ಸಿಂಧನೂರು : ಜೆಡಿಎಸ್ ನಿಂದ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಸಾಧಕರಿಗೆ ಸನ್ಮಾನ…!!!

ಸಿಂಧನೂರು : ಜೆಡಿಎಸ್ ನಿಂದ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಸಾಧಕರಿಗೆ ಸನ್ಮಾನ.

ರಾಜ್ಯ ಮಟ್ಟದ ಪ್ರಶಸ್ತಿ ಬಂದಿರುವುದು ನಮ್ಮ ತಾಲೂಕು ಹೆಮ್ಮೆಪಡುವ ವಿಷಯ. ಹೀಗೇ ತಮ್ಮ ತಮ್ಮ ವೃತ್ತಿಯಲ್ಲಿ ಉತ್ತಮ ಕೆಲಸ ಮಾಡಿ ಇನ್ನೂ ಉನ್ನತ ಮಟ್ಟದಲ್ಲಿ ಬೆಳೆದು ತಾಲೂಕಿನ ಕೀರ್ತಿ ತರಲಿ ಎಂದು ಸನ್ಮಾನ ಮಾಡಿದ ಶಾಸಕ ವೆಂಕಟರಾವ್ ನಾಡಗೌಡ ಅವರು ಮಾತನಾಡಿದರು.
ಇಂದು ತಾಲೂಕು ಯುವ ಘಟಕ ಕಾರ್ಯಾಲಯದಲ್ಲಿ ನೂತನವಾಗಿ ಸಿಂಧನೂರು ತಾಲೂಕು ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಶ್ರೀ ಭೀಮನಗೌಡ ಪಾಟೀಲ ಕೊಳಬಾಳ ವಕೀಲರಿಗೆ, ವಿಕಲಚೇತನರ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ರಾಜ್ಯ ಮಟ್ಟದ ಪ್ರಶಸ್ತಿ ವಿಜೇತರಾದ ಶ್ರೀ ದೇವೇಂದ್ರಗೌಡ ಹೊಸಳ್ಳಿ ಹಾಗೂ 2019ನೇ ಸಾಲಿನ ರಾಜ್ಯ ಮಟ್ಟದ ವಾರ್ಷಿಕ ದತ್ತಿನಿಧಿ ಪ್ರಶಸ್ತಿ ವಿಜೇತರಾದ ಹಿರಿಯ ಪತ್ರಕರ್ತರಾದ ಶ್ರೀ ಪ್ರಹ್ಲಾದಗುಡಿ ಅವರಿಗೆ ಜೆಡಿಎಸ್ ಪಕ್ಷದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತರು ಪ್ರಹ್ಲಾದ ಗುಡಿ ಶಿವಮೊಗ್ಗದಲ್ಲಿ ಅಕ್ಟೋಬರ್ ಎಂಟನೇ ತಾರೀಖಿನಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು, ಆದರೆ ನಾನು ಹುಟ್ಟಿ ಬೆಳೆದ ವಿದ್ಯಾಭ್ಯಾಸ ಪಡೆದ ನನ್ನ ಕುಟುಂಬದವರಿಂದ ಮೊದಲು ಸನ್ಮಾನ ಸ್ವಿಕರಿಸುವುದು ನನ್ನ ಸೌಭಾಗ್ಯ ಎಂದರು.

ಈ ಸಂದರ್ಭದಲ್ಲಿ ಬಸವರಾಜ ನಾಡಗೌಡ ಜೆಡಿಎಸ್ ತಾಲೂಕು ಅಧ್ಯಕ್ಷರು, ಹನುಮೇಶ ಕುರುಕುಂದಿ ತಾಲೂಕು ಯುವ ಘಟಕ ಅಧ್ಯಕ್ಷರು, ತಾಲೂಕ ಮಟ್ಟದ ಎಲ್ಲಾ ಮುಂಚೂಣಿ ಘಟಕದ ಅಧ್ಯಕ್ಷರುಗಳು, ಪದಾಧಿಕಾರಿಗಳು, ಮುಖಂಡರುಗಳು,ಯುವಕರು ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend