ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಪೂರ್ವಭಾವಿ ಸಭೆ ಮತ್ತು ಪದಗ್ರಹಣ!!
ವಿಜಯನಗರ ಜಿಲ್ಲೆ ಹೂವಿನ ಹಡಗಲಿ ಪಟ್ಟಣ ಗವಿ ಮಠದಲ್ಲಿ ನಡೆದ ಪೂರ್ವಭಾವಿ ಸಬೆಯನ್ನ
ಶ್ರೀ ಸೋಮಶೇಖರ್ ಮಹಾಸ್ವಾಮಿಗಳು ಉತ್ತಂಗಿ.
ಶ್ರೀ ಹಿರಿಶಾಂತ ವೀರ ಮಹಾಸ್ವಾಮಿಗಳು ಧಿವ್ಯ ಸಾನಿಧ್ಯ ಕಲಾವಿದರಿಗೆ ಹಿಂದೆ ರಾಜಶ್ರಯ ಇತ್ತು.. ಅದರೆ ಇಂದು ಮಠಗಳ ಆಶ್ರಯ ಮತ್ತು ಸರ್ಕಾರದ ಗಮನ ಇರಬೇಕು,ಸರಕಾರದ ಗಮನ ಸೆಳೆಯಲು ಸಂಘಟನೆ ಅಗತ್ಯ, ಕೋವಿಡ್ ಕಾಲದಲ್ಲಿ ಕಲಾವಿದರ ಬದುಕು ಬಹಳಾ ಕಷ್ಟವಾಗಿತ್ತು. ಆದಕಾರಣ ಸಂಘಟನೆಯ ಅಗತ್ಯ ಇದೆ ಈ ಸಂಘಟನೆ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂಬು ಆಶಯ ವ್ಯಕ್ತ ಪಡಿಸಿದರು.
ಶ್ರೀ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿ ಗಳು
ಅಭಿನವ ಚನ್ನಬಸವ ಮಹಾ ಸ್ವಾಮಿಗಳು
ಶ್ರೀ ಸೋಮಶೇಖರ್ ಮಹಾಸ್ವಾಮಿಗಳು ಉತ್ತಂಗಿ. ಸಾನಿಧ್ಯವಹಿಸಿದ್ದರು.ರಾಜ್ಯಧ್ಯಕ್ಷರು ವಿಜಯ್ ಕುಮಾರ್ ಸೋನಾರೆ ಸಭೆಯಲ್ಲಿದ್ದರು.
ಉಪಾಧ್ಯಕ್ಷರು ಡಿಂಗ್ರಿ ನರೇಶ್ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಸ್ವರೂಪದ ಕುರಿತು ಮಾತನಾಡಿ , ಎಲ್ಲಾ ಕಲಾ ಪ್ರಕಾರದ ಕಲಾವಿದರು ಸೇರಿದ ಒಕ್ಕೂಟ ಇದು, “ಕಲಾವಿದರು ಬಿಕ್ಷಿಕರಲ್ಲ ದೇಶದ ರಕ್ಷಕರು” ನಾಡಿನ ಸಂಸ್ಕೃತಿ ಉಳಿದಿರೊದು ಕಲಾವಿದರಿಂದ ಉಳಿದಿದೆ ಅವರ ಪರವಾಗಿ ನಿಲ್ಲಬೇಕಿದೆ. ಹೋರಾಟ,ಪ್ರಶ್ನೆ ಮಾಡುವುದು ರಂಗಭೂಮಿಯ ಗುಣ ಕಲಾವಿದರು ಅಸಂಕಘಟಿತ ವರ್ಗಕ್ಕೆ ಸೇರಿಸಿದ್ದಾರೆ,ಅವರಿಗೆ ಯಾವ ಸೌಲಭ್ಯ ವಿಲ್ಲ! ಕಲಾವಿರು ರಂಗ ಕಾರ್ಮಿಕರು , ಮನಸ್ಸಿನ ಕೊಳೆತನ್ನ ತೊಳೆಯುವ ಕಾಯಕ ಕಲಾವಿದರು ಮಾಡ್ತಾರೆ.. ಅದ್ದರಿಂದ ಸಂಘಟನೆ, ಒಗ್ಗಟ್ಟು ಅಗತ್ಯವಿದೆ ಅದರ ದೆಸೆಯಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಗತ್ಯ ಇದೆ ಎಂದು ತಿಳಿಸಿದರು. ಬಳ್ಳಾರಿ/ ವಿಜಯ ನಗರ ಜಿಲ್ಲಾಧ್ಯಕ್ಷರು. ಶ್ರೀ ಹಂಚಿನ ಮನಿ ರಮೇಶ್ ಸೋಗಿ ನಾಗರತ್ಮಮ್ಮ ಹರಪನಹಳ್ಳಿ ವಿಭಾಗದ ಅಧ್ಯಕ್ಷರು .
ಹೊಸಪೇಟೆ ಅಧ್ಯಕ್ಷರು. ಗುಂಡಿ ರಮೇಶ್
ಹಡಗಲಿ ಬನ್ನೆಪ್ಪಾ.
ಸೋಗಿ ಕೊಟ್ರಪ್ಪ. ಸಂಚಾಲಕರು..
ಶ್ರೀ ರಾಜರಾಮ್ ರಾಜ್ಯದ ಘಟಕ ದ ಸದಸ್ಯರು.. ( ನಾಟಕ ಅಕಾಡೆಮಿ ಸದಸ್ಯರು ಮಾತನಾಡಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ರಚನೆಗೊಂಡ ಬಗೆಯನ್ನ ವಿವರಿಸಿದರು. ಸೋಗಿ ಮಲ್ಲಪ್ಪ ಉಪಸ್ಥಿತಿಯಲ್ಲಿದ್ದರು
ರಾಜರಾಜೇಶ್ವರಿ ಸಂಗೀತ ಶಾಲೆ ಪ್ರಾರ್ಥನೆ ನೆರವೇರಿಸಿದರು. ವಿವಿಧ ಗ್ರಾಮ, ತಾಲೂಕಿನ ಎಲ್ಲಾ ಪ್ರಕಾರದ ಕಲಾವಿದರು ಹಾಜರಿದ್ದರು…

ವರದಿ.ಅಜಯ್, ಚ, ಹುಗಲೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
