ಬೆಳಗಾವಿ :-ಮೂಡಲಗಿ ತಾಲೂಕಿನ ನಾಗನೂರ ವಸತಿ ಶಾಲೆಯಲ್ಲಿ ಸರ್ಕಾರದ ಆದೇಶದಂತೆ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವನ್ನು ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರಯುಕ್ತ ರಾಜ್ಯ ಮಟ್ಟಡ ನೋಡಲ್ ಅಧಿಕಾರಿಗಳ ತಂಡದ ಸದಸ್ಯರಾದ ಮಾನ್ಯ ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ರವರಾದ ಶ್ರೀ ಎಸ್.ಎ.ಮುಲ್ಲಾ ಸರ್ ರವರು ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಬೆಳಗಾವಿಯ ಪತ್ರಾOಕಿತ ವ್ಯವಸ್ಥಾಪಕರಾದ ಹಿರೇಮಠ ಸರ್ ಮತ್ತು ಗೋಕಾಕ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಕಲ್ಲಪ್ಪನವರ ಸರ್ ಈ ಎಲ್ಲ ಅಧಿಕಾರಿಗಳು ಇಂದು ನಾಗನೂರ ವಸತಿ ಶಾಲೆಗೆ ಭೇಟಿ ನೀಡಿ ಶಾಲೆಯ ಸ್ವಚ್ಛತೆ ಕುರಿತು ಹರ್ಷ ವ್ಯಕ್ತಪಡಿಸಿ.. ಎಲ್ಲ ಸಿಬ್ಬಂದಿಗಳ ಜೊತೆ ಸ್ವಚ್ಛತಾ ಅಭಿಯಾನ ಕುರಿತು ಹಾಗೂ ಮಕ್ಕಳ ಸರ್ವಾಂಗೀಣ ಅಭಿವೃದ್ದಿಗಾಗಿ ಶ್ರಮಿಸಲು ಸಲಹೆ ನೀಡಿದರು ಜೊತೆಗೆ ಮಕ್ಕಳ ಜೊತೆ ಸಂವಾದ ನಡೆಸಿ ಶಾಲೆಯ ಡಿಜಿಟಲ್ ವರ್ಗ ಕೋಣೆಯನ್ನು ಉದ್ಘಾಟನೆ ಮಾಡಿದರು…ಒಟ್ಟಾರೆಯಾಗಿ ಶಾಲೆಯ ಪರಿಸರವನ್ನು ಕಂಡು.. ಇಲಾಖೆಯ ಮುಖ್ಯಸ್ಥರಿಗೆ ಹಾಗೂ ಎಲ್ಲ ಸಿಬ್ಬಂದಿಗಳಿಗೆ ಮತ್ತು ಮಕ್ಕಳಿಗೆ ಶುಭಾಶಯ ಕೋರಿದರು.

ವರದಿ :-ಮಹಾಲಿಂಗ ಹ ಗಗ್ಗರಿ ಜಿಲ್ಲಾ ವರದಿಗಾರರು ಬೆಳಗಾವಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
