ಸರ್ಕಾರದಿಂದ ವಸತಿ ಮನೆಗಳ ಹೆಸರಲ್ಲಿ ಹಣ ವಸೂಲಿಗಿಳಿದ ಗ್ರಾಮಪಂಚಾಯಿತಿ ಸದಸ್ಯರು ಆದರೆ ಊರ ಗೋಳು ಕೇಳುವವರು ಯಾರು ಇಲ್ಲ !!

ಊರ ಗೋಳು ಕೇಳುವರ್ಯಾರು!!

ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕು ನಂದಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಗಲೂರು ಗ್ರಾಮದಲ್ಲಿ ನೈರ್ಮಲ್ಯದ ಕೊರತೆ ಎದ್ದು ಕಾಣುತ್ತದೆ!
ಊರಿಗೆ ಮೂಲಭೂತ ಸೌಕರ್ಯವಿಲ್ಲದೆ ಗ್ರಾಮವಾಗಿ ಉಳಿದುಕೊಂಡಿದೆ. ಗ್ರಾಮದ ಮಧ್ಯಭಾಗದಲ್ಲಿ ದೊಡ್ಡದೊಂದು ಗುಂಡಿ ಇದ್ದು ಆ ಗುಂಡಿಗೆ ಸುತ್ತಲಿನ ಚರಂಡಿ ನೀರು ಹರಿದು ಬಂದು ಸಂಗ್ರಹವಾಗುತ್ತದೆ. ದೊಡ್ಡ ಮಳೆ ಬಂದರೆ ಗುಂಡಿಯ ಒಳಗೆ ನುಗ್ಗುತ್ತದೆ. ಆದರೆ ಗ್ರಾಮ ಪಂಚಾಯತಿಯವರು ಗುಂಡಿಯನ್ನು ಲೆಕ್ಕಿಸದೆ ಪ್ರತಿವರ್ಷ ಗುಂಡಿ ತುಂಬಿದಾಗ,ಒತ್ತಾಯದ ಮೇರೆಗೆ ಒಂದು ದಿನ ಆಯಿಲ್ ಇಂಜಿನ್ ಹಚ್ಚಿ ನೀರನ್ನು ಹೊರಬಿಡುತ್ತಾರೆ. ಇದು ಒಂದು ರೀತಿ ಸಾಂಪ್ರದಾಯಿಕ ಪದ್ಧತಿ ಎಂಬಂತೆ ಸುಮಾರು ವರ್ಷಗಳಿಂದ ನಡೆದು ಬಂದಿದೆ‌. ಹೇಳಿಕೊಳ್ಳುವುದೇ ಒಂದು ವಾಡಿಕೆ ಯಾಗಿದೆ. ಗುಂಡಿಯಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳು ಮಲೇರಿಯಾ ಮತ್ತು ಡೆಂಗುವಿನಂತ ಜ್ವರಕ್ಕೆ ಕಾರಣವಾಗಿವೆ. ಸುತ್ತಮುತ್ತಲಿನ ಅನೇಕ ಜನ ಜ್ವರದಿಂದ ಬಳಲುತ್ತಿದ್ದಾರೆ. ಹಾಗಿದ್ದರೂ ಈ ಗೋಳು ಕೇಳುವರು ಯಾರು ಇಲ್ಲ! ಗ್ರಾಮದಲ್ಲಿ ಕೆಲವೆಡೆ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲ! ಅದು ಸರಿಯಾಗಿ ಹಳ್ಳಕ್ಕೂ ಹೋಗುವುದಿಲ್ಲ. ‌ ಆದ್ದರಿಂದ ಬೇಗನೆ ಸಂಬಂಧಪಟ್ಟ ಅಧಿಕಾರಿಗಳು ಗಮನಕ್ಕೆ ತೆಗೆದುಕೊಂಡು ಈ ಒಂದು ಕಾಮಗಾರಿಯನ್ನು ಅತಿ ಬೇಗನೆ ಕೈಗೊಳ್ಳಬೇಕು ಈ ಮೂಲಕ ಮಕ್ಕಳು ಗ್ರಾಮದ ನಾಗರಿಕರ ಅರೋಗ್ಯ ಕಾಯಬೇಕು ಎಂಬುದು ಗ್ರಾಮಸ್ಥರ ಮನವಿ. ಮತ್ತು

ನೆನಪಿರಲಿ ಇನ್ನೂ ಮಕರಬ್ಬಿ ಕಲುಷಿತ ನೀರಿನಲ್ಲಿ ಸಾವಿಗಿಡಾದ ಘಟನೆ ಮರೆಮಾಚಿಲ್ಲ ಅದರಲ್ಲಿ ಇದು ಬೇರೆ ಅಂದರೆ ಯಾರ ಕುಟುಂಬ ಬೀದಿಗೆ ಬಿದ್ದರೇನು, ಯಾರ ಮಕ್ಕಳು ಅನಾಥರಾದರೇನು ನಾವಿರೋದೇ ಇಗೆ ಎನ್ನುವಂತೆ ನಾಚಿಕೆಯನ್ನು ಬಿಟ್ಟು ಕಾರ್ಯವನ್ನು ನಿರ್ವಹಿಸುತ್ತಿದೆ ಇಲ್ಲಿನ ತಾಲೋಕು ಆಡಳಿತ ಮಂಡಳಿ ಇದರಲ್ಲೇ ಕಾಣುತ್ತೆ ಇಲ್ಲಿ ಎಷ್ಟರ ಮಟ್ಟಿಗೆ ಜನರಒಂದು ಸೇವೆಯನ್ನು ಮಾಡುವಲ್ಲಿ ಮುಂದಾಗಿದೆ ಇಡೀ ರಾಜ್ಯಕ್ಕೆ ಮಾದರಿ ಹೂವಿನ ಒಂದು ಬೆಳೆಯಲ್ಲಿ “ಮಲ್ಲಿಗೆ ನಾಡು “ಎಂಬ ಹೆಸರಿಗೆ ಹೆಸರುವಾಸಿಯಾಗಿರುವ ಮತ್ತು ಕರ್ನಾಟಕ ಕಂಡಂತಹ ಅನುಭವಿ ರಾಜಕಾರಣಿಗಳನ್ನು ನಮಗೆ ಕೊಡುಗೆ ಕೊಟ್ಟಿರುವ ಇಂತಹ ನಾಡಿನಲ್ಲಿ ಎಂತಹ ಅವಗಡಗಳು ಜರುಗಿವೆ ನೋಡಿ ನೈರ್ಮಲ್ಯವೆಂಬ ಪದಕ್ಕೆ ಇಲ್ಲಿರುವ ಗ್ರಾಮಪಂಚಾಯಿತಿ ಅಧಿಕಾರಿಗಳು ಜಾಗ ಕೊಟ್ಟು ಜನರ ಜೀವದ ಜೊತೆಗೆ ಆಟವಾಡುವುದು ಎಷ್ಟು ಸರಿ ಯೋಚನೆ ಮಾಡಿ ಜನರ ಒಂದು ತಾಳ್ಮೆಯ ಜೊತೆಗೆ ಸರ್ಕಸ್ ಮಾಡುವುದನ್ನು ಬಿಟ್ಟು ಸರಿಯಾಗಿ ತಮ್ಮ ತಮ್ಮ ಕೆಲಸವನ್ನು ಮಾಡಿ ಮತ್ತೆ ತಾಲೂಕಿನದ್ಯಾoತ ಅಶ್ರಯಮನೆಗಳನ್ನು ಮಾಡಿಕೊಡಬೇಕೆಂದರೆ ಹಣದ ಒಂದು ಆಮಿಷವನ್ನು ಒಡ್ದುತ್ತಾರೆ ಇಲ್ಲಿನ ಸದಸ್ಯರು ಹಾಗೂ ಅಧಿಕಾರಿಗಳು ಎನ್ನುವ ಒಂದು ಕೂಗು ಬಲು ಜೋರಾಗಿ ಕೇಳಿಬರುತ್ತಿದೆ ಮತ್ತು ನಮಗೆ ಅವರ ಒಂದು ಆಡಿಯೋ ಸಹಿತ ಕೊಟ್ಟಿದ್ದಾರೆ ಮತ್ತೆ ಇಂತಹ ಒಂದು ಕೂಗು ಹಾಗೂ ನೈರ್ಮಲ್ಯದ ಒಂದು ಸುದ್ದಿಗೆ ಜಾಗವನ್ನು ಕೊಡದೆ ಸೂಕ್ತ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸಲಿ ಎಂಬುದೇ ನಮ್ಮ ಒಂದು ಎಚ್ಚರಿಕೆಯ ಆಶಯ….

ವರದಿ :ಅಜಯ.ಚ
ಹೂವಿನ ಹಡಗಲಿ
(ಹುಗಲೂರು)

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend