ಅಗಲಿದ ಕಾಂಗ್ರೆಸ್ಹಿರಿಯ ನಾಯಕ ಶ್ರೀ ಆಸ್ಕರ್ಫರ್ನಾಂಡಿಸ್ಅವರಿಗೆ ಗೌರವಪೂರ್ಣ ಶ್ರದ್ಧಾಂಜಲಿ
ಇಂದು ದಿನಾಂಕ 14/09/2021 ರಂದು ಹರಪನಹಳ್ಳಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಅಗಲಿದ ಕಾಂಗ್ರೆಸ್ ಹಿರಿಯ ನಾಯಕ *ಶ್ರೀ ಆಸ್ಕರ್ ಫರ್ನಾಂಡಿಸ್* ಅವರ ಶ್ರದ್ಧಾಂಜಲಿ ಸಭೆ ನೆರೆವೇರಿಸಿ *ಎಂಪಿ ವೀಣಾ ಮಹಾಂತೇಶ್* ಅವರು ಗೌರವ ನಮನಗಳನ್ನು ಸಲ್ಲಿಸದರು
ಕೇಂದ್ರದ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ (80) ಸೋಮವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ ಭಾನುವಾರ ಮನೆಯಲ್ಲಿ ಜಾರಿ ಬಿದ್ದು ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರವಾಗಿ ತಲೆಗೆ ಪೆಟ್ಟಾಗಿದ್ದರಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.
ಆಸ್ಕರ್ ಫರ್ನಾಂಡಿಸ್ ಯುಪಿಎ ಸರ್ಕಾರದ ಆಡಳಿತದ ಅವಧಿಯಲ್ಲಿ ಕೇಂದ್ರ ಮಂತ್ರಿಯಾಗಿದ್ದರು. ರಸ್ತೆ, ಸಾರಿಗೆ, ಹೆದ್ದಾರಿ ಮತ್ತು ಕಾರ್ಮಿಕ ಸಚಿವರಾಗಿಯೂ ಕೆಲಸ ಮಾಡಿದ್ದರು. ರಾಜೀವ್ ಗಾಂಧಿ ಜೊತೆಗೆ ಸಂಸತ್ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು. 1980ರಿಂದ 1996ರ ವರೆಗೆ ಕರ್ನಾಟಕದ ಉಡುಪಿ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ಆಯ್ಕೆ ಆಗಿದ್ದರು. 1998ರಲ್ಲಿ ಹಾಗೂ 2004ರಲ್ಲಿ ರಾಜ್ಯಸಭೆಗೂ ಆಯ್ಕೆ ಆಗಿದ್ದರು.
ಈ ಸಂದರ್ಭದಲ್ಲಿ ಹರಪನಹಳ್ಳಿ ಕಾಂಗ್ರೆಸ್ ಕಚೇರಿಯಲ್ಲಿ ಒಂದು ನಿಮಿಷದ ಮೌನಾಚರಣೆ ಮಾಡಿ ಗಣ್ಯರಿಗೆ ಶ್ರದ್ದಾಂಜಲಿಯನ್ನು ಅರ್ಪಿಸಲಾಯಿತು .
*ಶ್ರೀಮತಿ ಎಂಪಿ ವೀಣಾ ಮಹಾಂತೇಶ್ ಅವರು ನುಡಿನಮನ ಸಲ್ಲಿಸಿ ಆಸ್ಕರ್ ಫರ್ನಾಂಡಿಸ್ ಅವರ ಜೊತೆಯಿದ್ದ ತಮ್ಮ ಮತ್ತು ತಂದೆ ಎಂಪಿ ಪ್ರಕಾಶರ ಒಡನಾಟದ ಕೆಲವು ನೆನಪುಗಳನ್ನು ಮೆಲಕು ಹಾಕಿದರು*.
ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಲೂರು ಅಂಜಪ್ಪ ಮತ್ತು ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರೇಮ್ ಕುಮಾರ್ ಹಾಗೂ ಮಾನವ ಹಕ್ಕು ಆಯೋಗಗಳ ಉಪಾಧ್ಯಕ್ಷರಾದ ಸಿದ್ದಲಿಂಗನಗೌಡ ಮತ್ತು ಗ್ರಾಮ ಪಂಚಾಯತಿ ಸದಸ್ಯರಾದ ಬಸವರಾಜ್, ಶ್ರೀ ಜೀತಾ ನಾಯ್ಕ್ ಶ್ರೀ ಉಮೇಶ್ ನಾಯ್ಕ, ಮಾನಸ ಬಸಯ್ಯ, ಶ್ರೀ ಕೃಷ್ಣ ಶ್ರೀ ದಾದಾಪೀರ ಮಕರಬ್ಬಿ ಹರಪನಹಳ್ಳಿ ಬ್ಲಾಕ್ ಯುವ ಉಪಾಧ್ಯಕ್ಷರು , ಶ್ರೀ ಮಂಜುನಾಥ ಸಿ ಹರಪನಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಶ್ರೀಮತಿ ಸೋನಿಯಾ ಗಾಂಧಿ ಬ್ರಿಗೇಡ್ ಪ್ರಧಾನ ಕಾರ್ಯದರ್ಶಿಯಾದ ಗಾಯತ್ರಿದೇವಿ ,ಶ್ರೀ ತಳವಾರ್ ಕಾರ್ತಿಕ್, ಶ್ರೀ ಗುರು ಬಸವರಾಜ್, ಶ್ರೀ ಅರುಣ್ ಕುಮಾರ್, ಶ್ರೀ ಪ್ರಜ್ವಲ್ ಕುಮಾರ್, ಶ್ರೀ ಹರ್ಷಿತ್ ,ಶ್ರೀ ಬಳಗನೂರ್ ಕರೀಂ ಸಾಬ್ , ಹುಣಸೆಹಳ್ಳಿ ಸುರೇಶ್, ಸಂತೋಷ್ ಗರ್ಭಗುಡಿ ಕೊಟ್ರೇಶ್, ಬಾಗಳಿ ರಮೇಶ್, ಸಾಸ್ವೆಹಳ್ಳಿ ನಾಗರಾಜ್ ಗಂಗಜ್ಜಿ ,ಗೌರಿಪುರ ಮದನಪ್ಪ ಚಿರಸ್ಥಹಳ್ಳಿ ,ಟಿ ಮಲ್ಲಿಕಾರ್ಜುನ್, ಬಸವನಾಳ ಪಿ ಸಂತೋಷ್ ,ಶ್ರೀಮತಿ ರೂಪ, ಶೃಂಗಾರ ತೋಟ ರವಿಚಂದ್ರನ್ ,ನಿಲವಂಜಿ ಬಸವಲಿಂಗಪ್ಪ ,ನಾಗರಾಜ್ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು….

ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
