ಸಿಂಧನೂರು :ವನಸಿರಿಯಿಂದ ಹಳ್ಳಿಯ ರಸ್ತೆ ಹಸಿರು ಸೊಬಗು ಕಾರ್ಯಕ್ರಮ…!!!

ಸಿಂಧನೂರು :ವನಸಿರಿಯಿಂದ ಹಳ್ಳಿಯ ರಸ್ತೆ ಹಸಿರು ಸೊಬಗು ಕಾರ್ಯಕ್ರಮ.

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತೋತ್ಸವ ಅಂಗವಾಗಿ ಕೆ.ಹೊಸಹಳ್ಳಿಯ ಶ್ರೀ ಡರೇದ ನಾಗಲಿಂಗೇಶ್ವರ ದೇವಸ್ಥಾನದಿಂದ ಕಮಾನುವರೆಗೆ ಸುಮಾರು 100 “ಸಸಿ ನೆಡುವ ಕಾರ್ಯಕ್ರಮ” ಹಮ್ಮಿಕೊಳ್ಳಲಾಗಿತ್ತು.

ಪ್ರತಿ ಒಂದು ಹಳ್ಳಿಯ ರಸ್ತೆ ಹಸಿರು ಮಾಡುವ ಗುರಿ ಇಟ್ಕೊಂಡು ನಮ್ಮ ಕಾರ್ಯ ಮಾಡಲಾಗುತ್ತಿದೆ ಹಳ್ಳಿಯ ರಸ್ತೆಯ ಊರು ದೂರದಿಂದ ಬರುವರಿಗೆ ವಿಶ್ರಾಂತಿ ನೆರಳು ನೀಡುವದಕ್ಕೆ ಮತ್ತು ಪ್ರಾಣಿ ಪಕ್ಷಿಗಳಿಗೆ ಹಣ್ಣಿನ ಗಿಡಗಳು ಕೂಡ ಹಚ್ಚಲಾಗುತ್ತಿದೆ ಇದಕ್ಕೆ ಪ್ರತಿ ಒಂದು ಊರಲ್ಲಿ ಯುವಕರು ಹಿರಿಯರು ಸಹಕಾರ ನೀಡಬೇಕು ನಮ್ಮ ಸಂಸ್ಥೆ ಯಾವುದೇ ರಾಜಕೀಯಕ್ಕೆ ಸಂಬಂಧ ಇರುವದಿಲ್ಲ. ನಮಗೆ ಯಾವ ಇಲಾಖೆ ವತಿಯಿಂದ ಕೂಡ ಯಾವುದೇ ಅನುದಾನ ಬರುವುದಿಲ್ಲ ನಮ್ಮೆಲ್ಲರ ಸದಸ್ಯರು ಮತ್ತು ಕೆಲವರು ದಾನಿಗಳಿಂದ ಈ ಕಾರ್ಯ ಮಾಡುತ್ತ ಇದ್ದಿವಿ ಎಂದು ಅಮರೇಗೌಡ ಮಲ್ಲಾಪುರ ವನಸಿರಿ ಫೌಂಡೇಶನ್ ಸಂಸ್ಥಾಪಕ ಮಾತನಾಡಿದರು.

ರಮೇಶ್ ಕುಮಾರ್ RF ಜಲಾಯನಯನ ಇಲಾಖೆ ಅಧಿಕಾರಿಗಳು ರಾಯಚೂರು ಅವರು ಕಾರ್ಯಕ್ರಮ ವನ್ನು ಗಿಡ ನೆಡುವ ಮೂಲಕ ಉದ್ಘಾಟನೆ ಮಾಡಿದರು. ನಂತರ ಮಾತನಾಡಿದ ಅವರು ವನಸಿರಿ ತಂಡ ನಾನು ಕೆಲವು ವರ್ಷಗಳಿಂದ ನೋಡುತ್ತಾ ಬಂದಿದ್ದೀನಿ,ಒಳ್ಳೆಯ ಕಾರ್ಯ ಮಾಡುತ್ತ ಇದೆ .ಇವರಿಗೆ ನಮ್ಮ ಇಲಾಖೆ ಕಡೆಯಿಂದ ಯಾವಾಗಲು ಸಹಕಾರ ಇರುತ್ತೆ ವನಸಿರಿ ಯುವಕರ ತಂಡಕ್ಕೆ ಕೃತಜ್ಞತೆ ತಿಳಿಸಿ ನಿಮ್ಮ ಈ ಪರಿಸರ ಕಾಳಜಿಗೆ ನಮ್ಮ ಕಡೆಯಿಂದ ಹೃದಯ ಪೂರ್ವಕ ಧನ್ಯವಾದಗಳು ಎಂದು ತಂಡಕ್ಕೆ ತಿಳಿಸಿದರು.

ಈ ಸಂದರ್ಭದಲ್ಲಿ ಗುಂಜಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಮತಿ ಸುವರ್ಣ ರಮೇಶ್, ಶ್ರೀಮತಿ ದ್ರಾಕ್ಷಾಯಿಣಿ ಗೋಮರ್ಸಿ ಮಾಲಿಪಾಟೀಲ್, ಗಿರಿಸ್ವಾಮಿ ಹೇಡಿಗಿನಾಳ, ಬುದೇಶ ಮರಾಠ,ದುರ್ಗೇಶ್, ಮುದಿಯಪ್ಪ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅಮರೇಶ ಕಲ್ಮಂಗಿ, ಸದಸ್ಯರಾದ ಅಮರೇಶ ನೆಕಡೆ,ಶಿವರಾಯಪ್ಪ ಕುರುಬುರು,ನಾಗಲಿಗೇಶ್ವರ ದೇವಸ್ಥಾನ ಅರ್ಚಕರಾದ ಹನುಮಂತಪ್ಪ ಮಠ, ಮುತ್ತಗಯ್ಯ ಸ್ವಾಮಿ ಹಿರೇಮಠ ,ಮುದುಕಪ್ಪ ಹಳೆಮನಿ ನಿರ್ದೇಶಕರು ಕೃಷಿ ಪತ್ತಿನ ಸಹಕಾರ ಸಂಘ ಅರಳಹಳ್ಳಿ. ಶಂಕರಲಿಂಗ ಪ್ರಾಚಾರ್ಯರು,ರಮೇಶ ಅರಣ್ಯ ಇಲಾಖೆ, ಸೋಮಣ್ಣ ಮಸ್ಕಿ,ಶರಣಪ್ಪ ಅಬ್ಬಿಗೇರಿ, ಬಸವರಾಜ, ಎಸ್ಡಿಎಂಸಿ ಅಧ್ಯಕ್ಷರಾದ ವೆಂಕಟೇಶ್ ಮಡಿವಾಳ, ನಾಗರಾಜ್ ದಾಸರ, ಮುಖ್ಯಗುರುಗಳಾದ ಹನುಮನಗೌಡ, ಬಸವರಾಜ್ ಬಡಿಗೇರ್, ವಿಶ್ವನಾಥ್, ಗಂಗಾಧರ,ಹನುಮಂತ ಪರಿಸರ ಪ್ರೇಮಿಗಳು ಯುವಕರು ಭಾಗವಹಿಸಿದ್ದರು….

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend