;

ಸಿಂಧನೂರು : ಬಸನಗೌಡ ಬಾದರ್ಲಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಮತ್ತು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮ…!!!

ಸಿಂಧನೂರು : ಬಸನಗೌಡ ಬಾದರ್ಲಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಮತ್ತು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮ.

ವಾರ್ಡ್ ನಂ : 31ರ ಗುಂಡಮ್ಮ ಕ್ಯಾಂಪಿನಲ್ಲಿ ನಡೆದ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸಾಮಾನ್ಯರಿಗೆ ಅಧಿಕಾರ ನೀಡುವ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷ, ಯುವನಾಯಕರು ಹೆಚ್ಚೆಚ್ಚು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು, ಕಾಂಗ್ರೆಸ್ ಪಕ್ಷದಿಂದ ಮಾತ್ರ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವಂತ ಶಕ್ತಿ ಇದೆ.
ಕಾಂಗ್ರೆಸ್ ಪಕ್ಷವು ಹಲವಾರು ಜನಪರ ಕಾರ್ಯಕ್ರಮಗಳನ್ನು ಸಾಮಾನ್ಯರ ಜೀವನ ಮಟ್ಟವನ್ನು ಹೆಚ್ಚಿಸುವ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಇದೆ. ಮುಂದಿನ ದಿನಗಳಲ್ಲಿ ಭ್ರಷ್ಟ ಬಿಜೆಪಿಯನ್ನು ಕಿತ್ತೆಸೆದು ರಾಜ್ಯ, ರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಾವೆಲ್ಲರೂ ಪಣತೊಡಬೇಕು.
ಸ್ಥಳೀಯ ಶಾಸಕರಾದ ವೆಂಕಟರಾವ್ ನಾಡಗೌಡರು ಅಭಿವೃದ್ಧಿಯನ್ನು ಮರೆತು ಕೇವಲ ಕಮಿಷನ್ ರಾಜಕಾರಣ ಮಾಡುತ್ತಿದ್ದಾರೆ ಸಮಗ್ರ ಕ್ಷೇತ್ರದ ಅಭಿವೃದ್ಧಿಗಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ವನ್ನು ಅಧಿಕಾರಕ್ಕೆ ತರೋಣ ಎಂದು ಬಸನಗೌಡ ಬಾದರ್ಲಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಸಿಂಧನೂರು ಅಲ್ಪಸಂಖ್ಯಾತರ ನಗರ ಘಟಕದ ಅಧ್ಯಕ್ಷರಾದ ಅಮೀನ್ ಸಾಬ್ (ಬುಡ್ಡ ಸಾಬ್ ಡೊಂಗ್ರಿ )ಮತ್ತು ಗ್ರಾಮೀಣ ಘಟಕದ ಅಧ್ಯಕ್ಷರಾದ ದಾದಾಪೀರ್ ದಡೇಸುಗೂರು ಅವರನ್ನು ಸನ್ಮಾನಿಸಲಾಯಿತು.

ನಂತರ ಪಕ್ಷ ಸೇರ್ಪಡೆಗೊಂಡ ಎಲ್ಲಾ ಜೆಡಿಎಸ್ ಕಾರ್ಯಕರ್ತರಿಗೆ ಕಾಂಗ್ರೆಸ್ ಹೆಗಲು ಪಟ್ಟಿ ಹಾಕುವುದರ ಮುಖಾಂತರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು,

ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡವರು.
ವೆಂಕಟರೆಡ್ಡಿ(ನಾನಿ),ರಾಜಶೇಖರ್,ರಾಮಣ್ಣ ನಾಯಕ್, ಹಸನ್ ಟೈಲರ್, ದುಗ್ಗಪ್ಪ,ನಾಗಾರ್ಜುನ್ ರೆಡ್ಡಿ, ಕೇಶಿರಾವ್, ಶರಣಪ್ಪ, ಬಸವ ಗುಡಿಹಾಳ,ಬಾಬಿ ವಿಪ್ರಸಾದ್,ವೀರೇಶ, ಹುಸೇನ್, ಲಿಂಗರಾಜ, ಮುದುಕಪ್ಪ, ಪುಲರಡ್ಡಿ, ಆಂಜನೇಯ, ಪ್ರಾಣೇಶ, ದರ್ಮೆಶ, ದುಗ್ಗಪ್ಪ, ಸ್ಥಳೀಯ ಗುಂಡಮ್ಮ ಕ್ಯಾಂಪಿನ ಮತ್ತು ಪಿಡಬ್ಲ್ಯೂಡಿಕ್ಯಾಂಪ್ ಹಾಗೂ ಏಳುರಾಗಿ ಕ್ಯಾಂಪ್ ನೂರಾರು ಕಾರ್ಯಕರ್ತರು ಸೇರ್ಪಡೆಗೊಂಡರು

ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ ರಾಗಲಪರ್ವಿ,ಎಚ್.ಎಮ್ ಬಡಿಗೇರ್, ಶರಣಯ್ಯಸ್ವಾಮಿ ಕೋಟೆ , ಖಾಜಾಹುಸೇನ್ ರೌಡಕುಂದಾ, ಸಂಗ್ರಾಮ ನಾರಾಯಣ ಕಿಲ್ಲೆದ್, ಹಬೀಬ್ ಕಾಜಿ, ಹುಸೇನ್ ಸಾಬ್, ಸಲ್ಮಾನ್, ಖಾಜಿ ಅಳಗಿ,ಅಸ್ಲಾಂ ಯೂಸುಫ್, ಭರತ್ ಕುಮಾರ್, ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು..

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend