ಕುಂಬಾರರಿಗೆ ಸನ್ಮಾನಿಸಿ ಅಭಿನಂದನೆಗಳು…!!!

ಕುಂಬಾರರಿಗೆ ಸನ್ಮಾನಿಸಿ ಅಭಿನಂದನೆಗಳು

ವಿಜಯನಗರ ಜಿಲ್ಲೆ- ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಗ್ರಾಮದಲ್ಲಿ ಬಿಜೆಪಿ ತಾಲೂಕು ಮಂಡಲ ಮಹಿಳಾ ಮೋರ್ಚಾ ವತಿಯಿಂದ ಗೊಪೂಜೆ ಮಾಡಲಾಯಿತು ನಂತರ ಹೊಸಹಳ್ಳಿ ಗ್ರಾಮದಲ್ಲಿ
ತಲತಲಾಂತರದಿಂದ ಕಮ್ಮಾರಿಕೆ (ಕೂಲಿಮೆ) ಮಾಡಿಕೊಂಡು ಬಂದಿರುವಂತಹಕಮ್ಮಾರ ಈರಣ್ಣ.ಮತ್ತು ಸ್ವಯಂಪ್ರೇರಿತರಾಗಿ ರೊಟ್ಟಿ ತಯಾರಿಸಿವ್ಯಾಪಾರ ಮಾಡುವ ಬಸಟಿಪ್ಪರ್ ಬಾಗ್ಯಮ್ಮ, ಇವರನ್ನು ತಾಲೂಕ್ ಮೋರ್ಚ್ ಮಹಿಳೆಯರಿಂದ ಸನ್ಮಾನಿಸಲಾಯಿತು.ಕುಂಬಾರಿಕೆ, ಕಮ್ಮಾರಿಕೆ, ಬಿದಿರಿನ ಪುಟ್ಟಿ ವ್ಯಾಪಾರಿಗಳನ್ನು ಭೇಟಿ ಮಾಡಿ ಅವರ ಕುಂದುಕೊರತೆಗಳ ಬಗ್ಗೆ ವಿಚಾರಿಸಲಾಯಿತು. ನಂತರ ಮಹಿಳೆಯರು ರಾಜ್ಯದಲ್ಲಿ ಕರೋನ ಲಸಿಕೆ ಅಭಿಯಾನ ಉಚಿತವಾಗಿ ನೀಡಲಾಗುತ್ತಿದೆ, ಇದರ ಸದುಪಯೋಗವನ್ನು ಪಡೆಯಿರಿ, ಪ್ರತಿಯೊಬ್ಬರು ತಪ್ಪದೇ ವ್ಯಾಪಾರಿಗಳು ಕೋರೋನ ಲಸಿಕೆ ಯನ್ನು ಪಡೆಯಿರಿ ಎಂದು ಹೇಳಿದರು. ಕೂಡ್ಲಿಗಿ ತಾಲೂಕಿನ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ.L. ಪವಿತ್ರ ರವರು ಮಾತನಾಡಿ ಈಗಾಗಲೇ ಕರುನಾ ಮೂರನೇ ಅಲೆ ಹರಡುವ ಭೀತಿಯಲ್ಲಿದ್ದು ಮುಂಜಾಗ್ರತಾ ಕ್ರಮವಾಗಿ ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಸ್ಯಾನಿಟೈಜರ್ ನ್ನು ಆಗಾಗ ಬಳಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವ್ಯಾಪಾರ ಮಾಡುವುದು. ಪ್ರತಿಯೊಬ್ಬ ವ್ಯಾಪಾರಿಗಳು ಒಂದನೇ ಹಾಗೂ ಎರಡನೇ ಕರೋನ ಲಸಿಕೆಯನ್ನು ತಪ್ಪದೇ ಹಾಕಿಸಿಕೊಳ್ಳಿ, ತಾವು ಲಸಿಕೆ ಹಾಕಿಸಿಕೊಂಡು ಇತರರಿಗೂ ನಿಮ್ಮ ಸ್ನೇಹಿತರಿಗೂ ಪಕ್ಕದ ಮನೆಯವರಿಗೂ ಹಾಕಿಸಿಕೊಳ್ಳಲು ಹೇಳಿರಿಎಂದು ಈ ಸಂದರ್ಭದಲ್ಲಿ ಮಾತನಾಡಿದರು. ಇನ್ನು ಗ್ರಾಮದಲ್ಲಿ ಅನೇಕ ವ್ಯಾಪಾರಿಗಳ ಸಮಸ್ಯೆಗಳನ್ನು ವಿಚಾರಿಸಿ ದರು.ಸಂಬಂಧಪಟ್ಟ ಇಲಾಖೆಗಳಿಗೆ ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆತಿಳಿಸಿ ಆದಷ್ಟು ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇವೆ ಎಂದು ತಾಲೂಕಿನ ಮಹಿಳಾ ಮೋರ್ಚ್ ಸದಸ್ಯರು ಪ್ರತಿನಿಧಿಗಳು ಈ ಸಂದರ್ಭದಲ್ಲಿ ಮಾತನಾಡಿದರು.ಈ ಕಾರ್ಯಕ್ರಮದಲ್ಲಿ ಕೂಡ್ಲಿಗಿ ಮಂಡಲ್ ಮಹಿಳಾ ಬಿಜೆಪಿ ಮೋರ್ಚಾ ಅಧ್ಯಕ್ಷೆ. L. ಪವಿತ್ರ, ಪ್ರಧಾನ ಕಾರ್ಯದರ್ಶಿಗಳಾದ ಶಾರದ ಕುಂಬಾರ ಮತ್ತು ಗಾಯತ್ರಿ, ಜಿಲ್ಲಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ L. ಗೀತಾ, ಸೇರಿದಂತೆ ಇತರ ಮಹಿಳೆಯರು ಉಪಸ್ಥಿತರಿದ್ದರು…

ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend