;

ಸಿಂಧನೂರು : ತಾಲೂಕು ಆಡಳಿತ ವತಿಯಿಂದ ಸರಳವಾಗಿ ವಾಲ್ಮೀಕಿ ಜಯಂತಿ ಆಚರಣೆ…!!!

ಸಿಂಧನೂರು : ತಾಲೂಕು ಆಡಳಿತ ವತಿಯಿಂದ ಸರಳವಾಗಿ ವಾಲ್ಮೀಕಿ ಜಯಂತಿ ಆಚರಣೆ.

ಮಿನಿ ವಿಧಾನಸೌಧ ಮತ್ತು ವಾಲ್ಮೀಕಿ ವೃತ್ತದಲ್ಲಿ ಸರಳವಾಗಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಕೋವಿಡ್ ನಿಯಮವನ್ನು ಪಾಲಿಸಿ ಸರಳವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಕೆ.ವಿರೂಪಾಕ್ಷಪ್ಪ ನವರು ಮಾತನಾಡಿ ವಾಲ್ಮೀಕಿ ಮಹರ್ಷಿಗಳು ಬರೆದ ರಾಮಾಯಣ ಮಹಾಕಾವ್ಯ ಇಡೀ ವಿಶ್ವಕ್ಕೆ ಭಾರತ ನೀಡಿದ ಅಭೂತಪೂರ್ವ ಸಾಹಿತ್ಯದ ಕೊಡುಗೆಯಾಗಿದೆ ಎಂದರು.

ನಂತರ ಮಾತನಾಡಿದ ವೆಂಕಟೇಶ ನಾಯಕ ವಾಲ್ಮೀಕಿ ರಚಿಸಿದ ರಾಮಾಯಣ ಗ್ರಂಥ ಸೋದರತ್ವ ಭಾವನೆಗಳನ್ನು ಯಾವ ರೀತಿ ಮೈಗೂಡಿಸಿಕೊಳ್ಳಬೇಕು ಎಂಬುದನ್ನು ತಿಳಿಸಿಕೊಡುತ್ತದೆ. ಭಾರತದ ಇತಿಹಾಸದಲ್ಲಿ ಅದ್ಬುತ ಗ್ರಂಥವಾಗಿದೆ. ಪರಿಶಿಷ್ಟ ಜಾತಿಯ7.5% ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದೇವೆ. ಆದರೆ ಸರ್ಕಾರ ನಮ್ಮ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ ,ಮೀಸಲಾತಿ ನೀಡದಿದ್ದರೆ ಮುಂದಿನ ದಿನಮಾನಗಳಲ್ಲಿ ಪಕ್ಷಬೇಧ ಮರೆತು ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಿಮ್ಮಯ್ಯ ನಾಯಕ, ಬಸವರಾಜ್ ನಾಡಗೌಡ, ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ತಹಸೀಲ್ದಾರ ಮಂಜುನಾಥ ಭೋಗಾವತಿ, ಪಂಪನಗೌಡ ಬಾದರ್ಲಿ, ಕೆ.ಕರಿಯಪ್ಪ ಕಾಂಗ್ರೆಸ್ ಮುಖಂಡರು, ಶಿವನಗೌಡ ಗೋರೆಬಾಳ, ಸೋಮನಗೌಡ ಬಾದರ್ಲಿ, ದೊಡ್ಡ ಬಸವರಾಜ ಬಿಜೆಪಿ ಮುಖಂಡರು,ವೆಂಕೋಬ ನಾಯಕ ವಾಲ್ಮೀಕಿ ಸಮುದಾಯ ತಾಲೂಕು ಅಧ್ಯಕ್ಷರು, ಬಸವರಾಜ ಹಿರೇಗೌಡ, ಪವನಕುಮಾರ, ಎಸ್. ಟಿ. ಅಧಿಕಾರಿ ಶಿವಮಾನಪ್ಪ, ಇನ್ನೂ ಅನೇಕ ಹಿರಿಯ ಮುಖಂಡರು, ಸಮಾಜದ ಮುಖಂಡರು, ಅಧಿಕಾರಿಗಳು ಭಾಗವಹಿಸಿದ್ದರು..

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;