ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮದ ಸವಿನೆನಪು ಯುವಕರ ಬಳಗದಿಂದ ಪ್ರತಿಷ್ಠಾಪಿಸಿದ್ದ ಗಣೇಶನ ಮೂರ್ತಿಯನ್ನು ತಮಟೆ ವಾದ್ಯಗಳೊಂದಿಗೆ ಬೀದಿಯಲ್ಲಿ ಮೆರವಣಿಗೆ, ಕೋವಿಡ್ ಕಾರಣ ಮತ್ತು ಸರ್ಕಾರ ಕಟ್ಟುನಿಟ್ಟಿನ ಕ್ರಮಗಳ ಹಿನ್ನೆಲೆಯಲ್ಲಿ ಅದ್ದೂರಿ ಗಣೇಶ ಹಬ್ಬಕ್ಕೆ ಗ್ರಾಮದಲ್ಲಿ ಬ್ರೇಕ್ ಬಿದ್ದಿದ್ದು ಕೋವಿಡ್ ನಿಯಮವನ್ನು ಪಾಲಿಸಿ ಸಾಂಕೇತಿಕವಾಗಿ ಗ್ರಾಮದಲ್ಲಿ ಸಾಂಪ್ರದಾಯಿಕವಾಗಿ ಎತ್ತಿನ ಬಂಡಿಯಲ್ಲಿ ಗಣೇಶನ ಕೂರಿಸಿಕೊಂಡು ಎತ್ತಿನಗಾಡಿಗೆ ಹೂವುಗಳಿಂದ ಸಿಂಗರಿಸಿ ಸರಳವಾಗಿ ಮೆರವಣಿಗೆ ಮೂಲಕ ವಿಸರ್ಜನೆ ಮಾಡಲಾಯಿತು. ಈ ಆಚರಣೆಯಲ್ಲಿ ಈಶ್ವರ, ಕಾರ್ತಿಕ್, ನವೀನ್, ಶರಣೆ, ರಮೇಶ್, ಸಿದ್ದೇಶ್, ತಿಪ್ಪೇಶ್, ಮಹಾಂತೇಶ್, ಬಾಬು, ಸೇರಿದಂತೆ ಯುವಕರು ಉಪಸ್ಥಿತರಿದ್ದರು…

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
