ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಪಟ್ಟಣದಲ್ಲಿ ವಿವಿಧ ಕಾಮಗಾರಿಗಳಿಗೆ ಸಾರಿಗೆ ಸಚಿವರಾದ ಬಿ. ಶ್ರೀರಾಮುಲುರವರು ಚಾಲನೆ ನೀಡಿದ್ದರು. ಮೊಳಕಾಲ್ಮುರು ಬಿಜೆಪಿ ಮಂಡಲದ ಕಾರ್ಯಾಲಯದಲ್ಲಿ ಉಚಿತ ಈ ಶ್ರಮ್ ಕಾರ್ಡ್ ಸೇವಾಕೇಂದ್ರ ಉದ್ಘಾಟನೆ. ಹಾಗೂ ಪಟ್ಟಣ ಪಂಚಾಯಿತಿ ಕಚೇರಿಯ ಆವರಣದಲ್ಲಿ ಉಚಿತ ಪಡಿತರ ಕಿಟ್ ಇ ಆಟೋ ಉದ್ಘಾಟನೆ ಹಾಗೂ ಯರ್ರೇನಹಳ್ಳಿ ಗ್ರಾಮದಲ್ಲಿ ಎಸ್ಸಿ ಎಸ್ಟಿ ಟಿ. ಎಸ್. ಪಿ. ಯೋಜನೆಯಡಿಯಲ್ಲಿ ವಿವಿಧ ಗ್ರಾಮಗಳಲ್ಲಿ 20ಕೋಟಿ ವೆಚ್ಚದ ಕಾಮಗಾರಿ ಉದ್ಘಾಟನೆ ಮಾಡಿದರು. ಈ ವೇಳೆ ಮಾತನಾಡಿದ ಅವರು ಕ್ಷೇತ್ರದಲ್ಲಿ ನನ್ನನ್ನು ಚುನಾವಣೆ ಸಮಯದಲ್ಲಿ ಅತ್ಹ್ಮಿಯವಾಗಿ ಸ್ವಾಗತಿಸಿ ಅಭೂತಪೂರ್ವವಾಗಿ ಗೆಲ್ಲಿಸಿದ್ದೀರಾ. ನಿಮಗೆ ನಾನು ಚಿರಋಣಿ. ನಮ್ಮದೇ ಆದ ಬಿಜೆಪಿ ಸರ್ಕಾರವಿದ್ದು ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಗುತ್ತಿದೆ. ಮೊಳಕಾಲ್ಮುರು ತಾಲೂಕಿನಲ್ಲಿ ಈಗಾಗಲೇ ಅಭಿವೃದ್ಧಿ ಪರ್ವ ಆರಂಭವಾಗಿದ್ದು ತುಂಗಭದ್ರಾ ಹಿಂನ್ನೀರು ಸೇರಿದಂತ ಹಲವು ಮಹತ್ವ ಕಾರ್ಯಗಳು ಪೂರ್ಣಗೊಳ್ಳಲಿವೆ ಎಂದರು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಪಿ ಲಕ್ಷ್ಮಣ್ ರಾಯಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ್.. ಬಿಜೆಪಿ ಮಂಡಲದ ಅಧ್ಯಕ್ಷರಾದ ಡಾ. ಪಿ ಎಂ ಮಂಜುನಾಥ್ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯ ಪಾಲಯ್ಯ ಸಚಿವರ ಆಪ್ತಕಾರ್ಯದರ್ಶಿ ಪಾಪೇಶ್ ಸೇರಿದಂತೆ ವಿವಿಧ ಇಲಾಖೆಯ ನೌಕರರು ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರುಗಳು ಉಪಸ್ಥಿತರಿದ್ದರು..

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
