;

ಇಟ್ಟಿಗಿ ಗ್ರಾಮ ಪಂಚಾಯಿತಿಯಲ್ಲಿ ‘ಕಲ್ಯಾಣ ಕರ್ನಾಟಕ ಉತ್ಸವ “ದಿನಾಚರಣೆ ಮತ್ತು ಕೋವಿಡ್ ಲಸಿಕೆ ಅಭಿಯಾನ…!!!

ಇಟ್ಟಿಗಿ ಗ್ರಾಮ ಪಂಚಾಯಿತಿಯಲ್ಲಿ ‘ಕಲ್ಯಾಣ ಕರ್ನಾಟಕ ಉತ್ಸವ “ದಿನಾಚರಣೆ ಮತ್ತು ಕೋವಿಡ್ ಲಸಿಕೆ ಅಭಿಯಾನ. ವಿಜಯನಗರ(ಜಿ) ಹೂವಿನ ಹಡಗಲಿ(ತಾ)ಸೆಪ್ಟೆಂಬರ್17 ಕಲ್ಯಾಣ ಕರ್ನಾಟಕ ಜನತೆಯಪಾಲಿಗೆ ಮರೆಯಲಾಗದ ಮಹಾನ್ ದಿನ. ನಿಜಾಮರ ಕಪಿಮುಷ್ಠಿಯಿಂದ ವಿಮೊಚನೆಗೊಂಡ ಪುಣ್ಯ ದಿನ.ದೇಶಕ್ಕೆ1947 ಆಗಸ್ಟ್15ರಂದು ಸ್ವಾತಂತ್ರ್ಯ ಸಿಕ್ಕರೆ ,ಕಲ್ಯಾಣ (ಹೈದ್ರಾಬಾದ್) ಕರ್ನಾಟಕಕ್ಕೆ 1948 ಸೆಪ್ಟೆಂಬರ್17ರಂದು ಸ್ವಾತಂತ್ರ್ಯ ದೊರಕಿತು ಈ ಮಹಾ ಸುದಿನವಾದ ಇಂದು ಇಟ್ಟಿಗಿ ಗ್ರಾಮ ಪಂಚಾಯತ್ ಕಛೇರಿಯನಲ್ಲಿ ಧ್ವಜಾರೋಹಣ ನಡೆಯಿತು ಮತ್ತು ಗ್ರಾಮ ಪಂಚಾಯತ್ ವತಿಯಿಂದ ಊರಿನ ಮನೆ-ಮನೆಗಳಿಗೆ ತೆರಳಿ ಕರೋನ ಮಹಾಮರಿಗೆ ಸಾಮಾಜಿಕ ಅಂತರ,ಮಾಸ್ಕ,ಮತ್ತು ಕರೋನಾ ಲಸಿಕೆಗಳೆ ನಮಗೆ ಅಸ್ತ್ರ ಆದ ಕಾರಣ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ PDO- ಅಧಿಕಾರಿಯಾದ ಉಮೇಶ್ ಜಾಹಗೀರ್ ದಾರ್,ಶಿವಕುಮಾರ್. ಮಲ್ಲಿಕಾರ್ಜುನ ಕೆ.ಕೊಟ್ರಪ್ಪ ಎಂ.ಹಾಗೂ ಸಿಬ್ಬಂದಿ,ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಳಕ್ಕನವರ ಪುಷ್ಪಾ.ಉಪಾಧ್ಯಕ್ಷ ಸಿದ್ದಪ್ಪ, ಹಾಗೂ ಗ್ರಾ ಪಂ ಸರ್ವ ಸದಸ್ಯರು ಉಪಸ್ಥಿತಿಯಲ್ಲಿದ್ದರು. ಇಟ್ಟಿಗಿಯ ಗ್ರಾ.ಪಂಚಾಯತಿ ವಾಹನದ ಮೂಲಕ ಊರಿನ ಪ್ರಮುಖ ರಸ್ತೆಗಳಲ್ಲಿ ಪ್ರಚಾರ ಮಾಡಿದರು.ಊರಿನ ಬಸವೇಶ್ವರ ದೇವಸ್ಥಾನ ಇಟ್ಟಿಗಿ ಕೋಟೆ.ಬೀರಲಿಂಗೇಶ್ವರ ದೇವಸ್ಥಾನ, ಕಲ್ಲೇಶ್ವರ ದೇವಸ್ಥಾನ, ಭಜನಾ ಸಂಘ,ಅಂಗನವಾಡಿ ಕೇಂದ್ರ ಎ,ಕೆ ಕಾಲೋನಿ ಇಟ್ಟಿಯಲ್ಲಿ ಲಸಿಕಾ ಕೇಂದ್ರಗಳಿಲ್ಲಿ ಲಸಿಕಾ ಕಾರ್ಯ ಕ್ರಮ ನಡಿಯುತ್ತಿತ್ತು.
ಲಸಿಕಾ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು& ಆಶಾ ಕಾರ್ಯಕರ್ತೆಯರು ಇದ್ದರು.

ವರದಿ: ಎ.ಪ್ರಕಾಶ್ ಇಟ್ಟಿಗಿ .

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;