು ಹೇರುತ್ತಿದ್ದಾರೆ. ಇದನ್ನು ಎಐಡಿಎಸ್‌ಓ ಖಂಡಿಸುತ್ತದೆ. ವಿದ್ಯಾರ್ಥಿ ವಿರೋಧಿ ಮತ್ತು ಸಂಪೂರ್ಣ ಖಾಸಗೀಕರಣದ ನೀಲಿನಕ್ಷೆಯಾದ ಎನ್.ಈ.ಪಿಯ ವಿರುದ್ಧ ಹೋರಾಡಲು ವಿದ್ಯಾರ್ಥಿಗಳೆಲ್ಲರೂ ಸಜ್ಜಾಗಿ” ಎಂದು ಕರೆನೀಡಿದರು.

ಎಐಡಿಎಸ್‌ಓ ನ ರಾಜ್ಯ ಉಪಾಧ್ಯಕ್ಷರಾದ ಮಹೇಶ್ ರವರು ಮಾತನಾಡುತ್ತಾ.., “ಈ ಶಿಬಿರದಲ್ಲಿ ಪ್ರದರ್ಶಿಸಿದ ದಿ ಲೆಜೆಂಡ್ ಆಫ್ ಭಗತ್ ಸಿಂಗ್ ಸಿನಿಮಾ, ಭಗತ್ ಸಿಂಗ್ ರವರ ಜೀವನದ ಹಲವು ಘಟನೆಗಳನ್ನಾಧರಿಸಿ ಚಿತ್ರಿಸಿದ ಒಂದು ಅದ್ಬುತವಾದ ಸಿನಿಮಾ. ಸಿನಿಮಾದಲ್ಲಿ ಬಂದAತೆ ಭಗತ್ ರವರು ಸ್ವಾತಂತ್ರ‍್ಯಕ್ಕಾಗಿ ೨೩ ವರ್ಷಕ್ಕೇ ಗಲ್ಲುಗಂಬವೇರಿದರು. ಅವರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದರು.

ವಲಯ ಮಟ್ಟದ ಈ ಶಿಬಿರದಲ್ಲಿ ಐದು ಜಿಲ್ಲೆಗಳ ನೂರಾರು ಶಿಬಿರಾರ್ಥಿಗಳು ಭಾಗಿಯಾಗಿದ್ದು ಹಲವು ರೀತಿಯ ಸಾಂಸ್ಕೃತಿಕ ಚಟುವಟಿಕೆಗಳು, ಕ್ರೀಡೆಗಳು ಹಾಗೂ ಹಾಡು, ನಾಟಕ ಮತ್ತು ಪವಾಡ ರಹಸ್ಯ ಬಯಲು ಕಾರ್ಯಗಾರಗಳಲ್ಲಿ ಭಾಗಿಯಾಗಿದ್ದರು. ಭಗತ್ ಸಿಂಗ್ ರವರ ಸೂಕ್ತಿಗಳು ಮತ್ತು ಕಳೆದ ಮೂರ್ನಾಲ್ಕು ದಶಕಗಳಿಂದ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ಬಳ್ಳಾರಿಯಲ್ಲಿ ಕಟ್ಟಿದ ಹಲವಾರು ಯಶಸ್ವಿ ಹೋರಾಟಗಳ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿತ್ತು.

ವರದಿ. ಎಂ. ಎಲ್. ವೆಂಕಟೇಶ್, ಬಳ್ಳಾರಿ,

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;