ಅನಾಥಪರ ಸೇವೆಯನ್ನು ಮೆಚ್ಚಿ “ಸಮಾಜ ಸೇವಕ” ಎಂದು ಬಿರುದು ನೀಡಿ ಸನ್ಮಾನಿಸಿ ಗೌರವಿಸಲಾಯಿತು…!!!

ಸಿಂಧನೂರು :ಕರ್ನಾಟಕ ಯುವ ಶಕ್ತಿ ಸೇವಾ ಟ್ರಸ್ಟ್ ವತಿಯಿಂದ ನಗರದ ಕುಷ್ಟಗಿ ರಸ್ತೆಯಲ್ಲಿರುವ ಕಾರುಣ್ಯನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಚನ್ನಬಸವ ಸ್ವಾಮಿ ಹಿರೇಮಠ ಅವರಿಗೆ ಕವಿತಾ ಮೀಡಿಯಾ ಸೋರ್ಸ್ ಲಿಮಿಟೆಡ್ ಬೆಂಗಳೂರು, ಹೈಬ್ರಿಡ್ ನ್ಯೂಸ್ ವತಿಯಿಂದ ನೀಡಲಾದ “ಕರುನಾಡ ಕರುಣಾಮಯಿ” ಎನ್ನುವ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿರುವ ಹಿನ್ನೆಲೆಯಲ್ಲಿ ಶ್ರೀ ಚನ್ನಬಸವ ಸ್ವಾಮಿ ಹಿರೇಮಠ ಅವರಿಗೆ ಕರ್ನಾಟಕ ಯುವ ಶಕ್ತಿ ಸೇವಾ ಟ್ರಸ್ಟ್ ವತಿಯಿಂದ ಇವರ ಅಪಾರ ಅನಾಥಪರ ಸೇವೆಯನ್ನು ಮೆಚ್ಚಿ “ಸಮಾಜ ಸೇವಕ” ಎಂದು ಬಿರುದು ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಯುವ ಶಕ್ತಿ ಸೇವಾ ಟ್ರಸ್ಟ್ ರಾಜ್ಯಾಧ್ಯಕ್ಷರಾದ ಸಂತೋಷ ಅಂಗಡಿ ಚನ್ನಬಸವ ಸ್ವಾಮಿಯವರು ಶ್ರೀಮಠ ಸೇವಾ ಟ್ರಸ್ಟ್ ಅಡಿಯಲ್ಲಿ ಕಾರುಣ್ಯ ಆಶ್ರಮವನ್ನು ಕಟ್ಟಿ ಸುಮಾರು 35 ಜನ ಅನಾಥ ವೃದ್ಧರಿಗೆ, ಹದಿನಾಲ್ಕು ಜನ ವಯಸ್ಕರ,ಬುದ್ಧಿಮಾಂದ್ಯರಿಗೆ ತಮ್ಮ ಜೋಳಿಗೆಯ ಮೂಲಕ ಊಟವಸತಿ ಆರೋಗ್ಯ ಸೇವೆಯನ್ನು ಒದಗಿಸಿ ಈ ಎಲ್ಲಾ ಅನಾಥ ಜೀವಿಗಳಿಗೆ ಸ್ವಂತ ರಕ್ತಸಂಬಂಧಿಗಳ ಹಾಗೆ ಪ್ರೀತಿ ಮಮತೆ ಕರುಣೆಯನ್ನು ಧಾರೆಯೆರೆಯುತ್ತಾ ಇವರು ಹಾಗೂ ಇವರ ಧರ್ಮ ಪತ್ನಿಯಾದ ಸುಜಾತ ಅವರ ಜೊತೆ ಇಡೀ ಕುಟುಂಬವನ್ನೇ ಅನಾಥರಿಗಾಗಿ ಮೀಸಲಿಟ್ಟಿರುವ ಈ ದಂಪತಿಗಳ ಸೇವೆ ಅಪಾರ ವಾದುದು, ಇಂತಹ ಕರುಣಾಮಯಿ ಮನಸ್ಸುಗಳಿಗೆ ಕವಿತಾ ಮೀಡಿಯಾ ಲಿಮಿಟೆಡ್ ನೀಡಿರುವಂತಹ ರಾಜ್ಯಪ್ರಶಸ್ತಿ “ಕರುನಾಡ ಕರುಣಾಮಯಿ” ಎನ್ನುವ ಪದಕ್ಕೆ ಸಂಪೂರ್ಣ ಅರ್ಥ ಕಲ್ಪಿಸಿಕೊಟ್ಟಿದೆ. ಇಂತಹ ಸೇವೆಯನ್ನು ಮೆಚ್ಚಿ ಸರಕಾರಿ ಅಧಿಕಾರಿಗಳು ಇವರಿಗೆ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಸರ್ಕಾರದ ಸವಲತ್ತುಗಳನ್ನು ನೀಡಿದರೆ ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನಾಥ ಎನ್ನುವ ಪದಕ್ಕೆ ನಾಂದಿ ಹಾಡಿದಂತೆ ಆಗುತ್ತದೆ ಎಂದು ಭಾವುಕರಾಗಿ ಮಾತನಾಡಿದರು.

ನಂತರ ಕಾರುಣ್ಯ ಆಶ್ರಮದ ಕಾರ್ಯಾಧ್ಯಕ್ಷರಾದ ವೀರೇಶ ಯಡಿಯೂರಮಠ ನಮ್ಮ ಸಹೋದರನಿಗೆ ನೀಡಿರುವ ಈ ಪ್ರಶಸ್ತಿ ಜಂಗಮ ಸಮಾಜಕ್ಕೆ ಒಂದು ದೊಡ್ಡ ಹೆಮ್ಮೆ ಈ ಕಾರುಣ್ಯ ಆಶ್ರಮ ರಾಜ್ಯಮಟ್ಟದಲ್ಲಿ ಒಳ್ಳೆಯ ಹೆಸರು ಮಾಡಲು ಕಾರಣೀಕರಾದ ದಾನಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ನಂತರ ಚನ್ನಬಸವಸ್ವಾಮಿ ಮಾತನಾಡಿ ಇದು ಕಾರುಣ್ಯ ಆಶ್ರಮದ ಪ್ರಶಸ್ತಿಯಲ್ಲ ಸಿಂಧನೂರಿನ ಕೊಡುಗೈ ದಾನಿಗಳ ಪ್ರಶಸ್ತಿ ತಾಲೂಕಿನ ಜನ ಸಹಕಾರ ಸಹಾಯ ಮಾಡಿದ್ದರಿಂದ ಈ ಪ್ರಶಸ್ತಿ ಸಾಧ್ಯವಾಯಿತು. ಕರ್ನಾಟಕ ಯುವ ಶಕ್ತಿ ಸೇವಾ ಟ್ರಸ್ಟ್ ಹಾಗೂ ಸರ್ವ ತಾಲೂಕಿನ ಮಹಾಜನತೆಗೆ ಧನ್ಯವಾದಗಳು ತಿಳಿಸಿದರು.

ಈ ಸಂದರ್ಭದಲ್ಲಿ ಸಂತೋಷ್ ಹಿರೇಮಠ್,ವಿನಯ್ ಚಂದ್ರಮೌಳಿ, ಮೋಹನ್ ಗೌಡ, ಸರ್ಫರಾಜ್ ಖಾನ್, ಉಮೇಶ್ ಕುಮಾರ್, ಶಾಬಾದ್ ಉಸ್ತಾದ್, ವೀರಭದ್ರಗೌಡ ಗಿಣಿವಾರ, ಗೀತಾ ಕುಲಕರ್ಣಿ, ಪಂಪಯ್ಯ ಸ್ವಾಮಿ ವಿಶ್ವಕರ್ಮ, ಪಂಪಯ್ಯ ಸ್ವಾಮಿ ಹಚ್ಚೋಳ್ಳಿ,ಇನ್ನಿತರ ಅಭಿಮಾನಿಗಳು ಉಪಸ್ಥಿತರಿದ್ದರು..

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend