ಪುರಸಭೆಯ ಗದ್ದಿಗೆ ಗುದ್ದಾಟ!
ಗಂಡ-ಹೆಂಡತಿಯ ನಡುವೆ ಕೂಸು ಬಡವಾಯಿತು!!
ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವುದು ಯಾರು?
ಜೇವರ್ಗಿ: ಪಟ್ಟಣದ ಪುರಸಭೆ ಅಧ್ಯಕ್ಷ ಗದ್ದಿಗೆ 10 ತಿಂಗಳು ಕಳೆದರೂ ಬಿಜೆಪಿ ಪಕ್ಷದಲ್ಲಿ ಗದ್ದಿಗೆ ಗುದ್ದಾಟ ಶುರುವಾಗಿದೆ
ಅಧ್ಯಕ್ಷರ ವಿರುದ್ಧ ಅವಿಶ್ವಾಸ ಅಸ್ತ್ರ ಪ್ರಯೋಗಿಸಲು 16 ಪುರಸಭೆ ಸದಸ್ಯರು ಮುಂದಾಗಿದ್ದಾರೆ.
ಒಟ್ಟು ಜೇವರ್ಗಿ ಪುರಸಭೆ ಸದಸ್ಯರು 23 ಮಂದಿ ಸಂಖ್ಯಾಬಲ ಹೊಂದಿದೆ. ಬಿಜೆಪಿ 17,ಜೆಡಿಎಸ್ 3,ಕಾಂಗ್ರೆಸ್3, ಸದಸ್ಯರ ಬಲ ಹೂಂದಿತ್ತು ಸಂಪೂರ್ಣ ಬಹುಮತ ಹೊಂದಿದ ಬಿಜೆಪಿ ಸುಲಭವಾಗಿ ಅಧಿಕಾರ ಹಿಡಿದಿತ್ತು.
ಸಾಮಾನ್ಯ ಮಹಿಳೆ ಅಧ್ಯಕ್ಷ ಸ್ಥಾನ ಶ್ರೀಮತಿ ಕಸ್ತೂರಿಬಾಯಿ ಕಲ್ಲಾ ಉಪಾಧ್ಯಕ್ಷರಾಗಿ ರಾಜು ರದ್ದೇವಾಡಗಿ ಆಯ್ಕೆಯಾಗಿದ್ದರು.
ತಲಾ ಹತ್ತು ತಿಂಗಳ ಅಧಿಕಾರ ಹಂಚಿಕೆಯಾಗಿದ್ದು ಇದು ಪಕ್ಷದ ಒಳಒಪ್ಪಂದವಾಗಿತ್ತು. ಮಾತಿಗೆ ಬದ್ಧರಾಗಿ ಪಕ್ಷದ ಒಪ್ಪಂದಕ್ಕೆ ತಲೆಬಾಗಿ ಉಪಾಧ್ಯಕ್ಷರಾದ ರಾಜು ರದ್ದೇವಾಡಗಿ ಅವರು ರಾಜೀನಾಮೆ ನೀಡಿದ್ದಾರೆ. ಆದರೆ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಯಾಕೆ ಎನ್ನುವುದು ತಿಳಿಯದಾಗಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಹತ್ತು ತಿಂಗಳ ಅವಧಿ ಮುಗಿದರೂ ಕೂಡ ಅಧ್ಯಕ್ಷರು ರಾಜೀನಾಮೆ ನೀಡಿಲ್ಲ ಇನ್ನೊಬ್ಬರಿಗೆ ಅವಕಾಶ ಕಲ್ಪಿಸುವ ಕಾರ್ಯಕ್ಕೂ ಮುಂದಾಗಿಲ್ಲ ಎಂದು ಕಂಡುಬರುತ್ತದೆ.
ಪುರಸಭೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಅಧ್ಯಕ್ಷರು ವಿಫಲರಾಗಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಸಮರ್ಪಕ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಹಲವು ಕಾಮಗಾರಿಗಳು ಕುಂಠಿತಗೊಂಡಿವೆ. ಪುರಸಭೆ ಸದಸ್ಯರು ಅಧ್ಯಕ್ಷರು ಉಪಾಧ್ಯಕ್ಷರು ಗಾದಿಗಾಗಿ ಗುದ್ದಾಟ ನೆಡುವುದರಿಂದ ಗಂಡ-ಹೆಂಡತಿ ನಡುವೆ ಕೂಸು ಬಡವಾಯಿತು ಎನ್ನುವ ಮಾತು ನೆನಪಿಗೆ ಬರುತ್ತದೆ. ಸಾರ್ವಜನಿಕರ ಸಮಸ್ಯೆಯನ್ನು ಪರಿಹಾರ ಕಂಡುಕೊಳ್ಳಲಾಗದ ಪುರಸಭೆ ಸದಸ್ಯರು ತಮ್ಮ ಗಾದಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಹೀಗೆ ಮುಂದುವರೆದರೆ ಬಡಾವಣೆಯ ಸಮಸ್ಯೆಗಳು ಪರಿಹಾರ ಮಾಡುವವರು ಯಾರು? ನಾವು ಎಂಥವರಿಗೆ ಮತ ಹಾಕಿ ಆಯ್ಕೆಮಾಡಿ ಕಳುಹಿಸಿದ್ದೇವೆ ಎನ್ನುವುದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಆದ್ದರಿಂದ ಅವಿಶ್ವಾಸ ಗೊತ್ತುವಳಿ ಮಂಡನೆ ಗಾಗಿ ತುರ್ತು ವಿಶೇಷ ಸಭೆ ಕರೆಯಬೇಕೆಂದು 16ಜನ ಬಿಜೆಪಿ ಸದಸ್ಯರು ಮುಖ್ಯ ಅಧಿಕಾರಿ ಶರಣಯ್ಯ ಸ್ವಾಮಿ ಹಿರೇಮಠ ಅವರಿಗೆ ಬುಧವಾರ ಮನವಿ ಪತ್ರ ಸಲ್ಲಿಸಿದರು.
ಪುರಸಭೆ ಸದಸ್ಯರಾದ ಷಣ್ಮುಖಪ್ಪ ಸಾಹು ಗೋಗಿ, ಶರಣಮ್ಮ ಸಾಯಿಬಣ್ಣ, ದೇವಿಂದ್ರಪ್ಪ ಭೀಮರಾಯ, ಗುಂಡು ಬಸವರಾಜ್, ಗುರುಶಾಂತಯ್ಯ ಹಿರೇಮಠ್, ಗುರುಲಿಂಗಪ್ಪ ಗೌಡ ಶಿವಶರಣಪ್ಪ ಗೌಡ, ಸಂತೋಷ್ ನಿಂಗಣಗೌಡ, ಕಾವ್ಯ ಹಣಮಂತ್, ಸಿದ್ದರಾಮ ಚಂದ್ರಶಾ, ಪರಶುರಾಮ ಶಂಕರ, ಸಂಗನಗೌಡ ಪಾಟೀಲ, ಮಲ್ಲಿಕಾರ್ಜುನ್ ಭಾಗಪ್ಪ, ಮಮ್ಮದ್ ಅಮೀರ್ ತೊಗಲ ಶೆಟ್ಟಿ, ಚಂದ್ರಕಾಂತ್ ಮಹೇಂದ್ರಕರ್, ರಾಜು ಮರಲಿಂಗಪ್ಪ, ಗಂಗೂಬಾಯಿ ಜಟ್ಟಿಂಗರಾಯ ಉಪಸ್ಥಿತರಿದ್ದರು….

ವರದಿ. ಬಸವರಾಜ್ ಹಿರೇಮಠ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
