ಹರಾಜು ಪ್ರಕ್ರಿಯೆ ಇಲ್ಲದೆ ಹಳೆ ಸಾಮಾಗ್ರಿಗಳು ಗುಜ್ಜರಿಗೆ ಎಲ್ಲಾ ಗೊತ್ತಿದ್ದರೂ ಪಿಡಿಒ ಮೌನ.
ಸಿರುಗುಪ್ಪ ತಾಲೂಕಿನ ಹಳೇಕೋಟೆ ಗ್ರಾಮ ಪಂಚಾಯಿತಿಯಲ್ಲಿ ಸುಮಾರು ವರ್ಷಗಳ ಹಳೆಯ ನೀರಿನ ಕಬ್ಬಿಣ.ಕೊಳಯಿ ಪೈಪಗಳು ಮುಂತಾದ ಹಳೆಯ ಸಾಮಾಗ್ರಿಗಳನ್ನು ಗುಜ್ಜರಿಗೆ ಮಾರಾಟ ಮಾಡಿದ್ದಾರೆ ಅದರೆ ಈ ವಿಚಾರವನ್ನು ಸಾಮಾನ್ಯ ಸಭೆಯಲ್ಲಿ ಚರ್ಚೆ ನೆಡಸದೆ ಒಂದು ಸುತ್ತೋಲೆಯನ್ನು ಹೊರಡಿಸದೆ ಏಕಾಏಕಿ ಮಾರಾಟ ಮಾಡಿದ್ದಾರೆ ಸರ್ಕಾರಕ್ಕೆ ಸಂಬಂಧಿಸಿದ ಸಾಮಾಗ್ರಿಗಳನ್ನು ಮಾರಾಟ ಮಾಡಬೇಕಾದರೆ ಹರಾಜು ಪ್ರಕ್ರಿಯೆ ಮಾಡುತ್ತಾರೆ.ಸರ್ಕಾರದ ನಿಯಮ ಪಾಲಿಸದೆ ಉಲ್ಲಂಘಿಸಿದ್ದಾರೆ.ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗುಜ್ಜರಿ ಮಾಲಿಕರಿಂದ್ದ 4 ಸಾವಿರ ರೂಪಾಯಿ ಹಣವನ್ನು ಮುಂಗಡವಾಗಿ ಪಡೆದುಕೊಂಡಿದರಂತೆ. ಇನ್ನೊಂದು ಅಂಶವನ್ನು ಮುಖ್ಯವಾಗಿ ಗಮನಿಸಬೇಕು ಕುಡಿಯುವ ನೀರಿನ ಕೆರೆಯ ನಿರ್ಹವಣೆಗೆ(ಮೆಂಟೆನಸ್) ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಟೆಂಡರ್ ಪ್ರಕ್ರಿಯೆ ಇರುತ್ತದೆ ಅದರಂತೆ ಹಳೇಕೋಟೆ ಗ್ರಾಮ ಪಂಚಾಯಿತಿ ಕುಡಿಯುವ ನೀರಿನ ಕೆರೆಯು 5 ವರ್ಷ ಅವಧಿಗೆ ಗುತ್ತಿಗೆದಾರರು ಗುತ್ತಿಗೆ ಪಡೆದುಕೊಂಡ ಮೇಲೆ ಕೆರೆಗೆ ಸಂಬಂಧಿಸಿದ ಎಲ್ಲಾ ನಿರ್ಹವಣೆ ಗುತ್ತಿಗೆದಾರರಿಗೆ ಒಳಪಟ್ಟಿರುತ್ತದೆ ಕೆರೆಯಿಂದ ಊರಿನ ಓವರ್ ಟ್ಯಾಂಕಗೆ ನೀರು ಸರಬರಾಜು ಮಾಡುವ ಜವಾಬ್ದಾರಿ ಅವರಿಗೆ ಸಂಬಂಧಪಟ್ಟಿರುತ್ತದೆ.ಗ್ರಾಮ ಪಂಚಾಯಿತಿ ಪಂಪ್ ಅಪರೇಟರಗಳು ಊರಿನಲ್ಲಿ ನೀರು ಸರಬರಾಜು ಮಾಡುತ್ತಾರೆ ಅದರೆ ಗುತ್ತಿಗೆದಾರರು ಗ್ರಾಮ ಪಂಚಾಯಿತಿ ಪಂಪ್ ಅಪರೇಟರಗಳನ್ನು ಬಳಿಸಿಕೊಳ್ಳುತ್ತಾರೆ.ಕೆರೆಗೆ ಒಬ್ಬ ಕಾವಲುಗಾರ ಇಲ್ಲ ತಾಲೂಕಿನಲ್ಲಿ 7 ರಿಂದ 8 ಮಕ್ಕಳು ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿದ್ದಾರೆ ಇಂತಹ ಘಟನೆಗಳು ಮತ್ತು ಇನ್ನಿತರ ಅಹಿತಕರ ಘಟನೆಗಳು ಸಂಭವಿಸಿದರೆ ಯಾರು ಹೊಣೆ.ನೀರು ಸರಿಯಾಗಿ ಫಿಲ್ಟರ್ ಅಗಿರುವುದಿಲ್ಲ.2 ದಿನ ನೀರು ಸಂಗ್ರಹಿಸಿದರೆ ಸಣ್ಣ ಸಣ್ಣ ಹುಳಗಳು ಕಂಡುಬರುತ್ತದೆ.ಸಾಂಕ್ರಾಮಿಕ ರೋಗಗಳು ಇರುವ ದಿನಗಳಲ್ಲಿ ಕಲುಷಿತ ನೀರು ಕುಡಿದು ಆರೋಗ್ಯದಲ್ಲಿ ತೊಂದರೆಯಾದರೆ ಯಾರು ಹೊಣೆಗಾರರು.ಗುತ್ತಿಗೆದಾರರು ಮತ್ತು ಅಧಿಕಾರಿಗಳ ಹತ್ತಿರ ಹಣದ ಸಮಸ್ಯೆ ಇರುವುದಿಲ್ಲ ದುಡಿದು ಜೀವನ ಮಾಡುವ ಸಾಮಾನ್ಯ ಜನರ ಪರಿಸ್ಥಿತಿ ಏನು? ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಎಲ್ಲಾ ವಿಷಯಗಳು ಗೊತ್ತಿದ್ದರು ಮೌನವಾಗಿದ್ದಾರೆ ಯಾಕೆ ಎಂಬ ಪ್ರಶ್ನೆ ಜನರಲ್ಲಿ ಕಾಡುತ್ತಿದೆ.2 ದಿನಗಳ ಹಿಂದೆ ಗ್ರಾಮಸಭೆಯಿತ್ತು ಸುಮಾರು 8 ರಿಂದ 9 ಸಾವಿರ ಜನಸಂಖ್ಯೆಯಿದೆ ಗ್ರಾಮಸಭೆಗೆ ಭಾಗವಹಿಸಿದು ಕೇವಲ 30 ರಿಂದ 40 ಜನ ಮಾತ್ರ .ಯಾಕೆಂದರೆ ಗ್ರಾಮ ಪಂಚಾಯಿತಿ ಅಡಳಿತದ ಮೇಲೆ ಜನರಿಗೆ ವಿಶ್ವಾಸವಿಲ್ಲ.ಕೆಟ್ಟವ್ಯವಸ್ಥೆಯ ವಿರುದ್ಧ ಮೇಲಾಧಿಕಾರಿಗಳ ಗಮನಕ್ಕೂ ತಂದರು ಏನು ಪ್ರಯೋಜನವಿಲ್ಲ ಇಂತಹ ಅವ್ಯವಸ್ಥೆಗಳು ಯಾವಗ ಸರಿಯಾಗುತ್ತವೆ ಎಂಬುವುದು ಎಲ್ಲಾರ ಯಕ್ಷ ಪ್ರಶ್ನೆಯಾಗಿದೆ….

ವರದಿ. ವಿರೇಶ್ ಹಳೇಕೋಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
