“ಸೀಗಿ ಹುಣ್ಣಿಮೆಯ ದಿವಸ ಭೂಮಿ ತಾಯಿಗೆ ಚರಗ ಚೆಲ್ಲಿ,ಸಿಹಿ ಉಂಡ ರೈತರು”.
‘ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ ಎಳ್ಳು ಜೀರಿಗೆ ಬೆಳೆಯೋಳ ಭೂತಾಯಿ ಎದ್ದೊಂದು ಘಳಿಗೆ ನೆನೆದೇನೋ’ ಎಂದು ರೈತರು ವರ್ಷವಿಡೀ ಅನ್ನ ನೀಡುವ ಭೂತಾಯಿಗೆ ನಮಿಸುತ್ತಾ ಮುಂದಿನ ಕಾರ್ಯದಲ್ಲಿ ಮಗ್ನರಾಗುತ್ತಾರೆ. ವರ್ಷವಿಡಿ ಹುತ್ತಿ- ಬಿತ್ತಿ ಬೆಳೆದ ಫಸಲನ್ನು ಕಾಣುವ ಶುಭದಿನ ಸಂದರ್ಭ ಭೂತಾಯಿಗೆ ನಮಿಸುವ ಕ್ಷಣಗಳು ನಿಜಕ್ಕೂ ಅಭೂತಪೂರ್ವ. ಪಾಂಡವರು ವನವಾಸ ಮುಗಿಸಿ ಮರಳಿ ನಾಡಿಗೆ ಆಗಮಿಸಿದ ಅವರು ಶಮಿ ವೃಕ್ಷಕ್ಕೆ ಬಂದು ನಮಿಸುತ್ತಾರೆ. ಅವರನ್ನು ಕಳ್ಳ ಒಬ್ಬನು ಹಿಂಬಾಲಿಸುತ್ತಾನೆ ಎಂದು ನಂಬಿಕೆ ಉಂಟು.ಆದ್ದರಿಂದ ಕಳ್ಳನಿಗೆ ಪ್ರತ್ಯೇಕವಾದ ಎಡೆ ಹಾಕಲಾಗುತ್ತದೆ ಆ ಎಡೆ(ನೈವೇದ್ಯ)ವನ್ನು ಅಲ್ಲಯೆ ಬಿಡಬೇಕು ಸಂದರ್ಭದಲ್ಲಿ ರೈತರ ಹೊಲದಲ್ಲಿ ಇರುವ ಬನ್ನಿ ಮರ ದ ಮುಂದೆ ಕರಿ ಕಂಬಳಿ ಹಾಸಿ ಹೊಲದಲ್ಲಿ ಬಿದ್ದಿರುವ 5 ಕಲ್ಲುಗಳನ್ನು ಹುಡುಕಿ ತಂದು ಅವರನ್ನು ಪಂಚಪಾಂಡವರೆಂದು ಕಲ್ಲುಗಳಿಗೆ ತೊಳೆದು ವಿಭೂತಿ ಹರಿಶಿಣ ಕುಂಕುಮ ಹೂಗಳಿಂದ ಅಲಂಕರಿಸಿ ನಂತರ ಮನೆಯಿಂದ ತಂದ ಹೋಳಿಗೆಯನ್ನು ನೈವೇದ್ಯ ಮಾಡಿ ಹೊಲದಲ್ಲಿ ಚರಗ ಮಾಡುವರು. ನಂತರ ಕುಟುಂಬದ ಎಲ್ಲ ಸದಸ್ಯರು ಹೊಲದಲ್ಲಿ ಕುಳಿತು ತಾವು ತಂದಿದ್ದ ಪಾಯಸ, ಹೋಳಿಗೆ, ಮೊಸರು ಜೋಳದ ರೊಟ್ಟಿ ಸಜ್ಜೆ ರೊಟ್ಟಿ,ವಿವಿಧ ಖಾದ್ಯಗಳನ್ನು ಎಲ್ಲರೂ ಸವಿದು ಸಂಜೆಯವರೆಗೂ ಹೊಲದಲ್ಲಿಯೇ ಕಾಲಕಳೆದು ಮನೆಗೆ ಹಿಂತಿರುಗುವರು.

ವರದಿ-ಪ್ರಕಾಶ್ ಇಟ್ಟಿಗಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
