;

ಕರ್ನಾಟಕ ದಲಿತ ಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ಬೃಹತ್ ಪ್ರತಿಭಟನೆ…!!!

ಬಿಜೆಪಿ ಸರಕಾರ ಸಚಿವ ಪ್ರಭು ಚೌಹಾಣ್ ನ್ಯಾಯಮೂರ್ತಿ ಎ ಜೆ ಸದಾ ಶಿವ ಆಯೋಗದ ವರದಿಯ ಅವೈಜ್ಞಾನಿಕವಾಗಿದೆ ಅದನ್ನ ಜಾರಿ ಮಾಡಲು ನಾನು ಬಿಡೋದಿಲ್ಲ ಅಂತ ಅವಿವಿಕಿತನ ಮತ್ತು ಬೇಜವಾಬ್ದಾರಿ ಹೇಳಿಕೆಯನ್ನು ಖಂಡಿಸಿ ಮತ್ತು ನ್ಯಾಯಮೂರ್ತಿ ಎ ಜೆ ಸದಾ ಶಿವ ಆಯೋಗದ ವರದಿಯ ಸಂವಿಧಾನದ ಬದ್ದವಾಗಿದ್ದು ಸಾಮಾಜಿಕ ನ್ಯಾಯದ ಪರವಾಗಿದೆ ಕೂಡಲೆ ರಾಜ್ಯ ಸರಕಾರ ಕೇಂದ್ರಕ್ಕೆ ವರದಿಯನ್ನ ಶಿಫಾರಸ್ಸು ಮಾಡಿ ಜಾರಿಗೆ ತರಲೇ ಬೇಕೆಂದು ಒತ್ತಾಯಿಸಿ ರಾಯಚೂರು ಜಿಲ್ಲೆಯ ಮಸ್ಕಿ ತಾಲುಕಿನಲ್ಲಿ ಇಂದು ಕರ್ನಾಟಕ ದಲಿತ ಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ಬೃಹತ್ ಪ್ರತಿಭಟನೆ ಮತ್ತು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹಾಗೂ ಬಹಿರಂಗ ಸಭೆಯ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ಧ್ವನಿ ಚಂದ್ರಕಾಂತ್ ಕಾದ್ರೊಳ್ಳಿ ಸಂಘಟನೆಯ ವತಿಯಿಂದ ಸಂಪೂರ್ವಾಗಿ ಬೆಂಬಲಿಸಲಾಯಿತು ಅಲ್ಲದೆ ನಮ್ಮ ಸಮಿತಿಯ ರಾಯಚೂರು ಜಿಲ್ಲಾ ಅಧ್ಯಕ್ಷರು ಜಿಲ್ಲಾ ಪದಾಧಿಕಾರಿಗಳು. ಮತ್ತು ಮಸ್ಕಿ ತಾಲೂಕ ಅಧ್ಯಕ್ಷರಾದ ಕಮಲ್ ರಾಜ್ ಹರ್ವಪೂರ ಮತ್ತವರ ಪದಾಧಿಕಾರಿಗಳು, ಸಿಂಧನೂರು ತಾಲೂಕ ಅಧ್ಯಕ್ಷರಾದ ಮೌನೇಶ್ ಉಪ್ಪಲದೊಡ್ಡಿ ಮತ್ತವರ ತಾಲೂಕಾ ಸಮಿತಿ, ಲಿಂಗಸ್ಗೂರು ತಾಲೂಕ ಅಧ್ಯಕ್ಷರಾದ ಮುರಾರ್ಜಿ ಕೆಂಚಾಪೂರ್ ಮತ್ತವರ ತಾಲೂಕ ಪದಾಧಿಕಾರಿಗಳು, ಮಾನ್ವಿ ತಾಲೂಕ ಅಧ್ಯಕ್ಷರಾದ ಮಾರುತಿ ನಿರಮಾನ್ವಿ ಮತ್ತವರ ತಾಲೂಕ ಪದಾಧಿಕಾರಿಗಳು, ಅದೂ ಅಲ್ಲದೆ ನಮ್ಮ ಸಮಿತಿಯ ಗ್ರಾಮೀಣ ಘಟಕದ ಅಧ್ಯಕ್ಷರುಗಳು ಮತ್ತು ವಿವಿಧ ದಲಿತಪರ ಸಂಘಟನೆಯ ಪದಾಧಿಕಾರಿಗಳು, ಚಲುವಾದಿ. ಮೋಚಿ. ಡೋರಾ ,ಸಮುದಾಯ ಮುಖಂಡರುಗಳು ಹಾಗೂ ಕನ್ನಡಪರ ಸಂಘಟನೆಗಳು ಈ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಕಾರ್ಯಕ್ರಮವನ್ನು ಮಾನ್ಯ ಸಹಾಯಕ ಆಯುಕ್ತರು ಲಿಂಗಸಗೂರು ಇವರ ಮುಖಾಂತರ ಮಾನ್ಯ ಬಸವ ರಾಜ ಬೊಮ್ಮಾಯಿ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ವಿಧಾನ ಸೌಧ ಬೆಂಗಳೂರು ಇವರಿಗೆ ನಮ್ಮ ಮನವಿ ಪತ್ರವನ್ನು ಸಲ್ಲಿಸುವ ಮುಖಾಂತರ ಈ ಕಾರ್ಯಕ್ರಮವನ್ನು ಸಮೂರ್ಣವಾಗಿ ಯಶಸ್ವಿ ಗೊಳಿಸಲಾಯಿತು. ಈ ಹೋರಾಟಕ್ಕೆ ಶ್ರಮಿಸಿದ ಎಲ್ಲಾ ಸಹೋದರರಿಗೆ ಹೃದಯ ಪೂರ್ವಕ ಕ್ರಾಂತಿಕಾರಿ ನಮನಗಳು.
ಜೈಭಿಮ್ ಜೈ ಮಾದಿಗ…

ಹನುಮಂತಪ್ಪ ಹಂಪನಾಳ
ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ
DSS ಕಾದ್ರೊಳಿ ಸಮಿತಿ.
7022221794,

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;