ಸ್ತ್ರೀ ಕುಲದ ಸಂರಕ್ಷಣೆಯು ಅದ್ಯಾಕೆ ಇನ್ನೂ ಪೂರ್ಣವಾಗುತ್ತಿಲ್ಲ ಎನ್ನುವುದೇ ಕಾಡುವ ನೋವಿನ ಪ್ರಶ್ನೆಯಾಗಿದೆ
ನಮಸ್ತೆ ಚಿಂತನಾಶೀಲ ವ್ಯಕ್ತಿತ್ವಕ್ಕೆ
ಗಾಂಧಿ ಕನಸೊಂದುಕಂಡಿದ್ದರಂತೆ ರಾತ್ರಿ ಹನ್ನೆರಡು ಗಂಟೆಗೆ ಒಂದು ಒಂಟಿ ಹೆಣ್ಣು ನಿರ್ಭಯವಾಗಿ ಓಡಾಡುವುದೋ ಆಗ ಪೂರ್ಣ ಸ್ವಾತಂತ್ರ್ಯ ದೊರತಂತೆ ಎಂದು,ಆ ಕನಸಿನ ಮಾತು ಮಾತಾಗೇ ಉಳಿಯಿತೇನೋ ಅನ್ನಿಸುತ್ತಿದೆ, ಆ ಹೆಣ್ಣಿನ ನೋವು ವೇದನೆಗಳಿಗೆ ಬರೀ ಜಾಲತಾಣಗಳಲ್ಲಿ ಸ್ಟೇಟಸ್ ಗೆ ಸಾಂತ್ವನ ಸೀಮಿತವಾಗದೆ, ಭೌತಿಕ ಸಂರಕ್ಷಣೆಯಾಗಬೇಕಿದೆ,
ಸಂರಕ್ಷಣೆಗೆ ಗಂಡು ಕಾಯುವ ಶಸ್ತ್ರವಾಗಬೇಕೇ ವಿನಃ ಕೊಲ್ಲುವಂತಾಗಬಾರದು ಆರು ವರ್ಷದ ಅತ್ಯಾಚಾರಕೊಳಗಾದ ಕುಟುಂಬದ ಕೂಗು ಮುಗಿಲಿನೆತ್ತರಕೆ ಗುಯ್ ಅನ್ನುತ್ತಿದೆ ಈ ಬರಹ ಖಾರವು ಅನ್ನಿಸಬಹುದು ಅಥವಾ ಕೆಲಸವಿಲ್ಲದೇ ಆಗಲಿ ಪ್ರಚಾರಕ್ಕಾಗಲಿ ಬರೆಯುತ್ತಿಲ್ಲ , ಮೂರ್ನಾಲ್ಕು ಅತ್ಯಾಚಾರಗಳು ಆದಾಗಿನಿಂದ ಅಸಮಾಧಾನವಿದೆ ಈ ಕಾಯ್ದೆಗಳು,ಈ ವ್ಯವಸ್ಥೆ ಬರೀ ಭಾಷಣಕ್ಕೆ, ಪುಸ್ತಕಕ್ಕೆ ಸೀಮಿತವಷ್ಟೇ ಅನ್ನಿಸುತ್ತಿವೆ,ನಾನಂತು ಅದೆಷ್ಟೋ ರಾತ್ರಿ ಕಣ್ಣಿರ ಹಾಕಿದ್ದೆನೋ ಎಲ್ಲವೂ ಇರುವಲ್ಲಿ ನನ್ನ ಎಲ್ಲ ಸಹೋದರಿಯರಿಗೆ ರಕ್ಷಣೆಯಾಕಿಲ್ಲ ಹಾಗೂ ಇಲ್ಲಿಯ ವರೆಗೂ ಅನೇಕ ಸಂಘಟನೆಗಳು ಪ್ರತಿಭಟನೆಯನ್ನ ಸುಖಾಸುಮ್ಮನೆ ಮಾಡ್ಲಿಲ್ಲ ಆ ಸಹೋದರಿಯರ ಕಿರುಚಾಟ ಅರಚಾಟದ ನೋವು ಊಹಿಸಲಿಕ್ಕೂ ಅಸಾಧ್ಯವಾಗಿ ಕಾಡುತ್ತಿದೆ ನನ್ನ ದೇಶದ ಸ್ಥಿತಿ ಎಲ್ಲಿಗೆ ನಿಂತಿದೆ ಯಾವ ಕೆಲಸದಲ್ಲಿ ಹೀನಾಯವಾಗುತ್ತಿದೆ ಯಾವ ಸ್ತ್ರೀಯನ್ನು ಯಾವ ಭೂಮಿಯಲ್ಲಿಗೌರವ ಸ್ಥಾನದಲ್ಲಿ ಇರಿಸಿದ್ದೆವೋ ಆ ಭೂಮಿಯಲ್ಲಿ ಇಂತಹವುಗಳು.. ಆರ್ಥಿಕತೆಯಲ್ಲಿ ,ಕೃಷಿಪ್ರಾಧನದಲ್ಲಿ ,ಮತ್ತಿತ್ತರ ಕ್ಷೇತ್ರದಲ್ಲಿ ಹೇಗೆ ಬಿಂಬಿಸುತ್ತಿದ್ದೇವೋ ಹಾಗೇ ಬಿಂಬಿಸಬಿಕೊಳ್ಳಬೇಕು ಆದರೆ ಈಗ ಸ್ಥಿತಿ ಬದಲಾಗುವ ದೃಶ್ಯಕಂಡುಬರುತ್ತಿದೆಯೇನೋ ನೆನೆಸಿಕೊಂಡರೆ ಕಿಚ್ಚತ್ತುವ ಸಂಗತಿ ಅತ್ಯಾಚಾರಕ್ಕೊಳಗಾದ ಸಹೋದರಿಯಬಗ್ಗೆ ನೆನೆದಾಗಲೆಲ್ಲ ನೋವಿನ ಅಳಲು ಪದೇಪದೇ ಕಾಡುತ್ತಿದೆ ಇದರ ಬಗ್ಗೆ ಒಮ್ಮೆ ಯೋಚಿಸಿದಾಗಲೆಲ್ಲ ಕಣ್ಣಿರು ಹರಿಯುತ್ತವೆ ಆದರೂ ಎಲ್ಲರೂ ಅಸಹಾಯಕತೆಗೆ ಶರಣಾಗಿದ್ದೆವೇನೋ ಎನ್ನಿಸುತ್ತಿದೆ ಯಾವ ಹೆಣ್ಣಿಗೆ ಯಾವ ಮಾತೆಯ ಭಾವಕ್ಕೆ ಯಾವ ಮೇರುಸ್ಥಾನವನ್ನು ನೀಡಿ ಗೌರವಿಸಿ ಪೂಜಿಸುತ್ತಿದ್ದೆವೋ ಆ ಮಣ್ಣಿನಲ್ಲಿ ವಿಷಕಾರಿ ಕಾಮುಕ ಕೀಟಗಳು ಹುಟ್ಟಿಕೊಂಡಿವೆ ಇದರಿಂದ ಅಮಾಯಕ ಜೀವಗಳು ಮಾನಪ್ರಾಣ ಕಳೆದುಕೊಳ್ಳುತ್ತಿವೆ.
ಅಮಾಯಕ ಅಷ್ಟೇ ಅಲ್ಲ ಇನ್ನೂ ಆರು ವರ್ಷದ ಅಸುಗೂಸು ಆ ಜೀವ ಅದೆಷ್ಟು ಬರ್ಬರವಾಗಿ ನೋವುಂಡಿರಬಹುದು ಕುಟುಂಬದ ಮನಸ್ಥಿತಿ ಹೇಗಾಗಿರಬಹುದು,ಒಮ್ಮೆ ಭಾವುಕರಾಗಿ ಚಿಂತಿಸಿ ಕರುಳೀ ಕಿವುಚಿತಾಂಗುತ್ತದೆ, ಈ ಪೈಶಾಚಿಕ ಕೃತ್ಯ ಆಗಿದೆ.ವರ್ಷ ಅನರ್ಘ್ಯ ವಾದ ಕಾಪಾಡಿಕೊಂಡು ಹೋಗಬೇಕಿದ್ದ ಮಾನಪ್ರಾಣ ಕ್ಷಣಾದಲ್ಲೇ ಕಳೆಯಿತು ಅರಳುವ ಹೂವು ಚಿಗುರಿನ ಲ್ಲಿಯೇ ನಂಜಾಗಿ ಹೋಯಿತು,ಎಲ್ಲಿಗೆ ಬಂತು ಸ್ವಾತಂತ್ರ್ಯ ,ಯಾಕಾಗಿ ಬೇಕಿತ್ತು ಈ ಸ್ವಾತಂತ್ರ್ಯ ಈ ಪುರುಷಾರ್ಥಕ್ಕಾಗಿ ಬೇಕಿತ್ತಾ ಸ್ವಾತಂತ್ರ್ಯ , ಸ್ವಾತಂತ್ರ್ಯ ಇದೆಯೆಂದು ಪುರುಷತ್ವವನ್ನು ಮತ್ತೋರ್ವ ಅಮಾಯಕ ಕೂಸಿನಮೇಲೆಯೋ ಅಥವಾ ಒಂದು ಪರಸ್ತ್ರೀ ಮೇಲೆ ಪ್ರಯೋಗವೇಕೆ ತಮ್ಮ ತೃಷೆಗಳಿಗೆ ಒಂದು ಜೀವ ಜೀವನದ ಬಲಿ ಇದ್ಯಾವ ಪುರುಷಾರ್ಥ ಇದು ಮನುಷ್ಯ ಜಾತಿಯದಲ್ಲ ಅದೆಷ್ಟೋ ಹೀನಾಯವಾಗಿ ಹೇಳಿದರೂ ಚಿಕ್ಕದಾಗಬಹುದು ಕಾರಣ ಒಂದು ಕ್ಷಣ ಅತ್ಯಾಚಾರಕ್ಕೊಳಗಾದ ಓಂ ಹೆಣ್ಣಿನ ಸಹೋದರನ ಸ್ಥಾನದಲ್ಲಿ ಇದ್ದು ಆ ಕುಟುಂಬದ ಸ್ಥಾನದಲ್ಲಿದ್ದು ಯೋಚಿಸಿದಾಗ ಕಣ್ಣಿನಲ್ಲಿ ಬರೀ ಕಣ್ಣೀರಲ್ಲ ರಕ್ತವೇ ಹರಿಯಬಹುದು ಈ ಕೃತ್ಯ ಇಡೀ ಸಮಾಜಕ್ಕೆ ಅತೀವ ನೋವಿನ ಸಂಗತಿಯು ನಮ್ಮೆದುರಿದೆ ಇದು ನನ್ನಿಂದಾಗಲಿ ಬದಲಾಗಬಹುದುದಲ್ಲ ಎಂಬ ಭ್ರಮೆ ಬೇಡ,ನಿಮ್ಮಿಂದಾಗಲಿ ಬದಲಾಗಬಹುದು ಎಂಬ ಭ್ರಮೆಯೂ ಇಲ್ಲ ಕೈ ಕೈ ಜೊಡಿಸಿದರೆ ಚಪ್ಪಾಳೆ ಎನ್ನುವಂತೆ ಪ್ರತಿಯೊಬ್ಬ ನಾಗರಿಕನು ಸಹ ಈ ಹೀನಾಯ ಸ್ಥಿತಿಗೆ ವಿದಾಯಹಾಡಬೇಕಿದೆ ತೆರೆ ಎಳೆಯಬೇಕಿದೆ ಒಗ್ಗಟ್ಟಿನಲ್ಲಿ ಬಲವಿದೇ ಎಂಬ ಘೋಷಣೆತನ್ನು ಸಾಬೀತುಕರಿಸಬೇಕಿದೆ ಘನ ಸರ್ಕಾರಕ್ಕೆ ಎಚ್ಚರಿಕೆ ಮಾತ ಹೇಳಬೇಕಿದೆ ಅತ್ಯಾಚಾರ ಮಾಡಿದವರಿಗೆ ಶಿಕ್ಷೆ ಆಗಬಹುದು ಆದರೆ ಆ ಹೆಣ್ಣಿಗೆ ಆ ಸಹೋದರಿಯ ಮಾನಪ್ರಾಣಗಳು ಬರುತ್ತವೇನೋ ಹೇಳಿ? ಅನೇಕ ಸಂಘಸಂಘಟನೆಗಳು ಈಗಾದ ನೋವಿಗೆ ಸಂತಾಪ ಸೂಚಿಸಿ ಪ್ರತಿಭಟಿಸಿದವು ಸರ್ಕಾರ ಸಾಂತ್ವನ ಹೇಳಿ ಕಳಿಸಿದೆ ಇವೆಲ್ಲವಕ್ಕೂ ಕೊನೆ ಎನ್ನುವುದು ಯಾವಾಗ ಈ ಹಿಂದೆ ಅತ್ಯಾಚಾರಿಗಳನ್ನು ಸುಟ್ಟಾಕಲು ಆದೇಶಿಸಿ ಕಾರ್ಯ ರೂಪಕ್ಕೆ ತಂದಿರಿ ಅಭಿನಂದನಾರ್ಹವೇ ಆದರೆ ಆ ಸಹೋದರಿಯ ಜೀವ ಜೀವನ ಎರೆಡು ಮರಳಿಬಂತೆ ? ಇಲ್ಲವಲ್ಲ ಹಾಗಾಗಿ ಇಂತಹ ಸಂಗತಿಗಳು ಮತ್ತೆ ಆಗದಿರುವಂತೆ ಘನಸರ್ಕಾರ ಕ್ರಮಕೈಗೊಳ್ಳಬೇಕು,ಆ ಪ್ರಾಂತ್ಯದಲ್ಲಿನ ನನ್ನದೇಶದ ಮಿತ್ರರೂ ಸಹ ಆ ಸಂದರ್ಭದಲ್ಲಿ ಎಚ್ಚೆತ್ತು ರಕ್ಷಿಸಬೇಕು,ನನ್ನ ದೇಶ ಭರತಖಂಡದ ಎಲ್ಲ ಸಹೋದರಿಯರು ವೀರವನಿತೆಯರಾಗರಿ ಮಾನಪ್ರಾಣಗಳ ರಕ್ಷಣೆಗೆ ತಾವೇ ಸನ್ಧದ್ಧರಾಗಿರಿ ಇವರಿಗೆ ಪೂರಕವಾಗಿ ಸಹೋದರ ಭಾವನೆಯನ್ನು ಮಿತ್ರರು ತುಂಬಿಕೊಳ್ಳಿ ಯುವಮಿತ್ರರು ಒಂಟಿ ಹೆಣ್ಣು ಒರ್ವ ಗಂಡನ್ನು ನೋಡಿದರೆ ಯಾವುದೇ ದುಷ್ಟ ಶಕ್ತಿಬಂದರೂ ಕಾಪಾಡಲೂ ಇಲ್ಲಿ ಒರ್ವ ಪುರುಷನಿದ್ದಾನೆ ಎಂಬ ಧೈರ್ಯ ಇರಬೇಕೇ ಹೊರತು ನೋಡಿ ಹೆದರುವಂತಾಗಬಾರದು , ಎಂತೆಂತಹ ಮಹನೀಯರು ಜನ್ಮಿಸಿದ ಭೂಮಿಯನ್ನು ವೈಭವಿಕರಿಸಬೇಕೆ ಹೊರತು ನಾಪತ್ತೆ ಯಾಗುವ ಕೆಲಸ ಆಗಬಾರದು , ವಿಷಕಾರಿ ನರರೂಪ ಕಾಮುಕ ಕೀಟಗಳನ್ನು ಹೊಡೆದೊಡಿಸುವ ಶಕ್ತಿ ತುಂಬಿಕೊಳ್ಳಿ ಮಾನ್ಯ ಘನಸರ್ಕಾರವೇ ಅತ್ಯಾಚಾರವೆಸಗಿದ ಆ ಭ್ರಷ್ಟರಿಗೆ ತಕ್ಕ ಪಾಠವಾಗಬೇಕು ಈ ಸಹೋದರಿಗೆ ನ್ಯಾಯ ದೊರಕಿಸಬೇಕು ಹಾಗೆ ಹೆಣ್ಣಿಗೆ ಮಾನಪ್ರಾಣಗಳಿಗೆ ಬೇಕಾದ ಪೂರೈಕೆಯನ್ನು ಪೂರೈಸಬೇಕು ಎನ್ನುವ ಬೇಡಿಕೆ ಹಾಗೂ ಈ ಹೀನಾಯಕೃತ್ಯ ಇದೇ ಕೊನೆಯಾಗಬೇಕು,ಬರೀ ಸಾಂತ್ವಾನವೇ ಆಗದಿರಲಿಇಲ್ಲಿಯವರೆಗೂ ಸಂತಾಪ ಸೂಚಿಸಿ,ಪ್ರತಿಭಟಿಸಿದ ಸಂಘಟನೆಗೆ ಅನಂತ ಧನ್ಯವಾದಗಳನ್ನು ಅರ್ಪಿಸುವೆ…….
ಕೆ.ಕಾರ್ತಿಕ ಆಚಾರ್ಯ
ಎಂ.ಕಲ್ಲಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
