ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕು ಎಂ,ಬಿ,ಅಯ್ಯನಹಳ್ಳಿ ಗ್ರಾಮದಲ್ಲಿ ಗಣೇಶನ ಮೂರ್ತಿಯನ್ನು ಇವತ್ತೇ ವಿಸರ್ಜನೆ ಮಾಡಬೇಕೆಂದು ಬಾಲಕರು ಕೆರೆಯಲ್ಲಿ ತೆಗೆದುಕೊಂಡು ಹೋಗುವಾಗ ಕೆರೆಗೆ ಹೋದನಂತರ ಗಣೇಶ ಮೂರ್ತಿಯನ್ನು,ಹಾಕುವಾಗ ಅದರಲ್ಲಿ ಒಂದು ಕೃಷಿ ಹೊಂಡದ ರೀತಿಯಯಲ್ಲಿ ಧನ ಕುರಿಗಳಿಗೆ ನೀರಿನ ಒಂದು ಉಪಯೋಗಕ್ಕಾಗಿ ನಿರ್ಮಾಣ ಮಾಡಿರುತ್ತಾರೆ.ಎಂದು ತಿಳಿದುಬಂದಿದೆ ಕೃಷಿ ಹೊಂಡದಲ್ಲಿ ಗಣೇಶ ಮೂರ್ತಿಯನ್ನು ಹಾಕುವಾಗ ಅದರಲ್ಲಿ ಇಳಿಯುವಾಗ ಕೆಸರಿನಲ್ಲಿ ಸಿಕ್ಕಿ ಕೊಂಡು ಹೊರಗೆ ಬರದೆ ಸಂತೋಷ್ 10 ವರ್ಷದ ಎಂಬ ಹೆಸರಿನ ಬಾಲಕ ಸಾವನ್ನಪ್ಪಿದ್ದಾನೆ. ಹಾಗೂ ತಾಯಿ ಕಾವ್ಯರವರು ಶಾಲೆಯಲ್ಲಿ ಬಿಸಿಯೂಟದ ಕೆಲಸ ಮಾಡುತ್ತಿರುವರು ಎಂದು ವರದಿಯಾಗಿದೆ, ಒಬ್ಬನೇ ಮಗನನ್ನು ಕಳೆದುಕೊಂಡ ತಾಯಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು ಪ್ರಕರಣವನ್ನು ತಿಳಿದು ಹತ್ತಿರದ ಕಾನಹೋಸಹಳ್ಳಿ ಪೊಲೀಸ್ ಠಾಣಾ ಸಿಬ್ಬಂದಿಗಳು ಸ್ಥಳ ವೀಕ್ಷಣೆ ಮಾಡಿದರು ಎಂದು ಮೂಲಗಳಿಂದ ತಿಳಿದುಬಂದಿದೆ…

ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
