ಸಿಂಧನೂರು : ವನಸಿರಿ ಫೌಂಡೇಶನ್(ರಿ ) ವತಿಯಿಂದ
ಈದ್ ಮಿಲಾದ್ ಹಬ್ಬದ ಅಂಗವಾಗಿ ವಾರ್ಡ್ ನಂಬರ್ 09. ವಿನಾಯಕ ಸ್ಕೂಲ್ ಹತ್ತಿರ ದಿ :ಶ್ರೀ ನಾಗಪ್ಪ ಸಾಹುಕಾರ ರಸ್ತೆಯ ಪಕ್ಕದಲ್ಲಿ ಇರುವ ಸಾರ್ವಜನಿಕ ಶೌಚಾಲಯ ಮುಂಭಾಗದಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಸಸಿ ನೆಡಲಾಯಿತು.ವನಸಿರಿ ತಂಡ ಐದಾರು ವರ್ಷಗಳಿಂದ ರಸ್ತೆಗಳ ಬದಿಯಲ್ಲಿ, ಸ್ಮಶಾನ ಭೂಮಿಯಲ್ಲಿ, ರೈತರ ಹೊಲದ ಬದುವಿನಲ್ಲಿ, ಶಾಲಾ-ಕಾಲೇಜುಗಳಲ್ಲಿ, ದೇವಸ್ಥಾನಗಳಲ್ಲಿ, ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಣೆ ಮತ್ತು ಸರಂಕ್ಷಿಸುವ ನಿರಂತರ ಸೇವೆ ಮಾಡುತ್ತಿದೆ. ಯಾರಾದರೂ ಗಿಡಗಳನ್ನು ಕಡಿದರೆ ಅವರಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ದಂಡ ಹಾಕುವುದು. ಮತ್ತು ಪರಿಸರ ಕಾಳಜಿ ಜೊತೆಗೆ ಗರ್ಭಿಣಿ ಸ್ತ್ರೀಯರಿಗೆ, ಮಕ್ಕಳಿಗೆ ರಕ್ತದ ಅವಶ್ಯಕತೆ ಇದ್ದರೆ ದಿನದ 24 ಗಂಟೆಗಳ ಕಾಲ ಸದಾ ಸಿದ್ಧರಿರುತ್ತಾರೆ. ವನಸಿರಿ ತಂಡದ ಬಗ್ಗೆ ಎಷ್ಟು ಹೇಳಿದರೂ ಸಾಲದು,ತಾಲೂಕನ್ನು ಹಸಿರು ಮಾಡಲು ಸ್ವತಃ ತಾವೇ ಸಸಿಗಳನ್ನು ಬೆಳೆಸುವ ನರ್ಸರಿಯನ್ನು ಪ್ರಾರಂಭಿಸಿದ್ದಾರೆ.ಸಿಂಧನೂರು ತಾಲೂಕಿನ ಜತೆಗೆ ಕಲ್ಯಾಣ ಕರ್ನಾಟಕ ಹಸಿರುಮಯ ಮಾಡಲು ಪಣತೊಟ್ಟಿದ್ದಾರೆ. ಇವರ ಕಾರ್ಯ ಮುಂದುವರೆಯಲಿ ಸಾಲುಮರದ ತಿಮ್ಮಕ್ಕ ಅಮ್ಮನವರ ಹಾಗೆ ರಾಜ್ಯದ ತುಂಬೆಲ್ಲ ಮುಂದುವರಿಯಲಿ ಎಂಬುದು ನಮ್ಮ ಆಶಯ.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ್, ಬಸವರಾಜ್ ನಾಡಗೌಡ್ರು ಜೆಡಿಎಸ್ ತಾಲೂಕ ಅಧ್ಯಕ್ಷರು, ಹಾಗೂ ನಗರಸಭೆ ಸದಸ್ಯರು, ಜಿಲಾನಿ ಪಾಷಾ ಖಾಜಿ ನಗರಸಭೆ ಸದಸ್ಯರು, ವೀರಭದ್ರಗೌಡ ಕುರುಕುಂದಿ ನಗರಸಭೆ ಸದಸ್ಯರು, ಹನುಮೇಶ್ ಉಪ್ಪಾರ್ ನಗರಸಭೆ ಸದಸ್ಯರು, ದಾಸರಿ ಸತ್ಯನಾರಾಯಣ ನಗರಸಭೆ ಸದಸ್ಯರು, ಅಮರೇಗೌಡ ಮಲ್ಲಾಪುರ ವನಸಿರಿ ಫೌಂಡೇಶನ್ ಸಂಸ್ಥಾಪಕರು, ವನಸಿರಿ ಕಾರ್ಯದರ್ಶಿ ಶರಣೆಗೌಡ ಹೇಡಿಗಿನಾಳ, ದುರ್ಗೇಶ್ dsp,ಪ್ರದೀಪ್ ಪೂಜಾರಿ,ಬುದೇಶ ಮರಾಠ, ಮುದಿಯಪ್ಪ,ಹಗರಪ್ಪ ಗಾಳಿ, ವೆಂಕಟೇಶ್ ಗಾಳಿ,ರಾಮಣ್ಣ ಮಡಿವಾಳ, ರಾಜ್ಜಬ್ ಅಲಿ,ಗೌಸ್ ಕಾರ್ಪೆಂಟರ್,ವಾಜಿದ್,ಸದ್ದಾಂ,ಇಸ್ಮಾಯಿಲ್, ಹುಸೈನ್ ಬಾಷಾ, ಅಜ್ಮೀರ್ ಸಾಬ್,ಪಾಷಾ ಮೆಕ್ಯಾನಿಕ್, ಹೊನ್ನುರ ಸಾಬ್ ಗುಳಿ ಹಾಗೂ ವಾರ್ಡ್ ನ 09 ರ ಯುವಕರು ಹಾಗೂ ಹಿರಿಯರು ಪಾಲ್ಗೊಂಡಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
