ಸಿಂಧನೂರು : ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ಸಂತಾಪ ಸೂಚನೆ.
1941 ಮಾರ್ಚ್ 27ರಂದು ಉಡುಪಿಯಲ್ಲಿ ಜನಿಸಿದ್ದ ಆಸ್ಕರ್ ಫರ್ನಾಂಡಿಸ್ ಅವರು ಕೇಂದ್ರದಲ್ಲಿ ಯುಪಿಎ ನೇತೃತ್ವದ ಸರ್ಕಾರದ ಆಡಳಿತ ಅವಧಿಯಲ್ಲಿ ರಸ್ತೆ, ಸಾರಿಗೆ, ಹೆದ್ದಾರಿ ಮತ್ತು ಕಾರ್ಮಿಕ ಸಚಿವರಾಗಿ ಕೆಲಸ ಮಾಡಿದ್ದಾರೆ. ಅಲ್ಲದೇ ಸಿಂಧನೂರು ತಾಲೂಕಿಗೆ ಅವರ ಕೊಡುಗೆ ಇದೆ. ಫರ್ನಾಂಡಿಸ್ ರವರು 60ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಸಂಘನೆಯಲ್ಲಿ ಸೇವೆ ಸಲ್ಲಿಸಿದ್ದು ಅವರು ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದರು, ಅವರ ಅಗಲಿಕೆಯಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ತುಂಬಾಲಾರದ ನಷ್ಟವಾಗಿದೆ ಎಂದು ಶ್ರದ್ಧಾಂಜಲಿ ಸಲ್ಲಿಸುವ ವೇಳೆ ಹಂಪನಗೌಡ ಬಾದರ್ಲಿ ಯವರು ಅವರನ್ನು ನೆನೆದರು.
ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಾಲಯದಲ್ಲಿ ಇಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಪಾಟೀಲ್ ಅಧ್ಯಕ್ಷರು ನಗರಸಭೆ, ಖಾಜಿಮಲ್ಲಿಕ್ ಅಧ್ಯಕ್ಷರು ನಗರ ಬ್ಲಾಕ್ ಕಾಂಗ್ರೆಸ್,ಅನಿಲ್ ಕುಮಾರ್.ವೈ ಪ್ರಧಾನ ಕಾರ್ಯದರ್ಶಿ ಬ್ಲಾಕ್ ಕಾಂಗ್ರೆಸ್, ಮುರ್ತುಜಾ ಹುಸೇನ್ ಉಪಾಧ್ಯಕ್ಷರು ನಗರಸಭೆ, ನಗರಸಭಾ ಸದಸ್ಯರಾದ ಛತ್ರಪ್ಪ.ಕೆ, ವೆಂಕಟೇಶ ದತ್ತುರಾವ್, ಶೇಕರಪ್ಪ ಗಿಣಿವಾರ, ಪ್ರಭುರಾಜ, ತಿಮ್ಮಯ್ಯ ಭಂಗಿ, ಆಲಂಭಾಷಾ, ಮೈಹಿಬೂಬ್, ಮುನೀರ್ ಪಾಷಾ, ಹೆಚ್.ಭಾಷಾ, ಸುರೇಶ ಜಾದವ್, ವೀರೇಶ ಹಟ್ಟಿ, ಚಂದ್ರಶೇಖರ ಮೇಟಿ, ಕೆ.ರಾಜಶೇಖರ, ಶಬ್ಬೀರ ನಾಯ್ಕ್ ಸೇರಿದಂತೆ ಇನ್ನು ಮುಂತಾದವರು ಭಾಗವಹಿಸಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
