*ಕ್ರಾಂತಿಕಾರಿ ಭಗತ್ ಸಿಂಗ್ ರವರ ಜನ್ಮ ದಿನಾಚರಣೆ*
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಖಾನಹೊಸಹಳ್ಳಿ ಪಟ್ಟಣದಲ್ಲಿ ಭಗತ್ ಸಿಂಗ್ ಮಿತ್ರಮಂಡಳಿ ವತಿಯಿಂದ ಕ್ರಾಂತಿಕಾರಿ ಬ್ರಿಟಿಷರ ವಿರುದ್ಧ ಹೋರಾಡಿ ಬ್ರಿಟಿಷರೆ ಭಾರತ ಬಿಟ್ಟು ತೊಲಗಿ ಗುಲಾಮಗಿರಿ ಪದ್ಧತಿ ಭಾರತೀಯರಿಗೆ ನಡೆಯುವ ಸೋಷಣೆ ವಿರುದ್ಧ ದಂಗೆಯೆದ್ದು ದೇಶಪ್ರೇಮ ದಿಂದಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ಚಿಕ್ಕವಯಸ್ಸಿನಲ್ಲಿ ನೇಣುಗಂಬಕ್ಕೆ ತನ್ನ ಪ್ರಾಣವನ್ನು ದೇಶಕ್ಕಾಗಿ ಅರ್ಪಿಸಿದ ಕ್ರಾಂತಿಕಾರಿ ಭಗತ್ ಸಿಂಗ್ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.* ಮುಖಂಡರಾದ ನಾಗೇಶ್ ರವರು ಮಾತನಾಡಿ ಸೆಪ್ಟೆಂಬರ್ 27.1907 ರಂದು ಲಾಯಲ್ ಪುರ ಜಿಲ್ಲೆಯ ಜರನ್ ವಾಲ್ ತಾಲ್ಲೂಕಿನಲ್ಲಿರುವ ಬಂಗಾಹಳ್ಳಿ ಯಲ್ಲಿ ವಿದ್ಯಾವತಿ ಹಾಗೂ ಕಿಸಾನ್ ಸಿಂಗ್ ರವರ ಮಗನಾಗಿ ಜನಿಸಿದರು. ಬ್ರಿಟಿಷರ ಕಪಿಮುಷ್ಟಿಯಿಂದ ದೇಶವನ್ನು ಮುಕ್ತಿಗೊಳಿಸಲು ಕ್ರಾಂತಿಕಾರಿ ಮಾರ್ಗವನ್ನು ಅನುಸರಿಸುತ್ತಿದ್ದರು. ಇವರು ಮಹಾನ್ ದೇಶಭಕ್ತ ಸ್ವತಂತ್ರ ಹೋರಾಟಗಾರ, ಬ್ರಿಟಿಷರ ಎದೆ ನಡುಗಿಸಿದ ಕ್ರಾಂತಿಕಾರಿ ಭಗತ್ ಸಿಂಗ್ ಇವರು ಈ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಗೌರವ ನಮನ ಸಲ್ಲಿಸಲಾಗುತ್ತಿದೆ. ಎಂದು ಈ ಸಂದರ್ಭದಲ್ಲಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿನಾಗೇಶ್ ಹನುಮಜ್ಜ, ವೀರೇಶ್ ಮೆಡಿಕಲ್, ಮಂಜುನಾಥ. ಶ್ರೀಕಾಂತ. ಮಿಲ್ಟ್ರಿ ರಘು, ಡಿಟಿ ಗಂಗಾಧರ, ಮಹಾಲಿಂಗಪ್ಪ, ನಿರಂಜನ ಬಾಬು, ಸುನಿಲ್ ಸುರೇಶ, ಶಿವರಾಜ್ ಕರಿಯಪ್ಪ ಶಿವರಾಜ್, ಕರಿಯಪ್ಪ ನಾಗೇಶ ಡಿಆರ್, ವಸೂರಪ್ಪ,ರೇವಣ್ಣ, ಗಿರೀಶ, ಹಾಗೂ ಭಗತ್ ಸಿಂಗ್ ಮಿತ್ರ ಮಂಡಳಿಯ ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು….

ವರದಿ.ಕೆ.ಎಸ್. ವಿರೇಶ್ ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
