ಚಿತ್ರದುರ್ಗ: ಮೊಳಕಾಲ್ಮುರು ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿ ಇಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಿ.ಪಿ.ಐ.ನ ತಾಲ್ಲೂಕು ಕಾರ್ಯದರ್ಶಿ ಜಾಫರ್ ಷರೀಫ್ ಮಾತನಾಡಿ ಸುರಕ್ಷತಾಗೇರ್, ಅಪಾಯ ಭತ್ಯೆ, ಕೋವಿಡ್-19 ರ ಸಾಂಕ್ರಾಮಿಕ ಪಿಡುಗಿನ ಅವಧಿಯಲ್ಲಿ ನಿಧನರಾದವರಿಗೆ ಮರಣ ಪರಿಹಾರವನ್ನು ಕ್ರಮ ಭದ್ದಗೊಳಿಸುವಿಕೆ, ಕನ್ಸವೇತನ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಾಗಿ ಇಂದು ಅಂಗನವಾಡಿ ಕಾರ್ಯಕರ್ತೆಯರು ಬೀದಿಗಿಳಿದು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಆದ್ದರಿಂದ ಕೂಡಲೇ ಸರ್ಕಾರಗಳು ಇವರ ಸಮಸ್ಯೆಗಳಿಗೆ ಪರಿಹರಿಸುವುದರ ಮೂಲಕ ಅವರ ಕುಟುಂಬಗಳು ಬೀದಿಗೆ ಬಂದು ತಲುಪುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು. ಮುಂಚೂಣಿಯಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕಾಲಮಿತಿಯೊಳಗೆ ಉಚಿತವಾಗಿ ವ್ಯಾಕ್ಸಿನೇನ್ ಮಾಡುವುದು. ಮುಂಚೂಣಿಯಲ್ಲಿರುವ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಸುರಕ್ಷತಾ ಸಾಧನಗಳನ್ನು ಒದಗಿಸುವುದು. ಕೋವಿಡ್ -19 ರ ಟೆಸ್ಟ್ ಖಡ್ಡಾಯವಾಗಿ ಮಾಡಿಸಿ ಸೋಂಕಿನಿಂದ ರಕ್ಷಿಸುವುದು. ಜಿಡಿಪಿಯ ಶೇ.6 ರ ಹಣವನ್ನು ಆರೋಗ್ಯ ಇಲಾಖೆಗೆ ಮೀಸಲಿಟ್ಟು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದು ಹಾಗೂ ಮೂಲಭೂತ ಸೌಕರ್ಯಗಳಾದ ಆಮ್ಲಜನಕ ಮೊದಲಾದವುಗಳನ್ನು ಒದಗಿಸುವುದು. ಸೇವಾಹಿರಿತನದ ಆಧಾರದಲ್ಲಿ ದೀರ್ಘ ಸೇವೆ ಸಲ್ಲಿಸಿದವರಿಗೆ ಹಾಗೂ ಹೊಸದಾಗಿ ನೇಮಕಾತಿ ಆದವರಿಗೂ ಇರುವ ತಾರತಮ್ಯ ಸರಿಪಡಿಸಿ ಗೌರವಧನ ಹೆಚ್ಚಳ ಮಾಡುವುದು. ಇಂಡಿಯನ್ ಲೇಬರ್ ಕಾನಫರೆನ್ಸ್ನ 45ನೇ ಹಾಗೂ 46ನೇ ಅಧಿವೇಶನದ ಶಿಫಾರಸ್ಸಿನಂತೆ ಐಸಿಡಿಎಸ್ ಯೋಜನೆಗಳ ಕೆಲಸಗಾರರನ್ನು ಕಾರ್ಮಿಕರೆಂದು ಪರಿಗಣಿಸಿ, ರೂ.21000ಗಳ ಮಾಸಿಕ ಕನ್ಸಿ ವೇತನ ನೀಡುವುದು, ಮಾಸಿಕ ಪಿಂಚಣಿ ರೂ.10,000/- ನೀಡುವುದು ಹಾಗೂ ಇ.ಎಸ್.ಐ ಮತ್ತು ಭವ್ಯನಿಧಿ ಸೌಲಭ್ಯಗಳನ್ನು ಕಲ್ಪಿಸುವುದು. ರಾಜ್ಯದಲ್ಲಿ 45 ವರ್ಷಗಳಿಂದ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ಮತ್ತು ಸಹಾಯಕಿಯರನ್ನು ಸರ್ಕಾರ ಕೂಡಲೇ ಖಾಯಂಗೊಳಿಸಬೇಕು. ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಾಗಿ ಸೇವೆರ ಸಲ್ಲಿಸಿ ನಿವೃತ್ತಿಯಾಗಿರುವವರಿಗೆ ನಿವೃತ್ತಿ ವೇತನವನ್ನು ಜಾರಿಗೊಳಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸೇವೆಸಲ್ಲಿಸಿ ನಿವೃತ್ತಿಯಾಗಿರುವವರೆಗೆ ಎನ್.ಪಿ.ಎಸ್. ಯೋಜನೆಯ ಹಣವನ್ನು ಕೂಡಲೇ ಕೊಡಸಬೇಕು. ಎಲ್.ಕೆ.ಜಿ. ಮತ್ತು ಯು.ಕೆ.ಜಿ. ಶಾಲೆಗಳನ್ನು ಪ್ರಾರಂಭಿಸುವುದನ್ನು ಕೈಬಿಡಬೇಕೆಂದು ಒತ್ತಾಯಿಸಿ ತಹಶೀಲ್ದಾರ್ ಸುರೇಶ್ ಕುಮಾರ್ ರವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಪ್ರತಿಭಟನೆಯಲ್ಲಿ ಎ.ಐ.ಟಿ.ಯು.ಸಿ.ಯ ತಾಲ್ಲೂಕು ಅಧ್ಯಕ್ಷೆ ಡಿ ನಾಗರತ್ನಮ್ಮ, ಪ್ರಧಾನ ಕಾರ್ಯದರ್ಶಿ ಕೆ.ಅರವಿಂದಬಾಯಿ, ಸೌಭಾಗ್ಯ ಹೆಚ್.ಗಂಗಮ್ಮ, ಕ್ಷ್ಮಿದೇವಿ, ವಸಂತಮ್ಮ, ರಾಜೇಶ್ವರಿ, ಉಮಾದೇವಿ, ಗೌರಮ್ಮ, ಸಿಸ್ಟರ್, ಭಾಗ್ಯಮ್ಮ, ಜಾಹ್ನವಿ, ರಜಿಯೋಬೀ, ರುಸ್ನಾನ, ಸುಪ್ರಿಯಾ, ಜ್ಯೋತಿ, ಸುಜಾತ, ಯಶೋಧ, ಗಾಯತ್ರಿ, ಮಹಾದೇವಿ, ಅಂಜಿನಮ್ಮ, ರೇಣುಕಾ, ಚಾಮುಂಡಮ್ಮ, ಕೆ.ಪಾಲಮ್ಮ, ಜ್ಯೋತಿ, ಎಸ್.ಓ.ಪಾಲಮ್ಮ, ಸಿ.ಎಂ. ನಾಗರತ್ನ , ಜಿ.ನಾಗರತ್ನ, ಸುಶೀಲಮ್ಮ, ಗೀತಾಲಕ್ಷ್ಮಿ ಸುವರ್ಣ ಹಾಗೂ ಮುಂತಾದವರು ಉಪಸ್ಥಿತರಿದ್ದರು…

ವರದಿ.ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
